spot_img
Wednesday, January 22, 2025
spot_img

ಕುಂದಾಪುರದಲ್ಲಿ ಸುಸಜ್ಜಿತ ಮೊಗವೀರ ಭವನ ನಿರ್ಮಾಣ: ಜ.22ರಂದು ಉದ್ಘಾಟನೆ

ಕುಂದಾಪುರ: ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿ ಮುಂಬೈ, ಕುಂದಾಪುರ ಶಾಖೆ ನೇತೃತ್ವದಲ್ಲಿ ಸಮಾಜದ ಸ್ವಾಭಿಮಾನದ ಪ್ರತೀಕವಾಗಿ ಕುಂದಾಪುರದಲ್ಲಿ ಚಿಕನ್‌ಸಾಲ್ ರಸ್ತೆಯಲ್ಲಿ ಪ್ರಸ್ತುತ ಜನರ ಅಭಿರುಚಿ, ಬೇಡಿಕೆ, ಆಧುನಿಕತೆಗೆ ಅನುಗುಣವಾಗಿ ಸುಮಾರು 10 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಸಭಾಭವನ ನಿರ್ಮಾಣ ಮಾಡಲಾಗಿದ್ದು ಜ.22ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷರು ಆಗಿರುವ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಅವರು ಬುಧವಾರ ನೂತನ ಮೊಗವೀರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 60,000 ಚದರ ಅಡಿ ವಿಸ್ತಿರ್ಣದ ಕಟ್ಟಡ ವ್ಯವಸ್ಥಿತ ಮಾದರಿಯಲ್ಲಿ, ವಾಸ್ತು ವಿನ್ಯಾಸದೊಂದಿಗೆ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ಸಭಾಭವನ ಮೂರು ಮಹಡಿಗಳನ್ನು ಹೊಂದಿದೆ. ಮೂರನೇ ಮಹಡಿಯಲ್ಲಿ ಪೂರ್ವಾಭಿಮುಖವಾಗಿ ಸಭಾ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಾಕಷ್ಟ್ಟು ವಿಶಾಲವಾದ ಸಭಾಮಂಟಪ, ಎದುರಿಗೆ ವಿಶಾಲವಾದ ಸಭಾಂಗಣದಲ್ಲಿ 850 ಜನ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಹೊರಭಾಗದಲ್ಲಿ ವಿಶಾಲ ಕಾರಿಡಾರ್ ವ್ಯವಸ್ಥೆ ಇರುತ್ತದೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಭೋಜನಾಲಯ ನಿರ್ಮಾಣವಾಗಿದೆ. ಏಕಕಾಲಕ್ಕೆ ಸುಮಾರು 450 ಜನ ಕುಳಿತು ಹಾಗೂ ಬಫೆಯಲ್ಲಿ ಊಟ ಮಾಡಬಹುದಾಗಿದೆ. ಇದಕ್ಕೆ ಪೂರಕವಾಗಿ ಅತ್ಯಾಧುನಿಕ ಮಾದರಿಯ ಅಡುಗೆ ಮನೆ, ಸಸ್ಯಹಾರ ಮತ್ತು ಮಾಂಸಹಾರಕ್ಕೆ ಪ್ರತ್ಯೇಕ ಪಾತ್ರೆಗಳು ಹಾಗೂ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ, ಸುಸಜ್ಜಿತ ಉಗ್ರಾಣ ಕೋಣೆ. ಎರಡು ಲಿಪ್ಟ್ ವ್ಯವಸ್ಥೆ, ಹಾಗೆಯೇ ಎರಡು ಕಡೆಗಳಲ್ಲಿ ಮೆಟ್ಟಿಲು ವ್ಯವಸ್ಥೆಯೂ ಇರುತ್ತದೆ. ಸರಕಾರ, ದಾನಿಗಳು, ಮೊಗವೀರ ಸಮಾಜದ ಸಮಸ್ತರ ಆರ್ಥಿಕ ಸಹಕಾರದಿಂದ ಮೊಗವೀರ ಭವನ ನಿರ್ಮಾಣವಾಗಿದೆ ಎಂದರು.

ಮೊಗವೀರ ಭವನದ ಉಳಿತಾಯದಲ್ಲಿ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಗುರಿಕಾರರಿಗೆ ಸಹಕಾರ, ಇತ್ಯಾದಿಗಳಿಗೆ ವಿನಿಯೋಗಿಸಲಾಗುವುದು. ಸಮಾಜದ ಅಭಿವೃದ್ದಿಗಾಗಿ ಮೊಗವೀರ ಭವನ ನಿರ್ಮಾಣವಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಗೌರವಾಧ್ಯಕ್ಷರಾದ ಸುರೇಶ್ ಆರ್ ಕಾಂಚನ್, ಕುಂದಾಪುರ ಶಾಖಾ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ನಿಕಟಪೂರ್ವಧ್ಯಕ್ಷರಾದ ಕೆ.ಕೆ ಕಾಂಚನ್, ಮಾಜಿ ಅಧ್ಯಕ್ಷರಾದ ಎಂ.ಎಂ.ಸುವರ್ಣ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಕೋಶಾಧಿಕಾರಿ ಸುಧಾಕರ ಕಾಂಚನ್ ಉಪಸ್ಥಿತರಿದ್ದರು.

ತಳ ಅಂತಸ್ತು, ಪ್ರಥಮ ಮಹಡಿ ಪಾರ್ಕಿಂಗ್‌ಗೆ ಮೀಸಲು:
ಸಭಾಭವನದ ತಳ ಅಂತಸ್ತು ಮತ್ತು ಪ್ರಥಮ ಮಹಡಿಯನ್ನು ಸಂಪೂರ್ಣ ವಾಹನ ನಿಲುಗಡೆಗೇ ಮೀಸಲಿಡಲಾಗಿದೆ. ತಳ ಅಂತಸ್ತಿನಲ್ಲಿ ಕನಿಷ್ಠ 80 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಪ್ರಥಮ ಮಹಡಿಯನ್ನು ಕೂಡಾ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 160ಕ್ಕೂ ಮಿಕ್ಕಿ ಕಾರುಗಳನ್ನು ನಿಲ್ಲಿಸಬಹುದಾಗಿದೆ. ಎದುರು ಪಾರ್ಶ್ಚದಲ್ಲಿ ಬಸ್ ಇತರ ವಾಹನಗಳು ನಿಲ್ಲಲು ಸ್ಥಳವಕಾಶ ಇದೆ. ಚಿಕನ್ಸಾಲು ರಸ್ತೆ ಅಗಲೀಕರಣವಾದರೂ ಸಭಾಭವನದ ಎದುರಿನ ಪಾರ್ಕಿಂಗ್ ಪ್ರದೇಶಕ್ಕೆ ತೊಂದರೆ ಇಲ್ಲ.

ಪಾರ್ಕಿಂಗ್‌ಗಾಗಿಯೇ ಸ್ಥಳ ಖರೀದಿ:
ಈಗಾಗಲೇ 160ಕ್ಕೂ ಹೆಚ್ಚು ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಲ್ಲದೇ ಈಗ ಪಾರ್ಕಿಂಗ್ ವ್ಯವಸ್ಥೆಗಾಗಿಯೇ ಸಭಾಭವನದ ಹತ್ತಿರದ28 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲಾಗಿದೆ. ಈಗ ಖರೀದಿ ಮಾಡಲಾದ ಸ್ಥಳ ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಾಗಲಿದೆ.

ಪ್ರಸನ್ನ ಗಣಪತಿ ಮಂದಿರ:
ಮದುವೆ ಮತ್ತಿತ್ತರ ಶುಭ ಕಾರ್ಯಕ್ರಮಗಳು ನಡೆಯುವಾಗ ಸ್ಥಳದಲ್ಲಿ ಧಾರ್ಮಿಕವಾಗಿ ವಿಶೇಷ ಮಹತ್ವಿಕೆ ಇರುತ್ತದೆ. ಮೊಗವೀರ ಸಮಾಜ ಧಾರ್ಮಿಕ ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ ನೀಡಿದೆ. ಹಾಗೆಯೇ ಮೊಗವೀರ ಭವನದ ಪ್ರವೇಶಧ್ವಾರದ ಪಕ್ಕದಲ್ಲಿ ಪ್ರಸನ್ನ ಗಣಪತಿ ಮಂದಿರ ನಿರ್ಮಾಣ ಮಾಡಲಾಗಿದೆ. ಗಣಪತಿಯ ಶಿಲಾ ವಿಗ್ರಹಕ್ಕೆ ರಜತ ಕವಚ ಸಮರ್ಪಿಸಲಾಗಿದೆ. ಧಾರ್ಮಿಕವಾಗಿಯೂ ಮೊಗವೀರ ಭವನ ವಿಶೇಷ ಮಹತ್ವಿಕೆ ಪಡೆದುಕೊಂಡಿದೆ.

ಮೊಗವೀರ ಭವನದ ವಿಶೇಷತೆಗಳು:
*ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ
*ಎರಡು ಲಿಪ್ಟ್ ವ್ಯವಸ್ಥೆ
*850 ಜನ ಸಾಮಾರ್ಥ್ಯದ ಸಭಾಂಗಣ
*450-500 ಜನ ಸಾಮಾರ್ಥ್ಯದ ಭೋಜನಾಲಯ
*ಬಫೆಗೆ ಪ್ರತ್ಯೇಕ ಕೌಂಟರ್
*ಸಸ್ಯಹಾರಿ-ಮಾಂಸಹಾರಕ್ಕೆ ಪ್ರತ್ಯೇಕ ಅಡುಗೆಮನೆ
*ಮಿನಿಹಾಲ್ ಸೌಲಭ್ಯ
*ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ

ಜ.22ರಂದು ಮೊಗವೀರ ಭವನ ಉದ್ಘಾಟನೆ
ಜ.22ರಂದು ಬೆಳಿಗ್ಗೆ 10-30ಕ್ಕೆ ಮೊಗವೀರ ಭವನ ಉದ್ಘಾಟನೆ ನೆರವೇರಲಿದೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷರು ಆಗಿರುವ ನಾಡೋಜ ಡಾ|ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೊಗವೀರ ಭವನವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲಿದ್ದಾರೆ.

ಶ್ರೀ ಮಹಿಷಾಸುರಮರ್ದಿನಿ ಸಭಾಂಗಣವನ್ನು ಮೀನುಗಾರಿಕೆ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅಮ್ಮ ಮಿನಿಹಾಲ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಅನ್ನಪೂರ್ಣೇಶ್ವರಿ ಭೋಜನಾಲಯ ಉದ್ಘಾಟನೆ ಮಾಡಲಿದ್ದಾರೆ. ಕಛೇರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಲಿಫ್ಟ್ ವ್ಯವಸ್ಥೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸುವರು. ಪಾಕಶಾಲೆಯನ್ನು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶ್ರೀಮತಿ ಶಾಲಿನಿ ಡಾ|ಜಿ.ಶಂಕರ್ ವೇದಿಕೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಉದ್ಯಮಿ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳು, ಉದ್ಯಮಿಗಳು, ಯುವ ಸಂಘಟನೆಯ ಅಧ್ಯಕ್ಷರುಗಳು ಆಗಮಿಸಲಿದ್ದಾರೆ.

ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಮುಂಬೈ ಇದರ ಮಾಜಿ ಅಧ್ಯಕ್ಷರಾದ ರಮೇಶ ಬಂಗೇರ, ಮಹಾಬಲ ಎಂ.ಕುಂದರ್, ಎನ್.ಎಚ್ ಬಗ್ವಾಡಿ, ಎನ್.ಡಿ ಚಂದನ್, ಕರುಣಾಕರ ಜಿ.ಪುತ್ರನ್, ಎಂ.ವಿ.ಹೊಳ್ಮಗೆ, ನಾಗೇಶ್ ಎನ್.ಪುತ್ರನ್, ರತ್ನಾಕರ ಎನ್.ನಾಯ್ಕ್, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಬಿ.ಹೆರಿಯಣ್ಣ, ಶಿವರಾಮ ಪುತ್ರನ್, ಮಂಜುನಾಯ್ಕ್ ಗುಜ್ಜಾಡಿ, ಸ್ಥಳೀಯ ಸಮಿತಿ ಥಾಣೆಯ ಅಧ್ಯಕ್ಷ ಗೋಪಾಲ ಚಂದನ್, ದೊಂಬಿವಲಿ ಸಮಿತಿ ಅಧ್ಯಕ್ಷ ಭಾಸ್ಕರ ಕಾಂಚನ್, ಮೀರಾರೋಡ್ ಸಮಿತಿ ಅಧ್ಯಕ್ಷ ರಘುರಾಮ ಚಂದನ್, ಮುಂಬೈ ಮಹಿಳಾ ವಿಭಾಗದ ಅಧ್ಯಕ್ಷೆ ಡಾ|ಸುದೀಪ್ ಮಹಾಬಲ ಕುಂದರ್, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಚೇತನ್ ಜಿ., ಶಿವಮೊಗ್ಗ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಣ್ಣಪ್ಪ, ಸಾಗರ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಚಂದ್ರ ಮೊಗವೀರ, ತೀರ್ಥಹಳ್ಳಿ ಮೊ.ಮ. ಸಂಘದ ಅಧ್ಯಕ್ಷ ಸಂಪುಗುಡ್ಡೆ ರಾಘವೇಂದ್ರ, ಚಿಕ್ಕಮಗಳೂರು ಮೊ.ಮ.ಸಂಘದ ಅಧ್ಯಕ್ಷ ಬಿ.ನಾರಾಯಣ, ಕರಾವಳಿ ಮೊ.ಸಂ.ಅಧ್ಯಕ್ಷ ರತ್ನಾಕರ ಕುಂದಾಪುರ, ಮೊಗವೀರ ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಅಧ್ಯಕ್ಷೆ ಸುಮಿತ್ರಾ ಅನಂದ ಮೊಗವೀರ, ಮುಂಬೈ ಹೈಕೋರ್ಟ್ ವಕೀಲರಾದ ಚಂದ್ರ ಕೆ.ನಾಯ್ಕ್, ಮುಂಬೈ ಉದ್ಯಮಿ ಕಿಶೋರ್ ಎಂ.ಬಂಗೇರ, ಪ್ರದೀಪ ಚಂದನ್, ಶ್ರೀನಿವಾಸ ಕಾಂಚನ್, ಸಂತೋಷ್ ಕೆ.ಪುತ್ರನ್, ರಾಜೀವ್ ಚಂದನ್, ಗಣೇಶ ಮೆಂಡನ್, ಸುಚಿತ್ರಾ ಎಸ್.ಪುತ್ರನ್, ಮುಂಬೈ ನ್ಯಾಯವಾದಿ ವಸಂತಿ ಕುಂದರ್, ಬೆಂಗಳೂರು ಉದ್ಯಮಿಗಳಾದ ಶಂಕರ್ ಕುಂದರ್, ಬಸವರಾಜ್, ನಾರಾಯಣ ರಾವ್, ನರಸಿಂಹ ಬಿ.ಎನ್.ಬೀಜಾಡಿ, ಸುಧಾಕರ ಕಾಂಚನ್, ಪುರಸಭೆ ಸದಸ್ಯರಾದ ಸಂತೋಷ್ ಶೆಟ್ಟಿ, ಹೆಮ್ಮಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷ ಭಾಸ್ಕರ ಕೆ.ನಾಯ್ಕ, ಬೀಜಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷೆ ರತ್ನ ಮೊಗವೀರ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9-30ರಿಂದ 10-15ರ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಪ್ರವಿತಾ ಅಶೋಕ್ ಅವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ, ಮಧ್ಯಾಹ್ನ 12-30ರಿಂದ 3ಗಂಟೆಯ ತನಕ ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ x ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಕು|ಸಮೃದ್ಧಿ ಇವರಿಂದ ಯಕ್ಷ ನೃತ್ಯ, ಮಧ್ಯಾಹ್ನ 3 ಗಂಟೆಯಿಂದ ಕಾಂಚನಿ ಕಲಾಕೇಂದ್ರ ಮುಂಬೈ ಇವರ ಪ್ರಾಯೋಜಕತ್ವದಲ್ಲಿ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ದಾನಶೂರ ಕರ್ಣ ಪ್ರದರ್ಶನಗೊಳ್ಳಲಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!