spot_img
Wednesday, January 22, 2025
spot_img

ಕಾಲೇಜು ವಿದ್ಯಾರ್ಥಿಗಳ ಒತ್ತಡ

ಕಾಲೇಜು ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ವಹಣೆ
ಕಾಲೇಜು ವಿದ್ಯಾರ್ಥಿಗಳಲ್ಲಿ ಒತ್ತಡಕ್ಕೆ ಕಾರಣಗಳು ಏನು?

ಮನೆಯ ಹಣಕಾಸಿನ ಸಮಸ್ಯೆಗಳು, ಸಿಕ್ಕಿರುವ ಸ್ವಾತಂತ್ರ್ಯದ ಉಪಯೋಗ ಮಾಡಿಕೊಳ್ಳಲು ಗೊತ್ತಿಲ್ಲದೇ ಇರುವುದು, ಕಾಲೇಜಿಗೆ ಬಂದ ಕೂಡಲೇ ಅಪರಿಚಿತ ವ್ಯಕ್ತಿಗಳ ಸ್ನೇಹ, ಹಾಸ್ಟೆಲ್ನ ರೂಂಮೇಟ್ ಗಳೊಂದಿಗೆ adjust ಮಾಡಿಕೊಳ್ಳಲು ಕಷ್ಟ, ಶಾಲೆಯಲ್ಲಿ ಓದುವುದಕ್ಕೂ ಕಾಲೇಜಿನಲ್ಲಿ ಓದುವುದಕ್ಕೂ ಬಹಳ ವ್ಯತ್ಯಾಸವಿದೆ ಕಾಲೇಜಿನ ಪಠ್ಯ ಬಹಳಷ್ಟು ಪುಸ್ತಕಗಳಿಂದ ಓದಬೇಕಾಗುತ್ತದೆ, ಮನೆಯಲ್ಲಿ ಬಹಳಷ್ಟು ಸಮಸ್ಯೆಗಳಲ್ಲಿ ಅಪ್ಪ ಅಮ್ಮನ ನಡುವೆ ಜಗಳಗಳು, ಮನೆಯ ಮಂದಿಗೂ ಮಕ್ಕಳಿಗೂ generation gap ಇದರಿಂದಾಗಿ ತಾಕಲಾಟಗಳು, ವಯಸ್ಸಿನ ಮಹಿಮೆಯಿಂದಾಗಿ “ಲವ್” ಮತ್ತು ಲವ್ ಫೇಲ್ಯೂರ್ ಇದರಿಂದ ಹೊರಗೆ ಬರುವುದು, ಇವೆಲ್ಲ ಕಾಲೇಜು ಮಕ್ಕಳಲ್ಲಿ ಪ್ರಮುಖ ಸಮಸ್ಯೆಗಳು.

ಕಾಲೇಜು ವಿದ್ಯಾರ್ಥಿಗಳಲ್ಲಿ ಬರುವ ಸಾಮಾನ್ಯ ಮಾನಸಿಕ ಸಮಸ್ಯೆಗಳು
೧)ಖಿನ್ನತೆ ೨)ಆತಂಕ ಮನೋಬೇನೆ ೩)ನಿದ್ರೆಯ ಸಮಸ್ಯೆಗಳು ೪)ಮದ್ಯ ಮಾದಕ ದ್ರವ್ಯ ವ್ಯಸನ ೫)ತಲೆ ನೋವು ಬೆನ್ನು ಸ್ನಾಯು ಸೆಳೆತಗಳು ಒತ್ತಡದಿಂದಾಗಿ, ಖಿನ್ನತೆಯನ್ನು ಗುರುತಿಸುವುದು ಹೇಗೆ ?
*ಲವಲವಿಕೆಯಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದ ವಿದ್ಯಾರ್ಥಿ ಇತ್ತೀಚೆಗೆ ಯಾರೊಂದಿಗೂ ಮಾತನಾಡುವುದಿಲ್ಲ ಯಾರೊಂದಿಗೂ ಬೆರೆಯುವುದಿಲ್ಲ
*ಸಣ್ಣ ಪುಟ್ಟ ವಿಷಯಗಳಿಗೆ ಅಳುತ್ತಿರುವ ವಿದ್ಯಾರ್ಥಿ
*ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪದೇ ಪದೇ ಹೇಳುತ್ತಿರುವ ವಿದ್ಯಾರ್ಥಿ
*ನಿದ್ರಾಹೀನತೆ, ಹಸಿವೆ ಕಡಿಮೆಯಾದ ವಿದ್ಯಾರ್ಥಿ
ಆತಂಕ ಮನೋಬೇನೆ ಗುರುತಿಸುವುದು ಹೇಗೆ?
*ಲಿಫ್ಟ್‌ನಲ್ಲಿ ಹೋಗಲು ಹೆದರಿಕೆ ಬಸ್ ಹತ್ತಿ ಹೋಗಲು ಹೆದರಿಕೆ
*ತನಗೇನೂ ಗುಣವಾಗದ ಕಾಯಿಲೆ ಇರಬೇಕು ಎಂದು ಪದೇ ಪದೇ ಪರೀಕ್ಷೆ ಮಾಡಿಕೊಳ್ಳುತ್ತಿರುವುದು
*ತಲೆನೋವು ಬೆನ್ನುನೋವು ಹೃದಯ ಬಡಿತ ಜಾಸ್ತಿಯಾಯಿತು ಎಂದು ಹೇಳುತ್ತಿರುವುದು. ವೈದ್ಯರು ಪರೀಕ್ಷೆ ಮಾಡಿದಾಗ ಯಾವುದೇ ಸಮಸ್ಯೆಗಳು ಇರುವುದಿಲ್ಲ
*ಬಹಳ ಜನರ ಮುಂದೆ ಮಾತನಾಡಲು ಹೆದರಿಕೆ
*ಪರೀಕ್ಷೆಯ ಪೂರ್ವ ತಯಾರಿ ಚೆನ್ನಾಗಿದ್ದರೂ ಪರೀಕ್ಷೆಯಲ್ಲಿ ತಲೆತಿರುಗಿ ಬೀಳುವುದು, ಪರೀಕ್ಷೆಗೆ ಹೋಗಲು ಕೇಳದೇ ಇರುವುದು
ನಿದ್ರೆಯ ಸಮಸ್ಯೆಗಳನ್ನು ಗುರುತಿಸುವುದು ಹೇಗೆ?
*ನಿದ್ರಾಹೀನತೆ, ಮಲಗಿದ ಕೂಡಲೇ ನಿದ್ರೆ ಬಾರದೆ ಇರುವುದು ಅಥವಾ ರಾತ್ರಿ ಮಲಗಿ ಸುಮಾರು ಮೂರು ಗಂಟೆಯ ಹಾಗೆ ಎಚ್ಚರವಾಗುವುದು, ಅಥವಾ ಮಧ್ಯ ಮಧ್ಯೆ ಎಚ್ಚರಗೊಳ್ಳುವ ನಿದ್ರೆ.
*ನಿದ್ರೆಯ ಮಧ್ಯದಲ್ಲಿ ಎಚ್ಚೆತ್ತುಕೊಂಡು ಕಿರುಚಾಡುವುದು.
*ನಿದ್ರೆಯಲ್ಲಿ ಎದ್ದು ಓಡಾಡುವುದು, ಬಹಳಷ್ಟು ಹೆದರಿಕೆಯಿಂದ ಬೆವೆಯುವುದು.
*ನಿದ್ರೆಯಲ್ಲಿ ಮೂತ್ರ ಮಾಡಿಕೊಳ್ಳುವುದು
ಮದ್ಯ ಮಾದಕ ದ್ರವ್ಯ ವ್ಯಸನ, ಗುರುತಿಸುವುದು ಹೇಗೆ?
*ಸ್ವಲ್ಪ ಕುಡಿಯುತ್ತೇನೆ ಎಂದು ಹೋಗಿ ನಿಯಂತ್ರಣ ಮಾಡಲು ಆಗದೇ ಇರುವುದು
*ಕುಡಿತದ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ಅವರ ಮೈ ಮೇಲೆ ಎರಗುವುದು ಸಿಟ್ಟು ಮಾಡಿಕೊಳ್ಳುವುದು.
*ಕುಡಿತದ ಬಗ್ಗೆ ಕುಡಿತದ ಕಿಕ್ಕ್ ಇಳಿದ ಮರುದಿನ ಬೆಳಿಗ್ಗೆ ತಪ್ಪಿತಸ್ಥ ಮನೋಭಾವ
*ಬೆಳಿಗ್ಗೆ ಎದ್ದೊಡನೆ ಕುಡಿಯಲೇಬೇಕು ಅನ್ನುವ ಪರಿಸ್ಥಿತಿಗೆ ಬಂದವರು
ಮೈ ಕೈ ನೋವು ತಲೆನೋವು ಹೀಗೆ ಬೇರೆ ಬೇರೆ ತರದ ಮನೋದೈಹಿಕ ಸಮಸ್ಯೆಗಳುಳ್ಳ ಯುವಕರು, ಕೆಲವೊಮ್ಮೆ ಯುವಜನರಲ್ಲಿ ಒತ್ತಡದ ಕಾರಣದಿಂದಾಗಿ ತಲೆನೋವು ಪದೇಪದೇ ಬರುತ್ತಿರುತ್ತದೆ. ಅದು ಹೆಚ್ಚಾಗಿ ಕುತ್ತಿಗೆಯ ಹತ್ತಿರ ಇಲ್ಲವೇ ಲಲಾಟ ಭಾಗದಲ್ಲಿ, ಬೆನ್ನು ನೋವು, ಮೈ ಕೈ ನೋವು ಸುಸ್ತು.
*ಈ ನೋವುಗಳು ವೈದ್ಯಕೀಯ ತಪಾಸಣೆ ಮಾಡಿದಾಗ ಅದರ ಕಾರಣಗಳು ತಿಳಿಯುವುದಿಲ್ಲ
*ವಿಚಿತ್ರ ಸ್ಥಳಗಳಲ್ಲಿ ಈ ನೋವುಗಳು ಬರಬಹುದು
*ವೈದ್ಯರುಗಳು ತಿಳಿ ಹೇಳಿದರೂ ಕೂಡ ಬಳಲುತ್ತಿರುವವರು ಸಮಾಧಾನಗೊಳ್ಳುವುದಿಲ್ಲ
*ಬೇರೆ ಬೇರೆ ರಕ್ತ ತಪಾಸಣೆ, ಸಿಟಿ ಸ್ಕ್ಯಾನ್, ಎಂಆರ್‌ರೈ ಮಾಡಬೇಕು ಎಂದು ಕೇಳುತ್ತಾರೆ.

ಯುವಜನರಲ್ಲಿ ನಾವು ಗಮನಿಸಬೇಕಾಗಿರುವ ಇನ್ನೊಂದು ಸಮಸ್ಯೆ ಎಂದರೆ ಆತ್ಮಹತ್ಯೆ ಪ್ರಯತ್ನಗಳು.
ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳುವ ಯುವಕರು ಹಲವರು ಆತ್ಮಹತ್ಯೆಯ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಯುವಜನರಲ್ಲಿ ಸಾವು ಸಂಭವಿಸುವ ಪ್ರಮುಖ ಎರಡನೇ ಮುಖ್ಯ ಕಾರಣ ಆತ್ಮಹತ್ಯೆ. ಆತ್ಮಹತ್ಯೆ ಮಾಡುವ ಯುವಜನರು ಈ ಬಗ್ಗೆ ಸುಳಿವನ್ನು ತಮ್ಮ ಪ್ರೀತಿ ಪಾತ್ರದಲ್ಲಿ ಮಿತ್ರರಲ್ಲಿ ನೀಡಿರುತ್ತಾರೆ. ಹಲವು ಬಾರಿ ಈ ಸುಳಿವುಗಳನ್ನು ಮನೆಯವರು ಗಮನಿಸದೆ ಸಮಸ್ಯೆಗಳು ಆಗುತ್ತವೆ. ಈ ಯುವಜನರು ಆತ್ಮಹತ್ಯೆಯ ಬಗ್ಗೆ ಹೇಳಿಕೊಂಡಾಗ ಅವರೊಂದಿಗೆ ವರ್ತಿಸುವ ರೀತಿ ಬದಲಾಗಬೇಕು. ಅವರಿಗೆ ಸಲಹೆಗಳನ್ನು ಕೊಡುವ ಬದಲು ಅವರ ಸಮಸ್ಯೆಯನ್ನು ಕೇಳುವಂತಾಗಬೇಕು. ಆತ್ಮಹತ್ಯೆಯ ಪ್ರಯತ್ನ ಮಾಡಿ ಬದುಕಿ ಉಳಿದವರು, ಪದೇ ಪದೇ ಆತ್ಮಹತ್ಯೆ ಮಾಡುತ್ತೇನೆ ಅನ್ನುವವರು ಮನೋವೈದ್ಯರ ಸಲಹೆಯನ್ನು ಪಡೆಯುವುದು ಅತೀ ಅಗತ್ಯ. ಪರೀಕ್ಷೆಯ ಆತಂಕ, ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಮಾರ್ಕ ಬರದೇ ಇರುವುದು, ಲವ್ ಫೇಲ್ಯೂರ್, ಮನೆಯವರಿಂದ ಅಥವಾ ಇತರರಿಂದ ಅವಮಾನಗೊಂಡ ಸಂದರ್ಭಗಳಲ್ಲಿ, ಮನೆಯವರಿಂದ ಓದುವುದರ ಬಗ್ಗೆ ಅಥವಾ ಯಾವುದೇ ಕಾರಣದ ಬಗ್ಗೆ ತೀವ್ರ ಒತ್ತಡಕ್ಕೆ ಒಳಗಾದಾಗ, ಸ್ವಂತ ನಿರೀಕ್ಷೆ ಅಥವಾ ಎಲ್ಲರ ನಿರೀಕ್ಷೆಯಂತೆ ಸಾಧನೆಗಳು ಉಂಟಾಗದೇ ಇದ್ದಾಗ ಆತ್ಮಹತ್ಯೆಯ ಪ್ರಯತ್ನವನ್ನು ನಮ್ಮ ಯುವಜನರು ಮಾಡುತ್ತಿದ್ದರೆ, ಕೆಲವರಂತೂ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವುದು ದುರದೃಷ್ಟಕರ. ಆತ್ಮಹತ್ಯೆಯ ತಡೆಯ ಬಗ್ಗೆ ದೇಶವು ಒಂದು ರಾಷ್ಟ್ರೀಯ ನೀತಿ ಮಾಡಬೇಕಾದುದು ಅತಿ ಅಗತ್ಯ.

ಒತ್ತಡ ನಿವಾರಣಾ ತಂತ್ರಗಳು
ಯುವಜನತೆಗೆ ಒತ್ತಡ ನಿವಾರಿಸುವಲ್ಲಿ ೧)ದೈಹಿಕ ವ್ಯಾಯಾಮಗಳು ಪ್ರಥಮ ಒತ್ತಡ ನಿವಾರಣಾ ತಂತ್ರ.ದಿನ ಒಂದು ಗಂಟೆ ದೈಹಿಕ ವ್ಯಾಯಾಮಗಳು, ಓಡುವುದು, ಈಜುವುದು, ಸೈಕಲ್ ಓಡಿಸುವುದು, ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವುದು ಮಾಡಿದಾಗ ದೇಹದಲ್ಲಿ ಎಂಡಾರ್ಫಿನ್ಸ್ ಎಂಬ ನ್ಯೂರೋ ಕೆಮಿಕಲ್ಸ್ ಉತ್ಪತ್ತಿಗೊಂಡು ಮನಸ್ಸಿಗೆ ಖುಷಿ ಸಿಗುತ್ತದೆ. ದೈಹಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ.
೨)ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಂಡರೆ ಸಮಸ್ಯೆ ಅರ್ಧ ಕಡಿಮೆಯಾಗುತ್ತದೆ ಮನಸ್ಸಿನಲ್ಲಿ ಇಟ್ಟುಕೊಂಡರೆ ದ್ವಿಗುಣವಾಗುತ್ತದೆ a problem shared his problem halved problem kept in mind is problem doubled. ಯಾರಾದರೂ ಪ್ರೀತಿ ಪಾತ್ರರಲ್ಲಿಯೋ ಅಥವಾ ನಂಬಿಕಸ್ಥ ಗುರುವಿನಲ್ಲಿಯೋ (classteacher/teacher counsellor) ಸಮಸ್ಯೆಗಳನ್ನು ಹಂಚಿಕೊಂಡರೆ ಒಳ್ಳೆಯದು. ಆದರೆ ಕೆಲವರು ನೀವು ಹೇಳಿದ ವಿಷಯಗಳನ್ನು ಗೌಪ್ಯವಾಗಿ ಇಡುವುದಿಲ್ಲ ಅಂಥವರಿಂದ ದೂರ ಇರಿ.
೩)ನಮ್ಮಿಂದ ಆಗದ ಕೆಲಸಗಳನ್ನು ಆಗುವುದಿಲ್ಲ ಎನ್ನುವುದನ್ನು ಕಲಿಯಬೇಕು. ಗುರುಗಳನ್ನು ಮೆಚ್ಚಿಸಲು ಸ್ನೇಹಿತರನ್ನು ಮೆಚ್ಚಿಸಲು ಒತ್ತಡಕ್ಕೆ ಮಣಿದು ಕೆಲಸಗಳನ್ನು ಮಾಡಿದರೆ ಒತ್ತಡ ಇನ್ನೂ ಜಾಸ್ತಿಯಾಗುತ್ತದೆ.
೪)ಪ್ರತಿ ದಿನ ಏನೇನು ಕೆಲಸ ಮಾಡಬೇಕು ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.
೫)ನಿಮ್ಮನ್ನು ಬೇರೆಯವರೊಂದಿಗೆ ತುಲನೆ ಮಾಡಿಕೊಳ್ಳಬೇಡಿ. EVERY ONE OF YOU IS UNIQUE ಇದನ್ನು ಅರ್ಥ ಮಾಡಿಕೊಳ್ಳಿ ನಿಮ್ಮಲ್ಲಿ ಕೆಲವು ವಿಷಯಗಳಲ್ಲಿ ಬಲಹೀನತೆಗೆ ಇರಬಹುದು, ಆದರೆ ಇನ್ನೂ ಕೆಲವು ವಿಷಯಗಳಲ್ಲಿ ನೀವು ಬಹಳಷ್ಟು ಸಾಮರ್ಥ್ಯವನ್ನು ಹೊಂದಿರುತ್ತೀರಿ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
೬)ಮೂಢನಂಬಿಕೆಗಳಿಂದ ದೂರ ಇರಿ ಕಾಯಿಲೆಗಳು ಬಂದಾಗ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಬೇಕು, ಜಾತಕ, ದರ್ಶನ, ನಾಗದೋಷ ಎಂದು ಅಂದುಕೊಂಡು ಸಮಯ ವ್ಯರ್ಥ ಮಾಡಬೇಡಿ. ಪ್ರತಿಯೊಂದು ಸಮಸ್ಯೆಗೆ ಒಂದು ಪರಿಹಾರ ಇದ್ದೇ ಇದೆ. ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ. ಜೀವನವೊಂದು ಪಗಡೆಯಾಟದ ಹಾಗೆ, ಇಲ್ಲಿ ಬಹಳಷ್ಟು ಸಾರಿ chance factor ಮತ್ತು probability ಕೆಲಸ ಮಾಡುತ್ತದೆ ನೆನಪಿರಲಿ.

ಖಿನ್ನತೆ ಆತಂಕ ಮನೋಬೇನೆ ಆತ್ಮಹತ್ಯೆಯ ಯೋಚನೆ ಮದ್ಯ ಮಾದಕ ದ್ರವ್ಯ ಅತಿಯಾಗಿ ಸೇವಿಸುವುದು ಇಂತಹ ಸಂದರ್ಭಗಳಲ್ಲಿ ಮನೋವೈದ್ಯಕೀಯ ಸಲಹೆ ಅತೀ ಅಗತ್ಯ. ಮನೋವೈದ್ಯರು ಎಂದರೆ ಹುಚ್ಚರ ಡಾಕ್ಟ್ರ ಅಂತ ತಿಳಿಯಬೇಡಿ. ದೇಹಕ್ಕೆ ಸಮಸ್ಯೆ ಬಂದಾಗ ಹೇಗೆ ಫಿಜಿಷಿಯನ್ ವೈದ್ಯರ ಹತ್ತಿರ ಹೋಗುತ್ತಿರೋ ಹಾಗೆಯೇ ಮನಸ್ಸಿಗೆ ಸಮಸ್ಯೆ ಬಂದಾಗ ಮನೋವೈದ್ಯರ ಹತ್ತಿರ ಹೋಗಬೇಕು. ಅಲ್ಪಮಟ್ಟದ ಮಾನಸಿಕ ಸಮಸ್ಯೆಗಳಿದ್ದರೆ ಮಾತನಾಡುವ ಚಿಕಿತ್ಸೆ ಮನೋಚಿಕಿತ್ಸೆ ಉಪಯೋಗಿಸಿದರೆ ಚಿತ್ತವಿಕಲತೆ, ತೀವ್ರ ಬಗೆಯ ಖಿನ್ನತೆ, ಆತ್ಮಹತ್ಯೆಯ ಪ್ರಯತ್ನ ಮಾಡಿದವರಿಗೆ ಮಾತ್ರೆ ಚಿಕಿತ್ಸೆ ವೈದ್ಯರು ಹೇಳಬಹುದು, ತೀವ್ರ ಬಗೆಯ ಸಮಸ್ಯೆಗಳಿದ್ದರೆ ಅಂತಹ ಸಂದರ್ಭದಲ್ಲಿ ವೈದ್ಯರು ವಿದ್ಯುತ್ ಕಂಪನ ಚಿಕಿತ್ಸೆ ಈ ಬಗ್ಗೆ ಕೂಡ ನಿರ್ಧರಿಸಬಹುದು. ಇಂತಹ ಚಿಕಿತ್ಸೆಗಳಿಂದ ಎಷ್ಟೋ ಜನರ ಜೀವ ಕಾಪಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆದ್ದರಿಂದ ವೈಜ್ಞಾನಿಕವಾಗಿ ಯೋಚಿಸಿ ಯಾವುದೇ ಚಿಕಿತ್ಸೆ ನಿರಾಕರಿಸಬೇಡಿ. ಒಂದು ವೈದ್ಯರ ನಿರ್ಧಾರದ ಬಗ್ಗೆ ನಿಮಗೆ ಸಹಮತವಿಲ್ಲದಿದ್ದರೂ ಇನ್ನೊಂದು ವೈದ್ಯರೊಂದಿಗೆ ಹೋಗಿ ಮಾತನಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!