spot_img
Wednesday, January 22, 2025
spot_img

ಭಾಜಪದ ವತಿಯಿಂದ ಸೆ.17ರಿಂದ ಅ.2ರ ತನಕ ಸೇವಾ ಪಾಕ್ಷಿಕ ಅಭಿಯಾನ

ಕುಂದಾಪುರ: ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ತನಕ ಸೇವಾ ಪಾಕ್ಷಿಕ ಅಭಿಯಾನವನ್ನು ಆಯೋಜಿಸುತ್ತಿದೆ. ಭಾರತೀಯ ಜನತಾ ಪಕ್ಷ ನಿರಂತರವಾಗಿ ಸೇವಾ ಚಟುವಟಿಕೆಗಳ ಮೂಲಕ ಜನರಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಸೇವಾ ಪಾಕ್ಷಿಕ ಅಭಿಯಾನದಲ್ಲಿ 13 ಸೇವಾ ಕಾರ್ಯಗಳು ನಡೆಯಲಿವೆ ಎಂದು ಸೇವಾ ಪಾಕ್ಷಿಕ ಅಭಿಯಾನದ ವಕ್ತಾರ ರಾಘವೇಂದ್ರ ಕಿಣಿ ತಿಳಿಸಿದರು.

ಅವರು ಗುರುವಾರ ಕುಂದಾಪುರದ ಬಿಜೆಪಿ ಮಂಡಲ ಕಛೇರಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಸೆ.25ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ, ಅ.2 ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರ ಸೂಚನೆಯಂತೆ ರಾಜ್ಯ ಬಿಜೆಪಿ ಮಾರ್ಗದರ್ಶನದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ರವರ ನೇತೃತ್ವದಲ್ಲಿ ಸೇವಾ ಪಾಕ್ಷಿಕವನ್ನು ಆಚರಿಸಲಾಗುವುದು ಎಂದರು.

ಸೆ.17 ಮತ್ತು 18ರಂದು ರಕ್ತದಾನ ಶಿಬಿರ 80 ಕಡೆಗಳಲ್ಲಿ ನಡೆಯಲಿದೆ. ಸೆ.17ರಿಂದ ಅ.2 ಜೀವರಕ್ಷಕ ಅಭಿಯಾನ, ಸೆ.20-21 ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಪ್ರದರ್ಶಿನಿ, ಸೆ.21-22 ಆರೋಗ್ಯ ತಪಾಸಣಾ ಶಿಬಿರ, ಸೆ.22-23 ಅರಳಿ ಗಿಡ ನೆಡುವ ಅಭಿಯಾನ, ಸೆ.24-25 ಕಮಲೋತ್ಸವ, ಸೆ.25-29 ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ, ಸೆ.26-27 ಅಮೃತ ಸರೋವರ ನಿರ್ಮಾಣ, ಸೆ.28-29 ಅಂಗನವಾಡಿ ಸೇವಾ ದಿವಸ್, ಸೆ.30 ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ, ಅ.2ರಂದು ಸ್ವಚ್ಛತಾ ಅಭಿಯಾನ, ಮತ್ತು ಖಾದಿ ಉತ್ಸವ ನಡೆಯಲಿದೆ ಎಂದರು.

ಸೇವಾ ಪಾಕ್ಷಿಕದ ಜಿಲ್ಲಾ ಸಂಚಾಲಕರಾಗಿ ಮನೋಹರ್ ಎಸ್.ಕಲ್ಮಾಡಿ ಹಾಗೂ ಜಿಲ್ಲಾ ಸಹ ಸಂಚಾಲಕರಾಗಿ ಸದಾನಂದ ಉಪ್ಪಿನಕುದ್ರು, ಶಿವಕುಮಾರ್ ಅಂಬಲಪಾಡಿ ನೇಮಕಗೊಂಡಿದ್ದು, ಅಭಿಯಾನದ ಮಂಡಲ ಸಂಚಾಲಕರು, ಸಹ ಸಂಚಾಲಕರು ಮತು ಅಭಿಯಾನದ 13 ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಿಸಲಾಗಿದೆ ಎಂದರು.

ಕುಂದಾಪುರ ಮಂಡಲದಲ್ಲಿ ಕಾರ್ಯಕ್ರಮ:
ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಮಾತನಾಡಿ, ಸೆ.17ರಂದು ಕುಂದಾಪುರ ಮಂಡಲದ ವತಿಯಿಂದ ರೆಡ್‌ಕ್ರಾಸ್ ಕುಂದಾಪುರ ಸಹಕಾರದಲ್ಲಿ ರಕ್ತದಾನ ಶಿಬಿರ, ಸೆ.20ರಂದು ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ದತ್ತು ಸ್ವೀಕಾರ ಕಾರ್ಯಕ್ರಮ, ಸೆ.22ರಂದು ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಚಿಕನ್‌ಸಾಲ್ ಸ.ಪ್ರಾ.ಶಾಲಾ ವಠಾರದಲ್ಲಿ ಅರಳಿ ಗಿಡ ನೆಡುವ ಕಾರ್ಯಕ್ರಮ, ಸೆ.24ರಂದು ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆ ಸ್ವಚ್ಛತಾ ಕಾರ್ಯಕ್ರಮ, ಸೆ.25ರಂದು ಎಸ್.ಟಿ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಕುಂದಾಪುರ ಬೀಚ್ ಸ್ವಚ್ಛತಾ ಕಾರ್ಯಕ್ರಮ, ಸೆ.30ರಂದು ಎಸ್.ಸಿ ಮೋರ್ಚಾ ವತಿಯಿಂದ ಆರೋಗ್ಯ ತಪಾಸಣೆ ಹಾಗೂ ಅಭಾ ಕಾರ್ಡ್ ನೊಂದಣಿ ಕಾರ್ಯಕ್ರಮ, ಅ.2ರಂದು ಕುಂದಾಪುರ ವಿಧಾನಸಭಾ ಕ್ಷೇತ್ರದ 222 ಬೂತ್‌ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಅಭಿಯಾನದ ಸಹ ಸಂಚಾಲಕ ಶಿವಕುಮಾರ್, ಪ್ರತಾಪಚಂದ್ರ ಚೇರ್ಕಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಕುಂದಾಪುರ ಮಂಡಲದ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಮಾಧ್ಯಮ ಸಂಚಾಲಕ ಅಭಿಷೇಕ್, ಸತೀಶ್ ಪೂಜಾರಿ ವಕ್ವಾಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!