spot_img
Thursday, May 7, 2026
spot_img

ಮಂಗಳೂರು-ಹೊಸದುರ್ಗ :ವೋಲ್ವೋ ಸಾರಿಗೆ ಕಾರ್ಯಾಚರಣೆ

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ
ಅನುಕೂಲಕ್ಕಾಗಿ ಮಂಗಳೂರು-ಹೊಸದುರ್ಗ ಮಾರ್ಗದಲ್ಲಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು ಈಗಾಗಲೇ
ಪ್ರಾರಂಭಿಸಲಾಗಿರುತ್ತದೆ.

ಸಾರಿಗೆಯು ಮಂಗಳೂರಿನಿoದ ರಾತ್ರಿ 9.30 ಕ್ಕೆ ಹೊರಟು ಸುರತ್ಕಲ್-ಪಡುಬಿದ್ರೆ-ಉಡುಪಿ-ಮಣಿಪಾಲ-ಕುಂದಾಪುರ-ಅoಪಾರು-
ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗ-ಹೊಳೆಹೊನ್ನೂರು – ಚೆನ್ನಗಿರಿ-ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ಬೆಳಗ್ಗೆ
5.45 ಕ್ಕೆ ಹಾಗೂ ಮರುಪ್ರಯಾಣದಲ್ಲಿ ಹೊಸದುರ್ಗದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 6.15 ಕ್ಕೆ ಮಂಗಳೂರನ್ನು
ತಲಪುತ್ತದೆ.

ಸಾರಿಗೆಯಲ್ಲಿ ಮಂಗಳೂರಿನಿ0ದ ಹೊಸದುರ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 700 ರೂ.
ನಿಗಧಿಪಡಿಸಲಾಗಿದ್ದು, ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ksrtc.karnataka.gov.in ಅಥವಾ ಹತ್ತಿರದ
ರಿಸರ್ವೇಶನ್ ಕೌಂಟರ್ ಹಾಗೂ ಮಂಗಳೂರು ಬಸ್ ನಿಲ್ದಾಣ ಮೊ.ನಂ: 7760990720, ಮಂಗಳೂರು ಮುಂಗಡ ಬುಕ್ಕಿಂಗ್
ಕೌಂಟರ್ : ಮೊ.ನಂ: 9663211553, ಉಡುಪಿ ಬಸ್ ನಿಲ್ದಾಣ ಮೊ.ನಂ : 9663266400, ಡಾ.ವಿ.ಎಸ್.ಆಚಾರ್ಯ ಬಸ್
ನಿಲ್ದಾಣ ಮೊ.ನಂ 7795984182 ಹಾಗೂ ಕುಂದಾಪುರ ಬಸ್ ನಿಲ್ದಾಣ ಮೊ.ನಂ :9663266009 ಅನ್ನು ಸಂಪರ್ಕಿಸಬಹುದಾಗಿದೆ
ಎಂದು ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!