spot_img
Sunday, April 12, 2026
spot_img

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ರೂ. 500 ಕೋಟಿ ವ್ಯವಹಾರ, ಶೇ. 20% ಡಿವಿಡೆಂಡ್ ಘೋಷಣೆ

ಕುಂದಾಪುರ: ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು ರೂಪಾಯಿ 500 ಕೋಟಿ ವ್ಯವಹಾರ ಮಾಡಿದ್ದು, ವರದಿ ಸಾಲಿನಲ್ಲಿ ಸಂಸ್ಥೆಯು ರೂ 2 ಕೋಟಿ 11 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು ಸಂಘದ ಸದಸ್ಯರಿಗೆ ಶೇ. 20 % ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ತಿಳಿಸಿದರು

ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿ ಇನ್ನು ಮುಂದೆ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಬಾಕಿ ಇರುವ ಶಾಖೆಗಳಿಗೆ ಸ್ವಂತ ಕಟ್ಟಡ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಶಾಖೆ, ಸಂಘದ ಮುಂದಿನ ಭವಿಷ್ಯಕ್ಕಾಗಿ ಕುಂದಾಪುರದ ಆಸುಪಾಸಿನಲ್ಲಿ ಒಂದು ಸ್ವಂತ ಜಾಗ ಖರೀದಿ, ಸಂಘದ ಪ್ರಧಾನ ಕಛೇರಿಯ ಮೂರನೇ ಅಂತಸ್ತಿನಲ್ಲಿ ಸಭಾಂಗಣ ಮಾಡುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.

ಸಂಘದ ಮುಖ್ಯ ಸಲಹದಾರರಾದ ಅತೀ ವಂದನಿಯ ಸ್ಟೇನಿ ತಾವ್ರೋ ರವರು ಪ್ರಗತಿಗೆ ಮುಖ್ಯ ಕಾರಣ ಉತ್ತಮ ನಿರ್ದೇಶನ ಹಾಗೂ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಗ್ರಾಹಕರ ಪ್ರಾಮಾಣಿಕತೆಗೆ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು, ಅಲ್ಲದೆ ಮುಂದೆಯೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು

ಸಂಘದ ನಿರ್ದೇಶಕ ಡೇರಿಕ್ ಡಿ ಸೋಜಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಒಟ್ಟು 3940 ಸದ್ಯಸ್ಯರಿಂದ 91.87 ಲಕ್ಷ ಪಾಲು ಬಂಡವಾಳ ಹಾಗೂ 122.59 ಕೋಟಿ ರೂ ಠೇವಣಿ ಇದ್ದು 98.43 ಕೋಟಿ ಹೊರಬಾಕಿ ಸಾಲ ಹೊಂದಿರುತ್ತದೆ. 2022 ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂಪಾಯಿ 130 ಕೋಟಿ ಠೇವಣಿ ಹಾಗೂ ರೂ 106 ಕೋಟಿ ಸಾಲ ಇದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ವಿನೋದ್ ಕ್ರಾಸ್ಟೋ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಪ್ರಕಾಶ್ ಲೋಬೋ, ಶ್ರೀಮತಿ ಶಾಂತಿ ಡಾಯಾಸ್, ಸಂತೋಷ್ ಓಝೋಲ್ಡ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಮತ್ತು ತಿಯೋದರ ಒಲಿವೇರ ಉಪಸ್ಥಿತರಿದ್ದರು.

ಸಂಘದ ಸ್ಥಾಪಕ ಹಾಗೂ ಪ್ರಸ್ತುತ ನಿರ್ದೇಶಕರಾದ ಫಿಲಿಪ್ ಡಿ ಕೋಸ್ಟಾ ಸ್ವಾಗತಿಸಿದರು, ನಿರ್ದೇಶಕ ವಿಲ್ಸನ್ ಡಿ ಸೋಜಾ ಪ್ರಾಸ್ತವಿಕ ಮಾತುಗಳನ್ನಾಡಿದರು. ನಿರ್ದೇಶಕಿ ಶ್ರೀಮತಿ ಡೈನಾ ಡಿ ಅಲ್ಮೇಡ ವಂದಿಸಿದರು. ನಿರ್ದೇಶಕಿ ಶ್ರೀಮತಿ ಶಾಂತಿ ಆರ್ ಕರ್ವಾಲ್ಲೊ , ಕಿರಣ್ ಮೇಲ್ವಿನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!