spot_img
Monday, March 23, 2026
spot_img

ತೀವ್ರ ಬಗೆಯ ಮನೋರೋಗ ಉಳ್ಳವರ ಮನೆಯವರು ಕೇಳುವ ಪ್ರಶ್ನೆ “ನಮ್ಮ ನಂತರ ಮುಂದೇನು?”

ನಮ್ಮ ನಂತರ ಮುಂದೆ ಏನು? ತೀವ್ರ ಮನೋರೋಗ ಅಂದರೆ ಇಚ್ಛಿತ ಚಿತ್ತವಿಕಲತೆ, ತೀವ್ರ ಬೈಪೋಲಾರ್ ಅಸ್ವಸ್ಥತೆ, ತೀವ್ರ ಗೀಳು ಮನೋರೋಗ ಮುಂತಾದ ಸಮಸ್ಯೆಗಳಿಂದ ಬಳಲುತ್ತಾ ಇರುವ ರೋಗಿಗಳ ಮನೆಯವರು ಮುಂದೆ ಏನು ಮಾಡಬಹುದು? ಇದು ಒಂದು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕಷ್ಟ ಆದ ಕಾರಣ ನಾವು ಇದನ್ನು ಮುಂದೂಡುತ್ತಾ ಹೋಗುತ್ತೇವೆ. ಈ ಬಗ್ಗೆ ಯೋಚನೆ ಮಾಡುವುದು ನಿರ್ಧಾರ ತೆಗೆದುಕೊಳ್ಳುವುದು ಆದಷ್ಟು ಬೇಗನೆ ಮಾಡಬೇಕು. ಅದರಲ್ಲೂ ಆರೈಕೆದಾರರು ವೃದ್ಧಾಪ್ಯದಲ್ಲಿ ಇದ್ದಾರೆ ಎಂದು ಆದಲ್ಲಿ ತುರ್ತಾಗಿ ಯೋಚಿಸಿ.

ನಿಮ್ಮ ನಂತರ ನಿಮ್ಮದೇ ಇತರೆ ಮಕ್ಕಳು ಅಥವಾ ಹತ್ತಿರದ ಸಂಬಂಧಿಕರು ಈ ನಿಮ್ಮ ಸಮಸ್ಯೆ ಇರುವ ವ್ಯಕ್ತಿಯನ್ನು ನೋಡಿಕೊಳ್ಳಲು ಸಿದ್ಧರಿದ್ದಾರಾ ಮೊದಲು ನೋಡಿಕೊಳ್ಳಿ. ಹಾಗೆ ಸಿದ್ಧರಿದ್ದಾರೆ ಎಂದಾದರೆ ಈ ವಿಷಯವನ್ನು ನಿಮ್ಮ ಇಬ್ಬರು ವ್ಯಕ್ತಿಗಳು ಅಂದರೆ ಕಾಯಿಲೆ ಇಂದ ಬಳಲುತ್ತಾ ಇರುವವರು ಮತ್ತು ಆರೈಕೆಗೆ ಸಿದ್ದರಾಗಿ ಇರುವವರು ಅವರೊಂದಿಗೆ ಚರ್ಚಿಸಿ. ನಿಮ್ಮ ನಂತರ ಕಾನೂನಾತ್ಮಕವಾಗಿ ಅವರ ಆರೈಕೆಗಾಗಿ ನೀವು ಅಂಗವಿಕಲರ ಕಾಯಿದೆರೊಂದಿಗಿನ ವ್ಯಕ್ತಿಗಳ ಹಕ್ಕುಗಳು (RPWD ACT 2016) ಅಡಿಯಲ್ಲಿ ಪ್ರಯತ್ನಿಸಬಹುದು ಆರ್ಪಿಡಬ್ಲ್ಯೂಡಿ ಕಾಯಿದೆಯ ಸೆಕ್ಷನ್ ೧೪ ಮಾನಸಿಕ ಸಮಸ್ಯೆ ಯಿಂದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ರಕ್ಷಕತ್ವವನ್ನು (guardianship) ಒದಗಿಸುತ್ತದೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಇದನ್ನು ನಿಮ್ಮ ಊರಿನ ವಕೀಲರೊಂದಿಗೆ ಚರ್ಚಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪಡೆದುಕೊಳ್ಳತಕ್ಕದ್ದು. ನಿಮ್ಮ ನಂತರ ಅಥವಾ ನೀವು ಏನಾದರೂ ತೀವ್ರ ಅನಾರೋಗ್ಯದಿಂದ ಬಳಲಿ ಈ ಮಾನಸಿಕ ಅಸ್ವಸ್ಥರ ಆರೈಕೆಗೆ ನಿಮ್ಮಿಂದ ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿಯಲ್ಲಿ ರಕ್ಷಕತ್ವ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಒಂದೊಮ್ಮೆ ರಕ್ಷಕತ್ವ ಎಂಬ ಜವಾಬ್ದಾರಿ ಹೊರಲು ಯಾರು ಸಿದ್ದರಿಲ್ಲ ಎಂದಾದಲ್ಲಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮೊರೆಹೋದಲ್ಲಿ ಸರ್ಕಾರದ ಪರವಾಗಿ ಸೂಕ್ತ ವ್ಯವಸ್ಥೆ ಒಂದು ಸಂಸ್ಥೆ ಯಾ ವ್ಯಕ್ತಿಗೆ ವಹಿಸಬಹುದು.

ಇಂತಹ ವ್ಯಕ್ತಿಗಳ ಯೋಗಕ್ಷೇಮಕ್ಕಾಗಿ ನಿಮ್ಮ ನಂತರ ಸರಿಯಾದ ವ್ಯವಸ್ಥೆ ಮಾಡಲು ನೋಂದಾಯಿತ ಉಯಿಲನ್ನು ಮಾಡುವುದು ಉತ್ತಮ. ಒಬ್ಬ ವ್ಯಕ್ತಿಯು ತನ್ನ ಮರಣಾನಂತರ ತನ್ನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಇರುವ ತನ್ನ ಅಪೇಕ್ಷೆಯನ್ನು ಅಥವಾ ಇಚ್ಛೆಯನ್ನು ತಿಳಿಸಿ ಕಾನೂನಿನನ್ವಯ ಮಾಡುವ ಘೋಷಣೆಯೇ ಉಯಿಲು ಅಥವಾ ಮೃತ್ಯುಪತ್ರ ಎಂಬುದಾಗಿ ಭಾರತೀಯ ವಾರಸಾ ಅಧಿನಿಯಮ, 1925 Indian Succession Act, 1925 ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ಇದರ ಪ್ರಕಾರ ಉಯಿಲು ಎಂದರೆ…
1) ಒಬ್ಬ ವ್ಯಕ್ತಿಯು ಕಾನೂನಿನನ್ವಯ ಮಾಡಿದ ಘೋಷಣೆ.
2) ಆ ಘೋಷಣೆಯು ಆತನ ಮರಣಾನಂತರ ಆತನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಆತನ ಅಪೇಕ್ಷೆ ಅಥವಾ ಇಚ್ಛೆಯನ್ನು ತಿಳಿಸುವಂತಿರಬೇಕು.
3) ಆ ಘೋಷಣೆಯು ಕಾನೂನುಬದ್ಧವಾಗಿ ಇರಬೇಕು: ಅಂದರೆ ವ್ಯಕ್ತಿಯು ಯಾವ ಆಸ್ತಿಯ ಸಂಬಂಧವಾಗಿ ಘೋಷಣೆಯನ್ನು ಮಾಡಿರುತ್ತಾನೆಯೋ ಅಂತಹ ಆಸ್ತಿಯನ್ನು ಆತನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವನ್ನು ಹೊಂದಿರಬೇಕು. ಅಲ್ಲದೆ ಆತನ ಉಯಿಲು ಮಾಡುವ ಸಾಮರ್ಥ್ಯವನ್ನು ಹೊಂದಿರತಕ್ಕದ್ದು.

  • ಉಯಿಲು ಲಿಖಿತರೂಪದಲ್ಲಿ ಇರಬೇಕು. ಉಯಿಲನ್ನು ನೊಂದಣಿ (Registration) ಮಾಡಿಸುವುದು ಕಡ್ಡಾಯವಲ್ಲ. ಆದರೆ ನೊಂದಾಯಿತ ಉಯಿಲಿನ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಅಲ್ಲದೆ ಮೂಲಪ್ರತಿ ಕಳೆದುಹೋದ ಸಂದರ್ಭದಲ್ಲಿ ಅದರ ದೃಡೀಕೃತ ನಕಲನ್ನು ಪಡೆದು ಜಾರಿಗೆ ತರಬಹುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆಸ್ತಿಯ ಎಲ್ಲಾ ಹಕ್ಕುಗಳಿಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಫಲಾನುಭವಿಯು ಆಸ್ತಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಉಯಿಲಿನ ಲೇಖಕರು ನಂಬಿದರೆ, ಅವರು ಫಲಾನುಭವಿಗೆ ಸಹಾಯ ಮಾಡಲು ರಕ್ಷಕತ್ವವನ್ನು ಯಾರಿಗಾದರೂ ಕೊಟ್ಟು ಅಸ್ತಿ ಈ ಅಸ್ವಸ್ಥರ ಪರವಾಗಿ ನೇಮಿಸಬೇಕು.
    ತಾಯಿ ತಂದೆಯರು ಬದುಕಿದ್ದಾಗಲೇ ಮಕ್ಕಳ ನೋಡಿಕೊಳ್ಳಲು ಸಮಸ್ಯೆ ಇದ್ದಲ್ಲಿ ಈ ವ್ಯಕ್ತಿಗಳ ನೋಡಿಕೊಳ್ಳಲು ಒಂದು ದತ್ತಿಯನ್ನು ಯಾ ಟ್ರಸ್ಟ ತಾಯಿತಂದೆಯರು ಸ್ಥಾಪಿಸಬಹುದು. ವಿಲ್ಗಿಂತ ಭಿನ್ನವಾಗಿ, ವ್ಯಕ್ತಿಯು ಜೀವಂತವಾಗಿರುವಾಗ ಟ್ರಸ್ಟ್ ಕಾರ್ಯನಿರ್ವಹಿಸಬಹುದು.
    ಟ್ರಸ್ಟ್ ಎನ್ನುವುದು ಅದನ್ನು ರಚಿಸಿದ ವ್ಯಕ್ತಿಯ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಅಂದರೆ ತಮ್ಮ ಮನೆಯ ಈ ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಯ ಯೋಗಕ್ಷೇಮ ನೋಡಿಕೊಳ್ಳುವ ಉದ್ದೇಶದೊಂದಿಗೆ ಕೂಡ ಮಾಡಬಹುದು. ಟ್ರಸ್ಟ್ ರಚಿಸಲು ಯಾವುದೇ ಕನಿಷ್ಠ ಆಸ್ತಿ ಅಗತ್ಯವಿಲ್ಲ. ಟ್ರಸ್ಟ್‌ಗಳನ್ನು ಭಾರತೀಯ ಟ್ರಸ್ಟ್‌ಗಳ ಕಾಯಿದೆ, 1882ರ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.
    ಮಾನಸಿಕ ಅಸ್ವಸ್ಥ ವ್ಯಕ್ತಿಯ ಪೋಷಕರು/ಸಂಬಂಧಿಗಳು ಟ್ರಸ್ಟ್ ರಚಿಸಬಹುದು. ಟ್ರಸ್ಟ್ ಅನ್ನು ರಚಿಸಲು ಲೇಖಕರು (ಟ್ರಸ್ಟ್ ಅನ್ನು ರಚಿಸುವ ವ್ಯಕ್ತಿ) ಮತ್ತು ಕನಿಷ್ಠ ಇಬ್ಬರು ಟ್ರಸ್ಟಿಗಳು (ನಿರ್ವಹಣಾ ಸಮಿತಿಯ ಸದಸ್ಯರು) ಇರಬೇಕು.
    ಪೋಷಕರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹಿತೈಷಿಗಳು ಅಥವಾ ಸಂಬಂಧಿಕರನ್ನು ಟ್ರಸ್ಟ್ ನ ಲೇಖಕ ಮತ್ತು ಟ್ರಸ್ಟಿಗಳು ಆಗುವಂತೆ ವಿನಂತಿಸಬಹುದು, ಹೀಗೆ ನಿಯುಕ್ತಿಗೊಂಡ ಟ್ರಸ್ಟೀಗಳು ಉದ್ದೇಶಿತ ಮನೋವೈಕಲ್ಯದ ವ್ಯಕ್ತಿಯ ಯೋಗಕ್ಷೇಮ ನೋಡಿಕೊಳ್ಳುವ ಹಿತಚಿಂತಕರು ಆಗಿರಬೇಕು.
  • ಅನೇಕ ಟ್ರಸ್ಟಿಗಳು ಭಾಗಿಯಾಗಿರುವುದರಿಂದ, ಟ್ರಸ್ಟ್‌ನ ಆಸ್ತಿ ದುರುಪಯೋಗ ಅಪರೂಪ.
    *ಆದಾಗ್ಯೂ ಟ್ರಸ್ಟ್ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳಲು ಟ್ರಸ್ಟಿಗಳ ನಡುವೆ ಒಪ್ಪಂದವಿದ್ದರೆ, ಹಾಗೇನಾದರು ದುರುಪಯೋಗ ನಡೆಯುತ್ತಾ. ಇದ್ದರೆ ಯಾವುದೇ ವ್ಯಕ್ತಿಯು ಪೊಲೀಸ್, ಆದಾಯ ತೆರಿಗೆ ಇಲಾಖೆ ಅಥವಾ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಟ್ರಸ್ಟ್ ಅನ್ನು ರಚಿಸುವಾಗ ನಿಮ್ಮ ವಕೀಲರನ್ನು ಸಂಪರ್ಕಿಸಿ. ಅವರು ಸಂಪೂರ್ಣ ಕಾನೂನಿನ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಸರ್ಕಾರದ ಇಲಾಖೆಗಳಿಂದ ಪಿಂಚಣಿ ಪಡೆಯುವ ತಾಯಿತಂದೆ ಯಾ ಇತರ ಪೋಷಕರು ಗಮನಿಸಬೇಕಾದ ಇನ್ನೊಂದು ವಿಷಯ ಅಂದರೆ ಮಾನಸಿಕ ಅಥವಾ ದೈಹಿಕ ಅಂಗವೈಕಲ್ಯದಿಂದ ಕೆಲಸ ಮಾಡಿ ಜೀವನಸಾಗಿಸಲು ಸಾಧ್ಯವಾಗದ ಮಕ್ಕಳು ಯಾ ಅಣ್ಣ ತಮ್ಮಂದಿರು ನೀವು ಪೋಷಿಸಬೇಕಿದ್ದರೆ ನಿಮ್ಮ ಮರಣದ ನಂತರ ನಿಮ್ಮ ಸಂಗಾತಿಯು ಪಿಂಚಣಿಯನ್ನು ಪಡೆಯುತ್ತಾರೆ ಮತ್ತು ನಂತರ ಈ ಅಂಗವಿಕಲ ವ್ಯಕ್ತಿ ಸೂಕ್ತ ಸರ್ಕಾರಿ ಅಧಿಕಾರಿಗಳು ಪ್ರಮಾಣೀಕರಿಸಿದಂತೆ ಅವರ ಅಂಗವೈಕಲ್ಯದ ಅರ್ಹತೆಗೆ ಅನುಗುಣವಾಗಿ ಪಿಂಚಣಿ ಪಡೆಯುತ್ತಾರೆ. (ಅದು ಅವರ ಜೀವನೋಪಾಯವನ್ನು ಗಳಿಸಲು ಸಾಧ್ಯವಾಗದ ಅಂಗವೈಕಲ್ಯವಾಗಿರಬೇಕು) ಇದು CCS (ಪಿಂಚಣಿ) ನಿಯಮಗಳು, 1972ರ ನಿಯಮ 54 (6) ರಂತೆ, ಮರಣ ಹೊಂದಿದ ಸರ್ಕಾರಿ ನೌಕರ ಅಥವಾ ಪಿಂಚಣಿದಾರರ ಮಗು/ಸಹೋದರರು ಮಾನಸಿಕ ಅಥವಾ ದೈಹಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದರೆ, ಅವರು ಅಥವಾ ಅವಳು ಜೀವನಪರ್ಯಂತ ಕುಟುಂಬ ಪಿಂಚಣಿಗೆ ಅರ್ಹರು.
    ಮೇಲೆ ಹೇಳಿದ ವಿಷಯಗಳ ಗಮನಿಸಿ ಈ ಕೂಡಲೇ ನಿಮ್ಮ ಪರಿಚಯದ ವಕೀಲರನ್ನು ಹಾಗು ನೀವು ನೋಡುತ್ತಾ ಇರುವ ಮನೋವೈದ್ಯರೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಿ. ನಿಮ್ಮ ಮನೆಯಲ್ಲಿ ಇರುವ ನಿಮ್ಮ ಈ ಸಂಬಂದಿಗೆ ಸಹಾಯ ಮಾಡಿ.
    ತೀವ್ರ ಬಗ್ಗೆಯ ಮಾನಸಿಕ ಅರೋಗ್ಯ ತೊಂದರೆ ಇರುವವರ udid card ಮಾಡಲು ಶುರು ಮಾಡಿ ಇದು ಮೊದಲ ಹೆಜ್ಜೆ. udid ಕಾರ್ಡ್ ಮಾಡುವ ಬಗ್ಗೆ ಮುಂದಿನ ವಾರ ಬರೆಯುವ ಲೇಖನದಲ್ಲಿ ಹೇಳುತ್ತೇನೆ.
  • ವಿಶೇಷವಾಗಿ ಗಮನಿಸಿ ಮುಂದಿನ ಅಂಕಣದಲ್ಲಿ ಬುದ್ಧಿಮಾಂದ್ಯತೆ, ಆಟಿಸಂ ಮುಂತಾದ ಅಂಗವೈಕಲ್ಯಗಳ ಮನೆಯವರು ಏನು ಮಾಡಬಹುದು ಎಂಬುದು ಬರೆಯುತ್ತೇನೆ. ಈ ಬಾರಿ ಬರೆದಿರುವುದು ಕೇವಲ ತೀವ್ರ ಮಾನಸಿಕ ತೊಂದರೆಯ ವ್ಯಕ್ತಿಗಳ ಪೋಷಕರಿಗೆ ಮಾತ್ರ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!