spot_img
Wednesday, January 22, 2025
spot_img

ಕುಂದಾಪುರದ ಎಕ್ಸ್‌ಲೆಂಟ್‌ನಲ್ಲಿ ಗುರುಪೂರ್ಣಿಮೆ

ಕುಂದಾಪುರ: ಸುಣ್ಣಾರಿಯ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಶಾಲೆಯು ಜುಲೈ ೧೩ ರಂದು ಶಾಲೆಯ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಡಾ. ಕೆ ಕಿಶೋರ್ ಕುಮಾರ್ ಶೆಟ್ಟಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಅರಿವಿನಲ್ಲಿ ಗುರುವನ್ನು ಕಾಣುವುದರ ಜೊತೆಗೆ ಮಾನವೀಯ ಮೌಲ್ಯಕ್ಕೆ ಆದ್ಯತೆ ನೀಡಬೇಕು. ಅಬ್ದುಲ್ ಕಲಾಂರಂತಹ ಮಾನವೀಯ ಕಳಕಳಿಯ ವ್ಯಕ್ಯಿಗಳು ನಮಗೆ ಗುರುವಾಗಿ ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕರಾದ ಡಾ. ರಮೇಶ್ ಶೆಟ್ಟಿ ಅವರು ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರವಾಗಬೇಕು ಕೇವಲ ಗುರು ಪೂರ್ಣಿಮೆ ದಿನಕ್ಕೆ ಮಾತ್ರ ಗುರುವಿಗೆ ವಂದನೆ ಸಲ್ಲಿಸದೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಉದ್ದಕ್ಕೂ ಗುರುಗಳನ್ನು ತಮ್ಮ ಆದರ್ಶವಾಗಿ ಇಟ್ಟುಕೊಂಡಾಗ ಮಾತ್ರ ಯಶಸ್ಸು ಗಳಿಸಬಹುದು ಎಂದರು.

ಸಂಸ್ಥೆಯ ಖಜಾಂಚಿಯಾದ ಭರತ್ ಶೆಟ್ಟಿ ಮಾತನಾಡುತ್ತಾ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ ವಿದ್ಯಾರ್ಥಿಗಳು ಮೊದಲು ಗುರುವಿನಲ್ಲಿ ಶರಣಾಗಬೇಕು ಎಂದರು.

ಕನ್ನಡ ಉಪನ್ಯಾಸಕರಾದ ಶರತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು, ಮುಖ್ಯ ಶಿಕ್ಷಕಿ ಸುರೇಖಾ ವಂದಿಸಿದರು. ಎಕ್ಸ್‌ಲೆಂಟ್ ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!