spot_img
Sunday, April 12, 2026
spot_img

ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ: ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ

ಕುಂದಾಪುರ: ಪ್ರವರ್ಗ 1ರಲ್ಲಿ ಬರುವ ಜೋಗಿ ಸಮಾಜದವರು ಹಾಗೂ ಪ್ರವರ್ಗ 3ರಲ್ಲಿ ಬರುವ ಬಳೆಗಾರರು ಒಂದೇ ಸಮುದಾಯದಲ್ಲಿದ್ದರೂ ಎದುರಾಗಿರುವ ತಾಂತ್ರಿಕ ದೋಷ ನಿವಾರಿಸಲು ತಮ್ಮ ಸಮಾಜದವರು ಮಾಹಿತಿ ಒದಗಿಸಬೇಕು. ಆ ಮೂಲಕ ಈ ವರ್ಗ ಬದಲಾವಣೆಗೆ ಶ್ರಮಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಇವರು ಹೇಳಿದರು.

ಕೋಟೇಶ್ವರದ ವಾದಿರಾಜ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 11 ರಂದು ನಡೆದ ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಕೋಟೇಶ್ವರ ಇದರ 2021-2022ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಂಗವಾಗಿ ನೆಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಏಳನೇ ತರಗತಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ., ತೃತೀಯ ವರ್ಷ ಡಿಗ್ರಿ, ವೃತ್ತಿಪರ ಕೊರ್ಸುಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪಠ್ಯೇತರ ವಿಷಯದಲ್ಲಿ ಸ್ಪರ್ಧಿಸಿ ವಿಜೇತರಾದ ಈ ಸಹಕಾರಿ ಸಂಘದ ವ್ಯಾಪ್ತಿಯ ೪೩ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು.

ಶ್ರೀ ಕಾಲಭೈರವ ದೇವಸ್ಥಾನದ ಅರ್ಚಕರಾದ ಅಣ್ಣಪ್ಪಯ್ಯ ಎಂ.ಬಳೆಗಾರ ಹಳಗೇರಿ, ಬಸವ ಜೋಗಿ ಕಮಲಶಿಲೆ, ದಯಾನಂದ ಜೋಗಿ ಬಸ್ರೂರು, ರವಿ ಜೋಗಿ ಕೆರಾಡಿ, ಮಹೇಶ ಜೋಗಿ ಯಡಮೊಗೆ, ಸಂಪತ್ ಜೋಗಿ ಯಡಮೊಗೆ, ಪ್ರಶಾಂತ ಜೋಗಿ ಉಳ್ಳೂರು-11, ಶೇಖರ ಬಳೆಗಾರ ಕಟ್‌ಬೇಲ್ತೂರು ಇವರನ್ನು ಮತ್ತು 75ನೇ ವರ್ಷದ ಸ್ವಾತಂತ್ರ್ಯ ದಿನಾಚಣೆಯ ಅಮೃತ ಮಹೋತ್ಸವದ ಅಂಗವಾಗಿ ನಿವೃತ್ತ ಯೋಧರಾದ ನರಸಿಂಹ ಜೋಗಿ ಹಳಗೇರಿಯವರನ್ನು ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಿಶಾ ಜೋಗಿ ಕಾಳಾವರ ಇವರನ್ನು ಸನ್ಮಾನಿಸಲಾಯಿತು. ಶ್ರೀ ಕಾಲಭೈರವ ದೇವಸ್ಥಾನದ ಬಸ್ರೂರು ಇದರ ಜೀರ್ಣೋದ್ಧಾರಕ್ಕೆ ಧನಸಹಾಯ ವಿತರಿಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ ಕೋಟೇಶ್ವರ ಅಧ್ಯಕ್ಷರಾದ ಶೇಖರ ಬಳೆಗಾರ ಕಟ್‌ಬೆಲ್ತೂರು ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಶೈಲಾವಾಸುದೇವ ಜೋಗಿ ಸಿದ್ದಾಪುರ, ನಿರ್ದೇಶಕರಾದ ಗೋವರ್ಧನ ಜೋಗಿ ಹರವರಿ, ಪ್ರಸಾದ ಜೋಗಿ ಹಂಗಳೂರು, ಶಿವರಾಮ ಜೋಗಿ ಶಂಕರನಾರಾಯಣ, ಆಶಾ ಜೋಗಿ ಶಂಕರನಾರಾಯಣ, ಸತ್ಯನಾರಾಯಣ ಜೋಗಿ ಹಂಗಳೂರು, ಶ್ರೀನಿವಾಸ ಜೋಗಿ ಕಾಳಾವರ, ಸಾವಿತ್ರಿ ಜೋಗಿ ಹೆಮ್ಮಾಡಿ ಸುರೇಶ ಜೋಗಿ ಕೋಟೇಶ್ವರ, ಜಗದೀಶ ಜೋಗಿ ಹಳಗೇರಿ, ಸುರೇಶ ಜೋಗಿ ಕೊರ್ಗಿ ಹಾಗೂ ಮುಖ್ಯ ಅಥಿತಿಯಾಗಿ ಜೋಗಿ ಸಮಾಜ ಸೇವಾ ಸಂಘ ಕುಂದಾಪುರ ತಾಲೂಕು ಅಧ್ಯಕ್ಷರಾದ ಅಶೋಕ ಬಳೆಗಾರ ಕಟ್‌ಬೇಲ್ತೂರು ಜೋಗಿ ಸಮಾಜ ಸೇವಾ ಸಂಘ ಬೈಂದೂರು ತಾಲೂಕು ಅಧ್ಯಕ್ಷರಾದ ಎಸ್. ದಯಾನಂದ ಜೋಗಿ ನಾವುಂದ, ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ ಕೋಟೇಶ್ವರದ ನಿಕಟಪೂರ್ವ ಅಧ್ಯಕ್ಷರು ಎ. ಕೃಷ್ಣಯ್ಯ ಜೋಗಿ ಅಂಕದಕಟ್ಟೆ ಉಪಸ್ಥಿತರಿದರು.

ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಜೋಗಿ ಕಟ್‌ಬೇಲ್ತೂರು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು ಗೋವರ್ಧನ ಜೋಗಿ ಹರವರಿ ಸ್ವಾಗತಿಸಿ. ಸುಶೀಲ ಎನ್ ಜೋಗಿ ಕಾಳಾವರ ಪ್ರಾರ್ಥನೆ ನೆರವೇರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!