spot_img
Wednesday, January 22, 2025
spot_img

ತೆಕ್ಕಟ್ಟೆಯಲ್ಲಿ ಅಕ್ಯೂಪ್ರೆಶರ್ ಮತ್ತು ಸಜೋಕ್ ಥೆರಪಿಯ ಚಿಕಿತ್ಸಾ ಶಿಬಿರ ಉದ್ಘಾಟನೆ

ತೆಕ್ಕಟ್ಟೆ, ಜು.16: ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಲಯನ್ಸ್ ಕ್ಲಬ್, ಹಂಗಳೂರು ಜಂಟಿ ಆಶ್ರಯದಲ್ಲಿ ಜುಲೈ 16ರಿಂದ 22ರವರೆಗೆ ನಡೆಯುವ ಅಕ್ಯೂಪ್ರೆಶರ್ ಮತ್ತು ಸಜೋಕ್ ಥೆರಪಿಯ ಚಿಕಿತ್ಸಾ ಶಿಬಿರವನ್ನು ಲಯನ್ಸ್ ಅಧ್ಯಕ್ಷ ರಜತ್ ಹೆಗ್ಡೆ ಉದ್ಘಾಟಿಸಿದರು.

ಉದ್ಘಾಟನಾ ಮಾತುಗಳನ್ನಾಡಿದ ಅವರು, ನಮ್ಮ ದೇಹದ ಯಾವುದೇ ಭಾಗದ ನೋವು ಮತ್ತು ಖಾಯಿಲೆಗಳಿಗೆ ಸಂಬಂಧಿಸಿದ ಅಕ್ಯೂಪ್ರೆಶರ್ ಬಿಂದು ಪಾಯಿಂಟ್‌ಗಳಿಗೆ ಒತ್ತುವುದರಿಂದ ಆ ಸ್ಥಳದಲ್ಲಿ ರಕ್ತ ಪರಿಚಲನೆಯು ಸರಿಯಾಗಿ, ನೋವು ಮತ್ತು ಖಾಯಿಲೆಗಳು ಶಮನವಾಗುತ್ತದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾತನಾಡಿದ ಡಾ. ರಾಮಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್, ರಾಜಸ್ಥಾನದ ಚಿಕಿತ್ಸಕ ಲೋಕೇಶ್ ಪೀರನ ಮನೆ, ದೇಹದ ಅಂಗೈ ಅಂಗಾಲುಗಳಲ್ಲಿ ಇರುವ ಅಕ್ಯೂಪ್ರೆಶರ್ ಬಿಂದುಗಳಿಗೆ ಒತ್ತಡ ಕೊಡುವ ಚಿಕಿತ್ಸೆ ಇದಾಗಿದ್ದು ಈ ಪ್ರಾಕೃತಿಕ ಚಿಕಿತ್ಸೆಯು ಪುರಾತನದಲ್ಲಿ ಋಷಿ-ಮುನಿಗಳಿಂದ ಕಂಡುಹಿಡಿಯಲ್ಪಟ್ಟಿತ್ತು. ಔಷದ ರಹಿತವಾದ ಈ ಚಿಕಿತ್ಸೆ ನಮ್ಮ ದೇಹಕ್ಕೆ ಪುನಃಶ್ಚೇತನ ನೀಡುವ ಚಿಕಿತ್ಸೆ. ವಿಜ್ಞಾನ ಮನ್ನಣೆ ದೊರಕಿದ ಈ ಚಿಕಿತ್ಸೆಯಿಂದ ದೇಹಕ್ಕೆ ಯಾವುದೇ ಪಾರ್ಶ್ವ ತೊಂದರೆಗಳಿರುವುದಿಲ್ಲ ಎಂದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿಲ್‌ಫ್ರೆಡ್ ಮೆನೇಜಸ್, ಖಜಾಂಚಿ ರೋವನ್ ಡಿಕೋಸ್ಟ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!