spot_img
Wednesday, January 22, 2025
spot_img

ಸಂತೋಷ್ ನೆಂಪು ನಿಧನ

ಕುಂದಾಪುರ: ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸಕ್ರಿಯ ಸದಸ್ಯ, ನೆಂಪು ವಿನಾಯಕ ಯುವಕ ಮಂಡಲದ ಮಾಜಿ ಅಧ್ಯಕ್ಷ, ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ಮಂಗಲಸನಕಟ್ಟೆ ನಿವಾಸಿ ಸಂತೋಷ್ ನೆಂಪು (39ವ) ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಪತ್ನಿ, ಪುತ್ರ, ತಂದೆ-ತಾಯಿಯನ್ನು ಅಗಲಿದ್ದಾರೆ.

ಶಿಕ್ಷಣದ ಬಳಿಕ ವಂಡ್ಸೆಯಲ್ಲಿ ಅಟೋರಿಕ್ಷಾ ಮಾಲಕರಾಗಿ ಜೀವನ ಆರಂಭಿಸಿದ ಅವರು ಬಳಿಕ ಮುಂಬಯಿಯಲ್ಲಿ ಒಂದಿಷ್ಟು ಕಾಲ ದುಡಿದು ಬಳಿಕ ಊರಿಗೆ ಆಗಮಿಸಿ ಸ್ವ ಉದ್ಯಮಗಳಲ್ಲಿ ತೊಡಗಿಸಿಕೊಂಡವರು. ಜನಾನುರಾಗಿಯಾಗಿದ್ದ ಉತ್ಸಾಹಿ ಯುವಕ ಸಂತೋಷ್ ಸಮಾಜಸೇವೆಯಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು, ನೆಂಪು ಯುವಕ ಮಂಡಲದ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದರು. ಮೊಗವೀರ ಯುವ ಸಂಘಟನೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಹಲವಾರು ಯುವಕರನ್ನು ತನ್ನೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಿದ್ದರು.

ಇವರ ನಿಧನಕ್ಕೆ ವಿನಾಯಕ ಯುವಕ ಮಂಡಲ, ಮೊಗವೀರ ಯುವ ಸಂಘಟನೆ, ಸ್ಥಳೀಯ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!