Sunday, September 8, 2024

ಪಾರ್ವತಿ ಜಿ. ಐತಾಳ್ ಅನುವಾದಿಸಿದ ‘ಮಾಧವಿ ಕಥನ ಕಾವ್ಯ’ದ ಲೋಕಾರ್ಪಣೆ

ಮಣಿಪಾಲ: ‘ಮಾಧವಿಯ ಕಥೆ ನಮ್ಮ ಮಹಾಭಾರತದಲ್ಲಿ ಬರುವ ಒಂದು ಉಪಕಥೆಯಾದರೂ ಆಧುನಿಕ ಸಾಹಿತಿಗಳು ಆಕೆಯ ಕಥೆಗೆ ನೀಡಿರುವ ವಿವಿಧ ಬಗೆಯ ವ್ಯಾಖ್ಯಾನಗಳು ನಮ್ಮ ಸ್ತ್ರೀವಾದಿ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ ಮತ್ತು ಸ್ತ್ರೀಶೋಷಣೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತವೆ’ ಎಂದು ಲೇಖಕಿ, ನಾಟಕಕಾರ್ತಿ ಸುಧಾ ಆಡುಕಳ ಹೇಳಿದರು.

ಮಣಿಪಾಲದ ಸಿರಿಗನ್ನಡ ಪುಸ್ತಕ ಮಳಿಗೆಯ ಸಭಾಂಗಣದಲ್ಲಿ ಡಾ.ಪಾರ್ವತಿ ಜಿ.ಐತಾಳ್ ಅನುವಾದಿಸಿದ ಮಲೆಯಾಳದ ಜ್ಞಾನಪೀಠ ವಿಜೇತ ಕವಿ ಓ.ಎನ್.ವಿ.ಕುರುಪ್ ಅವರ ಕೃತಿ ’ಮಾಧವಿ ಕಥನ ಕಾವ್ಯ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂಗೀತ ತಜ್ಞ ಪ್ರೊ.ಅರವಿಂದ ಹೆಬ್ಬಾರರು ತಮ್ಮ ಶಿಷ್ಯೆ ಅರ್ಚನಾಳೊಂದಿಗೆ ಕೃತಿಯ ಆಯ್ದ ಸಾಲುಗಳ ಕುರಿತು ಚಿಂತನೆ ನಡೆಸಿ ಗಾಯನದ ಮೂಲಕ ವ್ಯಾಖ್ಯಾನ ಮಾಡಿದರು. ಪಾರ್ವತಿ ಐತಾಳ್ ತಾವು ಕೃತಿ ರಚನೆ ನಡೆಸಿದ ಸಂದರ್ಭದ ಕುರಿತಾಗಿ ಮಾತನಾಡಿದರು.

ಕೃತಿಯನ್ನು ಪ್ರಕಟಿಸಿದ ಮಣಿಪಾಲ ಯೂನಿವರ್ಸಲ್ ಪ್ರೆಸ್ಸಿನ ನಿರ್ದೇಶಕಿ ಡಾ.ನೀತಾ ಇನಾಂದಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ಧರು. ರೇವತಿ ನಾಡಿಗೇರ್ ಕಾರ್ಯಕ್ರಮ ನಿರ್ವಹಿಸಿದರು. ಪೃಥ್ವಿರಾಜ ಕವತ್ತಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!