Thursday, November 21, 2024

ಕೊರವಡಿ: ರೋಟರಿ ಸಮುದಾಯ ಪದಗ್ರಹಣ, ನಿವೃತ್ತ ಯೋಧರಿಗೆ ಸನ್ಮಾನ

ಕುಂದಾಪುರ: ರೋಟರಿ ಸಮುದಾಯ ದಳ ಕೊರವಡಿ-ಕುಂಭಾಶಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಣೆ ಹಾಗೂ ಪದಗ್ರಹಣ ಕಾರ್ಯಕ್ರಮ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಸಿ.ಸಿ. ಕೊರವಡಿಯ ಅಧ್ಯಕ್ಷರಾದ ಶ್ರೀಧರ ಪುರಾಣಿಕ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರೋಟರಿ ವಲಯ II ಇದರ ಅಸಿಸ್ಟೆಂಟ್ ಗರ್ವನರ್ ಪ್ರಭಾಕರ ಕುಂಭಾಶಿ, ಕುಂಭಾಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಎಸ್.ಆರ್, ರೋಟರಿ ಕ್ಲಬ್, ಕೋಟೇಶ್ವರ ಅಧ್ಯಕ್ಷ ಸುಧೀರ್ ಶೆಟ್ಟಿ, ಕಾರ್ಯದರ್ಶಿ ವಿಜಯಕುಮಾರ ಶೆಟ್ಟಿ, ರೋಟರಿ ಕ್ಲಬ್, ಕೋಟೇಶ್ವರ ಆರ್.ಸಿ.ಸಿ. ಪ್ರತಿನಿಧಿ ಆನಂದ ಆಚಾರ್, ಹಾಗೂ ರೋಟರಿ ಸಮುದಾಯದಳ ಕೊರವಡಿ ಇದರ ಸಂಸ್ಥಾಪಕ ರಾಮಚಂದ್ರ ಉಪಾಧ್ಯಾಯ ಮತ್ತು ೨೦೨೨-೨೦೨೩ ರ ನೂತನ ಅಧ್ಯಕ್ಷ ಮಹಾಬಲ ಎಮ್. ಪುತ್ರನ್ ಕೊರವಡಿ ನೂತನ ಕಾರ್ಯದರ್ಶಿ ಸುರೇಶ (ವಿಠಲವಾಡಿ) ಕೊರವಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ ಸೈನಿಕರಾದ ರವಿಚಂದ್ರ ಶೆಟ್ಟಿ ತೆಕ್ಕಟ್ಟೆ ಇವರನ್ನು ಹಾಗೂ ಆರ್.ಸಿ.ಸಿ. ಕೊರವಡಿಯ ಇದರ ಹೆಮ್ಮೆಯ ಸದಸ್ಯರಾದ ಜನಪದ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಹಾಗೂ ಗೌರವ ಡಾಕ್ಟರೇಟ್ ಪದವಿ ಭಾಜನರಾಗಿ ಮತ್ತು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪಡೆದ ಡಾ. ಗಣೇಶ ಗಂಗೊಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವೆಂಕ್ಟೆನ್ ಫೌಂಡೇಶನ್ ಮೂಲಕ (ರೂ. ೧೦,೦೦,೦೦೦) ವೆಚ್ಚದಿಂದ ಗ್ರಾಮದ ಕೆರೆಯನ್ನು ದುರಸ್ಥಿ ಮಾಡಿ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಕೊರವಡಿ ಇಲ್ಲಿಗೆ ಸುಸಜ್ಜಿತ ಹುಡುಗಿಯರ ಶೌಚಾಲಯವನ್ನು ನಿರ್ಮಿಸಲು ಸಹಕಾರ ಮಾಡಿದ ನಿಕಟ ಪೂರ್ವ ಜಿಲ್ಲಾ ಆರ್.ಸಿ.ಸಿ. ಪ್ರತಿನಿಧಿಯಾದ ಶ್ರೀನಿಧಿ ಉಪಾಧ್ಯ ಮತ್ತು ರೋಟರಿ ಸಮುದಾಯದ ನಿಕಟ ಪೂರ್ವ ಅಧ್ಯಕ್ಷ ಶ್ರೀಧರ ಪುರಾಣಿಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಹೆಮ್ಮೆದಂತಹ ಸಂಸ್ಥೆಯ ಸದಸ್ಯರ ಮಕ್ಕಳಾದ ಕುಮಾರಿ ಪ್ರೀತಿ ಬೀಜಾಡಿ ಹಾಗೂ ಕುಮಾರಿ ಐಶ್ವರ್ಯ ಕೊರವಡಿ ಇವರನ್ನು ಸನ್ಮಾನಿಸಿ ಗುರುತಿಸಲಾಯಿತು. ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆ ಕೊರವಡಿಯ1 ರಿಂದ 7ನೇ ತರಗತಿವರೆಗಿನ ಅತೀ ಹೆಚ್ಚು ಅಂಕ ಪಡೆದ 7ವಿದ್ಯಾರ್ಥಿಗಳಿಗೆ ರೋಟರಿ ಸಮುದಾಯದ ಕೊರವಡಿ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಸದಸ್ಯ ಚಂದ್ರ ಕೆ. ಇಂಬಾಳಿ ಕಾರ್ಯಕ್ರಮ ನಿರ್ವಹಿಸಿ, ಸಂಸ್ಥೆಯ ಸದಸ್ಯ ರಮೇಶ ಕಾಂಚನ್ ಬೀಜಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸುರೇಶ ವಿಠಲವಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!