spot_img
Wednesday, January 22, 2025
spot_img

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ನಾರಾಯಣ ಬಿಲ್ಲವರಿಗೆ ನುಡಿ ನಮನ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 75ನೇ ತಿಂಗಳ ಕಾಯಕ್ರಮ ಇತ್ತೀಚೆಗೆ ಗೊಂಬೆಮನೆಯಲ್ಲಿ ಜರುಗಿತು.

ಕುಂದಾಪುರದ ಶ್ರೀಮತಿ ರಶ್ಮಿ ರಾಜ್ ಮತ್ತು ತಂಡದವರು ವಿಷ್ಣು ಸಹಸ್ರನಾಮ ಪಠಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಗವತ ಉಮೇಶ ಸುವರ್ಣ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು.

ವಿಶ್ವಂಭರ ಐತಾಳ್ ಅಸೋಡು, ಜನಾರ್ಧನ ಹಂದೆ, ಸುಜಯೀಂದ್ರ ಹಂದೆ, ಶ್ರೀಪತಿ ಆಚಾರ್ಯ, ಡಾ. ಕಾಶೀನಾಥ್ ಪೈ, ರಾಮ ಎಂ. ಚಂದನ್, ಶಂಕರ ಬಿಲ್ಲವ, ರಾಘವೇಂದ್ರ ನೆಂಪು ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮುಖ ಪ್ರತಿಭೆಯ, ವಿಶೇಷ ವ್ಯಕ್ತಿತ್ವದ ಜನಾರ್ದನ ಹಂದೆಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.

ತದನಂತರ ಇತ್ತೀಚೆಗೆ ನಿಧನರಾದ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇದರ ಆರ್ಥಧಾರಿ ನಾರಾಯಣ ಬಿಲ್ಲವರಿಗೆ ನುಡಿ ನಮನ ಸಲ್ಲಿಸಲಾಯಿತು.

ಜನಾರ್ಧನ ಹಂದೆಯವರ ಸಂಗೀತ ಸಂಜೆ ನೆರೆದ ಪ್ರೇಕ್ಷಕರ ಮನ ಸೆಳೆಯಿತು. ಮದ್ದಲೆಗಾರರಾದ ದೇವದಾಸ ಕೂಡ್ಲಿಯವರು ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇಡೀ ಕಾರ್ಯಕ್ರವನ್ನು ನಾಗೇಶ್ ಶ್ಯಾನುಭಾಗ್, ಬಂಟ್ವಾಡಿಯವರು ನಿರೂಪಿಸಿದರು. ಶಿಕ್ಷಕ ಉದಯ ಭಂಡಾರ್‌ಕಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!