Sunday, September 8, 2024

ಬೈಂದೂರು ತೊಂಡೆಮಕ್ಕಿ ಶಾರದೋತ್ಸವ ಬೆಳ್ಳಿಹಬ್ಬ ಆಚರಣೆ

ಬೈಂದೂರು: ತೊಂಡೆಮಕ್ಕಿ-ಸೂರ್ಕುಂದ ಗೆಳೆಯರ ಬಳಗ ಯುವಕ ಸಂಘದ ಶಾರದೋತ್ಸವ ಬೆಳ್ಳಿಹಬ್ಬದ ಆಚರಣೆಯ ಸಮಾರಂಭ ಧಾರ್ಮಿಕ ವಿಧಿವಿಧಾನಗಳ ಜತೆಯಲ್ಲಿ ರಕ್ತದಾನ ಶಿಬಿರ, ಸೈನಿಕರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಪ್ರತಿಭಾ ಪುರಸ್ಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ, ಧಾರ್ಮಿಕ ಅನುಷ್ಠಾನದ ಜತೆಯಲ್ಲಿ ದೇಶ ಮತ್ತು ಸಮಾಜ ಹಿತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗೆಳೆಯರ ಬಳಗ ಯುವಕ ಸಂಘವು ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ವಿಜಯ ನಗರ ಅರಸರು, ಮರಾಠರು, ಮೈಸೂರು ಅರಸರು ಸಹಿತ ಅನಾದಿ ಕಾಲದಿಂದಲೂ ನಮ್ಮ ರಾಜ-ಮಹಾರಾಜರು, ಧಾರ್ಮಿಕ ಮುಖಂಡರು ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಒಂದುಗೂಡಿಸಿ ದೇಶ-ಜನ ಹಿತಕ್ಕೆ ಪೂರಕವಾಗುವಂತೆ ಪರ್ವಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅದೇ ಪಥವನ್ನು ಗೆಳೆಯರ ಬಳಗ ತಂಡವು ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿ.ಪಂ.ಮಾಜಿ ಅಧ್ಯಕ್ಷ ಎಸ್ ರಾಜು ಪೂಜಾರಿ, ಭಾಜಪ ಮಂಡಲಾಧ್ಯಕ್ಷ ದೀಪಕ್ ಶೆಟ್ಟಿ, ಉದ್ಯಮಿಗಳಾದ ಗೋಪಾಲಕೃಷ್ಣ ಕಲ್ಮಕ್ಕಿ, ಮುಖ್ಯೋಪಾಧ್ಯಾಯ ಮಧುಸೂದನ ಉಪಸ್ಥಿತರಿದ್ದರು.

ಯೋಧ ಶ್ರೀಕಾಂತ್ ಗಾಣಿಗ ಮತ್ತು ಸಂಘದ ಮಾಜಿ ಅಧ್ಯಕ್ಷ ಅಣ್ಣಪ್ಪ ದೇವಾಡಿಗರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳಾದ ಮದನ ದೇವಾಡಿಗ(ಚಿತ್ರಕಲೆ), ಅಶ್ವಿನಿ ದೇವಾಡಿಗ(ಶೈಕ್ಷಣಿಕ), ನಾಗಶ್ರೀ ಮೊಗವೀರ (ಶೈಕ್ಷಣಿಕ) ರನ್ನು ಪುರಸ್ಕರಿಸಲಾಯಿತು.

ಪ್ರಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ರಾಜೇಶ ಎಂ ಅವರು ಶಾರದೋತ್ಸವವನ್ನು ದುಂಧುವೆಚ್ಚವೆಂಬಂತೆ ಕೆಲವರು ನೋಡುತ್ತಾರಾದರೂ ಇದರಿಂದ ನಮಗೆ ಧಾರ್ಮಿಕ ಅನುಷ್ಟಾನದ ತೃಪ್ತಿಯ ಜತೆಯಲ್ಲಿ ವಿವಿಧ ಕಲೆ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ, ಯುವಕರಲ್ಲಿ ಧಾರ್ಮಿಕ-ನೈತಿಕತೆಯ ಅರಿವು ಮೂಡಿಸಲು ಸಹಾಯಕವಾಗುತ್ತದೆ. ಕಾರ್ಮಿಕರೇ ಹೆಚ್ಚಾಗಿರುವ ತೊಂಡೆಮಕ್ಕಿಯಲ್ಲಿ ನವರಾತ್ರಿ ಎಲ್ಲರನ್ನೂ ಒಂದುಗೂಡಿಸುವಲ್ಲಿ ಸಹಾಯಕವಾಗಿದೆ ಎಂದು ಹೇಳಿದರು.
ವಿಶ್ವನಾಥ ಮೊಗವೀರ ನಿರೂಪಿಸಿದರು. ಪ್ರದೀಪ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!