Sunday, September 8, 2024

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯ ಶರನ್ನವರಾತ್ರಿ ಸಂಪನ್ನ

ಕುಂದಾಪುರ: ‘ಪುಷ್ಪ ಪವಾಡ’ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸೆ.೨೬ರಿಂದ ಮೊದಲ್ಗೊಂಡು ಅ.5 ವಿಜಯ ದಶಮಿಯ ತನಕ ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದವು. ಬುಧವಾರ ವಿಜಯದಶಮಿಯ ಅಂಗವಾಗಿ ಕಾರ್ಯಕ್ರಮಗಳು ನಡೆದವು.

ಶರನ್ನವರಾತ್ರಿಯ ಪ್ರತಿದಿನವೂ ಶ್ರೀ ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ದೇವಿಗೆ ವಿವಿಧ ಪೂಜೆ, ಹರಕೆಗಳನ್ನು ಸಮರ್ಪಿಸಿ ಪುನೀತರಾದರು. ಪ್ರತಿ ದಿನ ಬೆಳಿಗ್ಗೆ ದುರ್ಗಾ ಹೋಮ, ಚಂಡಿಕಾ ಹೋಮ ನಡೆಯಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನವೂ ಮಧ್ಯಾಹ್ನ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ನವರಾತ್ರಿ ವಿಶೇಷ ಪೂಜೆ ನಡೆಯಿತು.

ವಿಜಯದಶಮಿಯ ಅಂಗವಾಗಿ ಬುಧವಾರ ಮಹಾನೈವೇಧ್ಯ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪುಷ್ಪರಥೋತ್ಸವ ನಡೆಯಿತು.
ಭಜನಾ ಕಾರ್ಯಕ್ರಮ:
ಶರನ್ನವರಾತ್ರಿಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ನಿತ್ಯವೂ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ವೀರಾಂಜನೆಯ ಭಜನಾ ಮಂಡಳಿ ಗುಲ್ವಾಡಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸೌಕೂರು, ನಮ್ಮ ಶಕ್ತಿ ಭಜನಾ ಮಂಡಳಿ ಕಾಳಾವರ, ಶ್ರೀ ಕನ್ನಿಕಾ ವಿದ್ಯಾಭಾರತಿ ಭಜನಾ ಮಂಡಳಿ ಕಂಡ್ಲೂರು, ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಗಜಪುರ ಅನಗಳ್ಳಿ, ಶ್ರೀ ಶಿವಶಂಕರಿ ಭಜನಾ ಮಂಡಳಿ ಸೌಕೂರು, ಗುಲ್ವಾಡಿ, ಶ್ರೀ ಚಿಕ್ಕಮ್ಮ ಭಜನಾ ಮಂಡಳಿ ಕುಂದಾಪುರ, ಆಗಸ್ತ್ರ್ಯೇರ ಭಜನಾ ಮಂಡಳಿ ಕಿರಿಮಂಜೇಶ್ವರ, ಸ್ವಾಮಿ ಭಜನಾ ಮಂಡಳಿ ಹಂದಕುಂದ ನೇರಳಕಟ್ಟೆ, ಶ್ರೀ ಲಕ್ಷ್ಮೀ ಭಜನಾ ಮಂಡಳಿ ಜಾಡ್ಕಟ್ಟು ನೇರಳಕಟ್ಟೆ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ದೇವಲ್ಕುಂದ, ಶ್ರೀರಾಮ ಭಜನಾ ಮಂಡಳಿ ಆರಾಟೆ, ಹೊಸಾಡು ಮೊದಲಾದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದಲ್ಲಿ ಶರನ್ನವರಾತ್ರಿಯನ್ನು ವಿಶೇಷವಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ವಿಶೇಷವಾಗಿ ಶ್ರೀ ಕ್ಷೇತ್ರದಲ್ಲಿ ಶರನ್ನವರಾತ್ತಿಯ ಪ್ರಯುಕ್ತ ಚಂಡಿಕಾ ಯಾಗವೂ ಸಂಪನ್ನಗೊಂಡಿತು. ನಿತ್ಯವೂ ನವರಾತ್ರಿಯ ವಿಶೇಷವಾಗಿ ಅನ್ನಸಂತರ್ಪಣೆ ಸೇವಾಕರ್ತರ ಮೂಲಕ ನೆರವೇರಿತು.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅನಂತ ಅಡಿಗ ಸೌಕೂರು, ಕುಪ್ಪ ಉದಯ ನಗರ ಗುಲ್ವಾಡಿ, ರೀತಾ ದೇವಾಡಿಗ ಸೌಕೂರು, ಆಶಾ ಸಂತೋಷ್ ಮುಕ್ಕೋಡು ನೇರಳಕಟ್ಟೆ, ಜಯರಾಮ ಶೆಟ್ಟಿ ಹಡಾಳಿ ಅಂಪಾರು, ಕೆ.ಸುಬ್ಬಣ್ಣ ಶೆಟ್ಟಿ ಕೆಂಚನೂರು, ಉಮೇಶ ಮೊಗವೀರ ಕಂಡ್ಲೂರು, ಜಿ.ಶೇಖರ ಪೂಜಾರಿ ಗುಲ್ವಾಡಿ, ದೇವಳದ ಸಿಬ್ಬಂದಿವರ್ಗ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!