spot_img
Wednesday, January 22, 2025
spot_img

ಚಂದ್ರಶೇಖರ ನಾವಡರ ‘ಸೈನಿಕನ ಆಂತರ್ಯದ ಪಿಸುನುಡಿ’ ಕೃತಿ ಲೋಕಾರ್ಪಣೆ

ಬೈಂದೂರು: ಸೇನೆ ಮತ್ತು ಸೈನಿಕರ ಬದುಕಿನ ಕುರಿತು ಸಾಮಾನ್ಯ ಜನರಲ್ಲಿ ಮಾಹಿತಿ ಕೊರತೆ ಇದೆ. ಸೈನಿಕರ ತ್ಯಾಗದಿಂದ ನಾವು ಸುರಕ್ಷಿತವಾಗಿದ್ದೇವೆ. ಸೈನಿಕರು ನಮ್ಮ ಬದುಕಿಗೆ ಹೇಗೆ ಶ್ರೀರಕ್ಷೆಯಾಗಿದ್ದಾರೆ ಎನ್ನುವುದನ್ನು ತಿಳಿಸುವಲ್ಲಿ ‘ಸೈನಿಕನ ಆಂತರ್ಯದ ಪಿಸುನುಡಿ’ಯಂತಹ ಕೃತಿ ಸಹಾಯಕವಾಗಬಲ್ಲದು ಎಂದು ಉಪ್ಪುಂದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.

ಅವರು ಬೈಂದೂರು ಸಮೀಪದ ವತ್ತಿನಕಟ್ಟೆ ಮಹಾಸತಿ ದೇವಳದ ಪ್ರಾಂಗಣದಲ್ಲಿ ಚಂದ್ರಶೇಖರ ನಾವಡರ ‘ಸೈನಿಕನ ಆಂತರ್ಯದ ಪಿಸುನುಡಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕೃತಿ ಪರಿಚಯ ಮಾಡಿದ ಲೇಖಕಿ ಪೂರ್ಣಿಮಾ ಭಟ್ ಕಮಲಶಿಲೆ, ಸೈನ್ಯ ತರಬೇತಿಯ ಕಠಿಣತೆ, ಸೈನಿಕರ ದೈನಂದಿನ ಚಟುವಟಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ರೋಚಕ ತಥ್ಯಗಳನ್ನು ಕಟ್ಟಿಕೊಡುವ ನಾವಡರ ಕೃತಿಯನ್ನು ಪ್ರತಿಯೋರ್ವ ದೇಶಭಕ್ತರೂ ವಿಶೇಷವಾಗಿ ಯುವಕರು ಓದಬೇಕು ಎಂದು ಅಭಿಪ್ರಾಯ ಪಟ್ಟರು.

ಕೃತಿಕಾರ ಚಂದ್ರಶೇಖರ ನಾವಡರು ಮಾತನಾಡಿ, ತಳಹಂತದ ಸಾಮಾನ್ಯ ಸೈನಿಕರ ಬದುಕಿನ ನೈಜ ಚಿತ್ರಣ ಸಾಮಾನ್ಯರಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಈ ಕೃತಿಯನ್ನು ರಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯ ಸಾಲಿಗ್ರಾಮದ ಆನರರಿ ಲೆಫ್ಟಿನೆಂಟ್ ಗಣೇಶ ಅಡಿಗರನ್ನು ಸನ್ಮಾನಿಸಲಾಯಿತು. ದೇವಳದ ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ಕಸಪಾ ಅಧ್ಯಕ್ಷ ಡಾ.ರಘು ನಾಯ್ಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇ ಮೂ ಕೃಷ್ಣಮೂರ್ತಿ ನಾವಡ ಮುಖ್ಯ ಅತಿಥಿಯಾಗಿದ್ದರು.

ಉಪನ್ಯಾಸಕ ಜಿ.ಬಿ ಪಾಂಡುರಂಗ ಕಾರ್‍ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!