spot_img
Wednesday, January 22, 2025
spot_img

ನಂಬಿಕೆ, ಆಸಕ್ತಿ, ತಾಳ್ಮೆಯಿಂದ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು-ಕೆ.ಜಯಪ್ರಕಾಶ್ ಹೆಗ್ಡೆ

ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ‘ವ್ಯವಹಾರದ ದಿನ

ಕುಂದಾಪುರ: ದೇಶದ, ರಾಜ್ಯದ ಆರ್ಥಿಕ ಸುಧಾರಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ ಮುಖ್ಯವಾದುದು. ವ್ಯವಹಾರೋದ್ಯಮ, ಕೃಷಿ, ಹೈನುಗಾರಿಕೆಯೂ ಕೂಡಾ ಇವತ್ತು ಲಾಭದಾಯಕ ಉದ್ಯಮವಲಯವಾಗಿ ಬೆಳೆದಿದೆ. ಮಾಡುವ ಕೆಲಸದಲ್ಲಿ ನಂಬಿಕೆ, ನಿರಂತರ ಕಲಿಕೆ, ತಾಳ್ಮೆ, ಶ್ರದ್ದೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯವಿದೆ. ಇವತ್ತಿನ ಕಾಲಘಟ್ಟಕ್ಕೆ ವಿದ್ಯಾರ್ಥಿಗಳಿಗೆ ವ್ಯವಹಾರ ಕ್ಷೇತ್ರವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಸಿನೆಸ್ ಡೇ ಕಾರ್ಯಕ್ರಮ ಪ್ರಸ್ತುತ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬಿಸಿನೆಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾಭ್ಯಾಸದ ಬಳಿಕ ತಂದೆ ತಾಯಿಯ ದುಡಿಮೆಯಲ್ಲಿ ಅವಲಂತರಾಗದೇ ತಮ್ಮ ಕಾಲಮೇಲೆ ನಿಲ್ಲುವ ಬಗ್ಗೆ ಯೋಚನೆ ಮಾಡಬೇಕು. ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಬೇಕು. ವಾಣಿಜ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದರ ಸದ್ಭಳಕೆ ಮಾಡಿಕೊಳ್ಳಬೇಕು. ಒಂದು ಉತ್ಪನ್ನವನ್ನು ಪರಿಣಾಮಕಾರಿಯಾಗಿ ಗ್ರಾಹಕನ ಮುಂದೆ ಇಡುವುದು, ಮಾರುಕಟ್ಟೆಯ ಕೌಶಲ್ಯಗಳನ್ನು ಕರಗತ ಮಾಡಿಕೊಂಡು, ತಾಳ್ಮೆಯಿಂದ ಮುಂದುವರಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್ ಇದರ ಕಾರ್ಯದರ್ಶಿ ಬಿ.ಪಿ ವರದರಾಯ ಪೈ ಮಾತನಾಡಿ, ವ್ಯವಹಾರದಲ್ಲಿ ನಂಬಿಕೆ, ನಿರಂತರ ಪರಿಶ್ರಮ, ಗ್ರಾಹಕರ ಬೇಡಿಕೆ, ಅಭಿರುಚಿಗಳನ್ನು ಗಮನಿಸುತ್ತಿರುವುದು ಉದ್ಯಮಶೀಲತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿದಿಸೆಯಲ್ಲಿಯೇ ವ್ಯವಹಾರದ ಅನುಭವ ಒದಗಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ವೆಂಕಟರಮಣ ದೇವ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರಾದ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಪಾದನಾ ವಲಯ ಹೆಚ್ಚಾಗಿ ಬೆಳೆಯಬೇಕು. ನಮ್ಮ ದೇಶದಲ್ಲಿಯೇ ಹೆಚ್ಚು ಹೆಚ್ಚು ವಸ್ತುಗಳು ತಯಾರಾಗಬೇಕು. ವ್ಯವಹಾರ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದರು.

ವೇದಿಕೆಯಲ್ಲಿ ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್(ರಿ.) ಇದರ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಆಡಳಿತ ಮಂಡಳಿ ಟ್ರಸ್ಟಿ ರತ್ನಾಕರ ಶೆಣೈ, ಆಡಳಿತಾಧಿಕಾರಿ ಪ್ರಭಾಕರ್ ಶ್ಯಾನುಭೋಗ್, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲೆ ರಾಗಿಣಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಸವಿತಾ ರಮೇಶ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಸುಶಾಂತ್ ಎನ್ ನಾಯಕ್ ಅತಿಥಿಗಳ ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಲತಾ ಪೈ ದಾನಿಗಳ ಪಟ್ಟಿ ವಾಚಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ವಿಶ್ವೇಶ ನಾಯಕ್ ವಂದಿಸಿದರು.

ವೈವಿಧ್ಯಮಯ ಮಳಿಗೆಗಳು:
ವೆಂಕಟರಮಣ ಕಾಲೇಜಿನ ಪಿಯು ವಿದ್ಯಾರ್ಥಿಗಳು 33 ವಿವಿಧ ಮಳಿಗೆಗಳನ್ನು ತೆರೆದಿದ್ದರು. ಬೇರೆ ಬೇರೆ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಾಲ್ಕು ಮಳಿಗೆಗಳನ್ನು ತೆರೆದಿದ್ದರು. ಎರಡು ಕಡೆ ಸ್ಟಾಲ್‌ಗಳನ್ನು ಹಾಕಲಾಗಿದ್ದು, ನಡುವೆ ವ್ಯಾಪಾರ ನಡೆಸಲು ವಿಶಾಲ ಸ್ಥಳವಕಾಶ ನೀಡಲಾಗಿತ್ತು. ಸಿದ್ಧ ಆಹಾರ, ತಂಪು ಪಾನೀಯ, ಪಾಸ್ಟ್ ಪುಡ್, ಬೇಕರಿ ಉತ್ಪನ್ನ, ಹಣ್ಣು ಹಂಪಲು, ಬಟ್ಟೆ, ಲೇಖನ ಸಾಮಾಗ್ರಿ ಅಲ್ಲದೆ ವಿವಿಧ ಅದೃಷ್ಟದಾಟಗಳು, ಲಕ್ಕಿಗೇಮ್‌ಗಳ ಮಳಿಗೆಗಳು ಇದ್ದವು.
ಬಿಸಿನೆಸ್ ಡೇ ಉದ್ದೇಶ:
ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತರಗತಿಯಲ್ಲಿ ಅಭ್ಯಾಸ ಮಾಡುವುದರೊಂದಿಗೆ ಪ್ರಾಯೋಗಿಕ ಜ್ಞಾನ ವಿದ್ಯಾರ್ಥಿಗಳಿಗೆ ಅರಿವಾಗಬೇಕು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ತಂಡವನ್ನು ರಚನೆ ಮಾಡಿಕೊಂಡು ತಮ್ಮ ಅಭಿರುಚಿಗೆ ತಕ್ಕಂತೆ ಅಂಗಡಿಗಳನ್ನು ತೆರೆದು, ಸಣ್ಣ ಬಂಡವಾಳವನ್ನು ಹೂಡಿ ಲಾಭ ಪಡೆಯುವ ಬಗೆ, ಭಾವನಾತ್ಮಕ, ಸಾಮಾಜಿಕ ಸಂಬಂಧಗಳ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದು, ವಿದ್ಯಾರ್ಥಿಗಳ ಸೃಜನಶೀಲತೆಗೆ ಮೆರಗು ದೊರಕಿಸಲು, ಸ್ವ ಉದ್ಯೋಗದ ಕುರಿತು ಮಾಹಿತಿ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿದರೇ ಯಶಸ್ಸು ತಮ್ಮ ಕಡೆ ಒಲಿಯುತ್ತದೆ ಎನ್ನುವುದನ್ನು ಮನವರಿಕೆ ಮಾಡಿ ಕೊಡುವ ನಿಟ್ಟಿನಲ್ಲಿ ಬಿಸಿನಸ್ ಡೇ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ವ್ಯಾಪಾರ ಮಾಡಿ ಬಂದ ಲಾಭಾಂಶವು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕು ಎನ್ನುವ ದೃಷ್ಟಿಯಲ್ಲಿ ಕೈಗಾರಿಕೆಗಳಿಗೆ ಭೇಟಿ ಏರ್ಪಡಿಸಿ ಅವರ ಜ್ಞಾನ ವೃದ್ಧಿಯಾಗುವಂತೆ ನೋಡಿಕೊಳ್ಳುವುದು. ಆ ಮೂಲಕ ಪಟ್ಟ ಪರಿಶ್ರಮಕ್ಕೆ ಫಲ ದೊರೆಯುತ್ತದೆ ಕಾರ್ಯಕ್ರಮ ಆಯೋಜನೆಯ ಆಶಯವಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!