spot_img
Sunday, April 12, 2026
spot_img

ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರ ಶೇಷಗಿರಿ ರಾವ್ ಮನೆಗೆ ನಾಮಫಲಕ ಅನಾವರಣ

ಕುಂದಾಪುರ,ಸೆ.10: ಕುಂದೇಶ್ವರ ದೇವಸ್ಧಾನ ಬಳಿಯ ಶಾಂತಿ ನಿಲಯದ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಶೇಷಗಿರಿ ರಾವ್ ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅಳವಡಿಸುವ ಕಾರ್ಯಕ್ರಮ ಸೆ.10ರಂದು ನಡೆಯಿತು.

“ಸ್ವರಾಜ್ಯ 75” 16ನೇ ಮನೆ ಕಾರ್ಯಕ್ರಮದಲ್ಲಿ ನಾಮ ಫಲಕ ಅನಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷರಾಗಿರುವ ಡಾ.ಉಮೇಶ್ ಪುತ್ರನ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಶೆಟ್ಟಿ, ಮಂಜುನಾಥ್ ರಾವ್ ಭಾಗವಹಿಸಿದ್ದರು.

ಕುಂದಾಪುರ ನೇರಂಬಳ್ಳಿ ಶೇಷಗಿರಿ ರಾವ್ ಇವರ ಸೇವೆಯ ವಿಚಾರವನ್ನು ಪತ್ರಕರ್ತ ಯು.ಎಸ್.ಶೆಣೈ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾಕರ್ ಕುಂದಾಪುರ, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು, ಸ್ಥಳೀಯರು ಉಪಸ್ಧಿತರಿದ್ದರು

ಶರ್ಮಿಳಾ ಕಾರಂತ್ ಕಾರ್ಯಕ್ರಮ ನಿರ್ವಹಿಸಿ, ಸ್ವರಾಜ್ಯ 75 ಕಾಯ೯ಕ್ರಮ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ನಾಗರತ್ನ ಹೇರ್ಳೆ ವಂದಿಸಿದರು.

ಸ್ವರಾಜ್ಯ75 ಸಂಘಟನೆಯ ನೇತೃತ್ವದಲ್ಲಿ ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ , ನಿಸರ್ಗ ಪ್ರೇಂಡ್ಸ್ ನೇರಳಕಟ್ಟೆ, ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!