spot_img
Wednesday, January 22, 2025
spot_img

ಬಹುಮುಖ ಪ್ರತಿಭೆ ಡಾ. ವಾಣಿಶ್ರೀ ಕಾಸರಗೋಡು ‘ಗಡಿನಾಡ ಕನ್ನಡತಿ’

ವೃತ್ತಿಯಲ್ಲಿ ವೈದ್ಯೆ ಪ್ರವೃತ್ತಿಯಲ್ಲಿ ಸಾಹಿತಿ, ಕ್ರೀಡಾಪಟು, ಹಾಡುಗಾರ್ತಿ, ನಿರೂಪಕಿ, ಬಹುಭಾಷಾ ಕವಿಯತ್ರಿ ಸಂಘಟಕಿ, ಹಾಗೂ ಪ್ರಸ್ತುತ ಕನ್ನಡ ಪರ ಹೋರಾಟಗಾರ್ತಿ. ಇವರು ಹಲವಾರು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ, ಕವಿಗೋಷ್ಠಿ ಅಧ್ಯಕ್ಷತೆ, ಹಾಗೂ ಕೃತಿ ಬಿಡುಗಡೆ ಮುಂತಾದವುಗಳಲ್ಲಿ ಸಾಹಿತ್ಯಪರ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವ ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು.

ಕನ್ನಡ, ತುಳು, ಮಲಯಾಳ, ಹವ್ಯಕ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲೂ ಕವನ ಬರೆಯಬಲ್ಲ ಬಹುಭಾಷಾ ಕವಿಯತ್ರಿ ಡಾ.ವಾಣಿಶ್ರೀ ಕನ್ನಡಪರ ಮನಸ್ಸುಗಳ ಎಚ್ಚರಿಸುತ್ತ, ಸ್ಪೂರ್ತಿ ತುಂಬುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭರವಸೆಯ ಹೆಜ್ಜೆಗಳ ಇಡುತ್ತಿರುವ ಇವರದ್ದು ಬಹುಶ್ರುತ ಪ್ರತಿಭೆ.

ಪಾರ್ಪಜೆ ಶ್ರೀ ಈಶ್ವರ ಭಟ್ ಹಾಗೂ ಶ್ರೀಮತಿ ದೇವಕಿ ಈಶ್ವರ ಭಟ್ ಇವರ ಎರಡನೇ ಮುದ್ದಿನ ಮಗಳಾಗಿ ಪಾರ್ಪಜೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇಲ್ಲಿ ಪೂರೈಸಿದರು. ಎಳವೆಯಲ್ಲಿಯೇ ಇವರು ಆಟೋಟಗಳಲ್ಲಿ,ಪಾಠಗಳಲ್ಲಿ ಹಾಗೂ ಸಾಂಸ್ಕೃತಿಕ ವಾಗಿ ಹಾಗೆ ಎಲ್ಲದರಲ್ಲೂ ಮುಂದಿದ್ದರು. ಶಾಲಾ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ೧೦೦, ೨೦೦, ೪೦೦ ಮೀಟರ್ ಓಟಗಳಲ್ಲಿ ಹಾಗೂ ೧೦೦ ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಗಳನ್ನು ಪಡೆದು ಚಾಂಪಿಯನ್ ಎನಿಸಿಕೊಂಡಿದ್ದರು. ಲಾಂಗ್ ಜಂಪ್, ಹೈ ಜಂಪ್, ರಿಲೇ ಓಟ, ಕಬಡ್ಡಿ, ಖೋಖೊ, ವಾಲಿಬಾಲ್, ತ್ರೋ ಬಾಲ್, ಟೆನ್ನಿಸ್, ಎಲ್ಲಾ ಆಟಗಳಲ್ಲಿ ಪ್ರಥಮವಾಗಿರುತ್ತಿದ್ದರು. ಕ್ರೀಡೆ, ಭಾಷಣ ಹಾಗೂ ಓದಿನಲ್ಲಿ ಹಲವಾರು ಗೌರವ ಪದಕಗಳನ್ನು ಗಳಿಸಿರುತ್ತಾರೆ. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದವರಿಂದ ಬಹುಮುಖ ಪ್ರತಿಭೆ ಸನ್ಮಾನ ಪಡೆದಿರುತ್ತಾರೆ. ಈಗಲೂ ಕ್ರೀಡೆಯಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದರೆ. ಆಕಾಶವಾಣಿಯಲ್ಲೂ ಕಾರ್ಯಕ್ರಮವನ್ನು ನೀಡಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿರುತ್ತಾರೆ. ಓದಿನಲ್ಲೂ ಕೂಡ ತರಗತಿಗೆ ಪ್ರಥಮವಾಗಿರುತ್ತಿದ್ದರು. ಮುಂದಿನ ವಿದ್ಯಾಭ್ಯಾಸವನ್ನು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿ ಪಡೆದಿರುತ್ತಾರೆ. ಮುಂದೆ ಕೆ ವಿ ಜಿ ಆಯುರ್ವೇದ ಕಾಲೇಜು ಸುಳ್ಯ ಇಲ್ಲಿ ಆಯುರ್ವೇದ ವೈದ್ಯಕೀಯ ಶಿಕ್ಷಣವನ್ನು ಪಡೆದಿರುತ್ತಾರೆ. ಶಿಕ್ಷಣದ ನಂತರ ಹಲವಾರು ಕಡೆ ವೈದ್ಯಕೀಯ ಪ್ರಾಕ್ಟೀಸ್ ಮಾಡಿದ್ದಾರೆ.

ಮುಂದೆ ದಾಂಪತ್ಯ ಜೀವನದಲ್ಲಿ ಕಾಸರಗೋಡು ಜಿಲ್ಲೆಯ ಆಶು ಕವಿ ಪೊಟ್ಟಿಪ್ಪಲ ನಾರಾಯಣ ಭಟ್ ಹಾಗೂ ಸವಿತ ಎನ್ ಭಟ್ ದಂಪತಿಗಳ ಮಗ ಡಾ. ವೆಂಕಟ ಗಿರೀಶ್ ಅವರನ್ನು ವಿವಾಹವಾಗಿರುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಹಿರಿಯವಳು ಪ್ರಣಮ್ಯ ದೇವಿ ಹಾಗೂ ಕಿರಿಯವನು ಪ್ರಖ್ಯಾತ್ ಭಟ್. ಡಾ. ವಾಣಿಶ್ರೀ ಅವರ ಸುಧೀರ್ಘ ೧೮ ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಅವರು ಕಾಸರಗೋಡು ಜಿಲ್ಲೆಯ ನೆಲ್ಲಿಕಟ್ಟೆ ಸಮೀಪದ ಚೂರಿಪ್ಪಳ್ಳ ಎಂಬಲ್ಲಿ ಸ್ವಂತ ಆಯುರ್ವೇದ ಆಸ್ಪತ್ರೆ ನಿರ್ಮಿಸಿ ದಿನದ ೨೪ ಘಂಟೆಯೂ ರೋಗಿಗಳ ಸೇವೆಗೈಯುತ್ತಾ ಬಂದಿರುತ್ತಾರೆ. ಇವರ ಆಸ್ಪತ್ರೆಯಲ್ಲಿ ಪಂಚಕರ್ಮ ಟ್ರೀಟ್ಮೆಂಟ್ ಸೇವೆಯು ಲಭ್ಯವಿದೆ. ಇವರ ಹಗಲು ರಾತ್ರಿ ಸೇವೆಯನ್ನು ಪರಿಗಣಿಸಿ ಊರು ಹಾಗೂ ಪರ ಊರವರ ಸಮಕ್ಷಮದಲ್ಲಿ ಅತ್ತ್ಯುತ್ತಮ ವೈದ್ಯೆ ಪ್ರಶಸ್ತಿ ಕೂಡ ಬಂದಿರುತ್ತದೆ. ನವ ಪರ್ವ ಫೌಂಡೇಶನ್ ಬೆಂಗಳೂರು ಇವರು ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಗೌರವ ಕೊರೋನ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇವರು ಅಲ್ಲಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಇವರು ವೃತ್ತಿಯಲ್ಲಿ ವೈದ್ಯೆ ಆದರೂ ಹವ್ಯಾಸದಲ್ಲಿ ಸಾಹಿತಿ, ಕ್ರೀಡಾಪಟು, ಹಾಡುಗಾರ್ತಿ, ನಿರೂಪಕಿ, ಬಹುಭಾಷಾ ಕವಿಯತ್ರಿ ಸಂಘಟಕಿ, ಹಾಗೂ ಪ್ರಸ್ತುತ ಕನ್ನಡ ಪರ ಹೋರಾಟಗಾರ್ತಿ, ಸಾಹಿತ್ಯದಲ್ಲಿ ಇವರು ಒಂದು ಕೃತಿಯನ್ನು ಬಿಡುಗಡೆ ಮಾಡಿ ಇನ್ನೂ ಎರಡು ಕೃತಿಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. ಇವರು ಹಲವಾರು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ, ಕವಿಗೋಷ್ಠಿ ಅಧ್ಯಕ್ಷತೆ, ಹಾಗೂ ಕೃತಿ ಬಿಡುಗಡೆ ಮುಂತಾದವುಗಳಲ್ಲಿ ಪಾಲ್ಗೊಂಡಿರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ. ಇವರು ಕನ್ನಡ, ತುಳು, ಮಲಯಾಳ, ಹವ್ಯಕ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲೂ ಕವನ ಬರೆಯಬಲ್ಲ ಬಹುಭಾಷಾ ಕವಿಯತ್ರಿ. ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ ಯುವಸಿರಿ ಗೌರವ ಪ್ರಶಸ್ತಿ ಹಾಗೂ ಕರುನಾಡ ಸೇವಾ ಟ್ರಸ್ಟ್ ಮಂಡ್ಯದ ವತಿಯಿಂದ ಕರುನಾಡ ವಿಭೂಷಣ ಗೌರವ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇವರು ಸಾಹಿತ್ಯದ ಕರುನಾಡ ಹಣತೆ ಕವಿಬಳಗ ಕೇರಳ ರಾಜ್ಯ, ಗುರುಕುಲ ಕಲಾ ಪ್ರತಿಷ್ಠಾನ ಕೇರಳ ಘಟಕ, ನವಪರ್ವ ಫೌಂಡೇಶನ್ ಕೇರಳ ರಾಜ್ಯ, ಸಿದ್ದೇಶ್ವರ ಸಾಹಿತ್ಯ ವೇದಿಕೆ ಕೇರಳ ರಾಜ್ಯ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಕೇರಳ ಘಟಕ, ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಕೇರಳ ಘಟಕ ಹಾಗೂ ಕರುನಾಡ ಸೇವಾ ಟ್ರಸ್ಟ್ ಮಂಡ್ಯ, ಕೇರಳ ಘಟಕ ಈ ಏಳು ಬಳಗಗಳ ಕೇರಳ ರಾಜ್ಯಾಧ್ಯಕ್ಷೆ ಯಾಗಿದ್ದಾರೆ.

ಇವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಕೊಂಡಿರುತ್ತಾರೆ. ಕನ್ನಡ ಭಾಷೆಯ ಅಸ್ತಿತ್ವವನ್ನು ಕಾಪಾಡಿ ಉಳಿಸಿ ಬೆಳೆಸುವ ಸಲುವಾಗಿ ಮನೆ ಮನೆ ಅಭಿಯಾನ. ಆಶಕ್ತ ರೋಗಿಗಳ ಸೇವೆಗೆ ಮನೆ ಸಂದರ್ಶನ,
ನೊಂದವರಿಗೆ ಸಾಂತ್ವನ, ಕಷ್ಟದಲ್ಲಿರುವವರಿಗೆ ಸಹಾಯ ಇಂತಹ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ ಇವರು ಸಾಧಕ ರತ್ನ ಗೌರವ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿನಾಡ ಸಾಧಕಿ ಗೌರವ ಸನ್ಮಾನ ನೀಡಿ ಗೌರವಿಸಿದ್ದಾರೆ.

ಧಾರ್ಮಿಕವಾಗಿಯೂ ದೇವತಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರದೇ ಊರಿನಲ್ಲಿ ಅವರದೇ ಆದ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ವರ್ಷoಪ್ರತಿ ಭಜನಾ ಕಾರ್ಯಕ್ರಮ ಹಾಗೂ ಅನ್ನದಾನವನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಇವರು ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡವ ಸಲುವಾಗಿ ಗಡಿನಾಡಾದ ಕಾಸರಗೋಡಿನಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಸ್ಥಾಪಿಸಿರುತ್ತಾರೆ. ಈ ಸಂಘದ ಮುಖಾಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕಾಸರಗೋಡು ಹಾಗೂ ಹೊರ ರಾಜ್ಯಗಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಟ್ಟು ಕಲೆಗೆ ಪ್ರೋತ್ಸಾಹ ನೀಡುವಂತ ಕೆಲಸ ಮಾಡುತ್ತಿದ್ದಾರೆ. ಅವಕಾಶ ವಂಚಿತ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುತ್ತಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಸಲುವಾಗಿ ಮನೆ ಮನೆ ಅಭಿಯಾನ ಮಾಡುತ್ತಾ ಎಲ್ಲರ ಕನ್ನಡದ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕಾಗಿ ಸಂಬಂಧಪಟ್ಟವರಲ್ಲಿ ತಿಳಿಸುವ ಹಾಗೂ ಕನ್ನಡದ ನ್ಯಾಯಕ್ಕಾಗಿ ಹೋರಾಡುವ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಸಾಧನೆಯ ಇತರ ಹುದ್ದೆಗಳು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಕೇರಳ ರಾಜ್ಯದ ಮಹಿಳಾ ಘಟಕದ ಅಧ್ಯಕ್ಷರು. ಲಯನ್ಸ್ ಕ್ಲಬ್ ಒಫ್ ಮುಳ್ಳೇರಿಯಾದ ಸದಸ್ಯೆ.

ಬಹುಮುಖ ಪ್ರತಿಭೆಯ ಡಾ. ವಾಣಿಶ್ರೀ ಅವರು ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅತ್ಯಂತ ಉತ್ಸಾಹದಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನ ಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಇವರು ಗಡಿನಾಡಲ್ಲಿ ಕನ್ನಡವನ್ನು ಮತ್ತೆ ಚಿಗುರಿಸುವ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಸಾಹಸವೇ ಸರಿ. ಇವರ ಪ್ರತಿಭೆ, ಸೇವಾ ಕೈಂಕರ್ಯ ಇನ್ನಷ್ಟು ಪ್ರಜ್ವಲಮಾನವಾಗಲಿ ಎಂದು ಹಾರೈಸುತ್ತೇವೆ.

ಲೇಖನ-ಗುರುರಾಜ್ ಎಂ. ಆರ್ ಕಾಸರಗೋಡು
ಕಾರ್ಯದರ್ಶ
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!