Sunday, September 8, 2024

ಬೈಂದೂರು ಕ್ಷೇತ್ರದ ಸುಭಿಕ್ಷೆಗಾಗಿ ಕೊಲ್ಲೂರಿನಲ್ಲಿ ಶತಚಂಡಿಕಾ ಯಾಗ ಸಂಪನ್ನ

ಕೊಲ್ಲೂರು, ಆ.26: ಬೈಂದೂರು ಕ್ಷೇತ್ರ ಹಾಗೂ ಸಮಸ್ತ ಜನತೆಯ ಸುಭಿಕ್ಷೆಯ ಸದುದ್ದೇಶದಿಂದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ಶತಚಂಡಿಕಾ ಯಾಗದ ಪೂರ್ಣಾಹುತಿ ಶುಕ್ರವಾರ ನಡೆಯಿತು. ಕಳೆದ ಮೂರು ದಿನಗಳಿಂದ ಕಾಳಿದಾಸ ಭಟ್ಟರ ಮನೆಯಲ್ಲಿ ಶತಚಂಡಿಕಾ ಯಾಗ ನಡೆಯುತ್ತಿದ್ದು, ಶುಕ್ರವಾರ ಪೂರ್ಣಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಬೈಂದೂರು ಕ್ಷೇತ್ರದ ಸುಭಿಕ್ಷೆ, ಕ್ಷೇತ್ರದ ಅಭಿವೃದ್ದಿಗಾಗಿ ಈ ಶತಚಂಡಿಕಾ ಯಾಗದ ಸಂಕಲ್ಪ ಮಾಡಿದ್ದು, ಯಶಸ್ವಿಯಾಗಿ ಸಂಪನ್ನಗೊಂಡಿದೆ. ಇತ್ತೀಚೆಗೆ ಕ್ಷೇತ್ರದಲ್ಲಿ ಸಂಭವಿಸಿದ ಅವಘಡಗಳು, ಪ್ರಾಣಹಾನಿ, ಇತ್ಯಾದಿಗಳಿಂದ ಮನಸ್ಸಿಗೆ ಸಾಕಷ್ಟು ನೋವಾಗಿತ್ತು. ಮಾನಸಿಕ ನೆಮ್ಮದಿಗಾಗಿ ದೇವಿಯ ಮೊರೆ ಹೋಗಿದ್ದು, ಕಾಳಿದಾಸ ಭಟ್ಟ ವೈದಿಕತ್ವದಲ್ಲಿ ಶತಚಂಡಿಕಾ ಯಾಗ ಪೂರ್ಣಗೊಂಡಿದೆ ಎಂದರು.

ಕಾಳಿದಾಸ ಭಟ್ಟರ ತಂದೆ ಗಣೇಶ ಭಟ್ಟರು ಆಧ್ಯಾತ್ಮಿಕವಾಗಿ ಸಾಕಷ್ಟು ಸಾಧನೆ ಮಾಡಿದವರು. ಈ ಯಾಗ ಮಾಡಲೂ ಅವರು ಪ್ರೇರಣೆ. ಕಾಳಿದಾಸ ಭಟ್ಟರ ಮನೆಯಲ್ಲಿ ಇದು 9ನೇ ಶತಚಂಡಿಕಾ ಯಾಗ. ಎಂ.ಜಿ ರಾಮಚಂದ್ರನವರು ಇಲ್ಲಿ ಶತಚಂಡಿಕಾ ಯಾಗ ನೆರವೇರಿಸಿದ್ದು ನೆನಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಶತಚಂಡಿಕಾ ಯಾಗದ ವೈದಿಕತ್ವ ವಹಿಸಿದ ವೇ.ಮೂ.ಕಾಳಿದಾಸ ಭಟ್ಟರು ಮಾತನಾಡಿ, ಇದು ನಾಲ್ಕು ದಿನಗಳಿಂದ ನಡೆಯುತ್ತಿರುವ ಯಾಗವಾಗಿದ್ದು, ಮೊದಲ ದಿನ ಸಾವಿರ ಮೋದಕಗಳಿಂದ ಗಣಪತಿಗೆ ಅಥರ್ವಶೀರ್ಷ ಹವನ, ಎರಡನೇ ದಿನ ಸೂರ್ಯಗಾಯತ್ರಿ ಸಹಿತ ನವಗ್ರಹ ಹವನ. ಮೂರನೇ ದಿನ ಶ್ರೀರುದ್ರ ಏಕಾದಶಿನಿ ಹವನ, ಇಂದು ಶತಚಂಡಿಕಾ ಹವನ ನಡೆದಿದೆ. ಪಂಚಜನ ಪ್ರಕಾರ ಮಾಡಿದರೆ ಪುಷ್ಠಿ ಜಾಸ್ತಿ, ಅಂಬಿಕೆಯನ್ನು ಪ್ರಧಾನವಾಗಿಟ್ಟುಕೊಂಡು ಎಲ್ಲ ದೇವತೆಗಳಿಗೆ ಉಪಹವನಗಳನ್ನು ಪೂರೈಸಿಕೊಂಡು ಇವತ್ತು ಚಂಡಿಕಾ ಯಾಗವನ್ನು ಸಂಪನ್ನಗೊಳಿಸಿದ್ದೇವೆ ಎಂದರು.

ಈ ಸಂದರ್ಭ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸಂಸದ ಬಿ.ವೈ.ರಾಘವೇಂದ್ರ ಗುರುವಾರ ಭೇಟಿ ನೀಡಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!