Sunday, September 8, 2024

ಗ್ರಾಮ ಮಟ್ಟದಲ್ಲಿ ಭಜನಾ ತಂಡಗಳು ರಚನೆಯಾಗಲಿ-ಸುರೇಶ್ ಆರ್.ಕಾಂಚನ್

ಬಗ್ವಾಡಿ ಶ್ರೀಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ: ಧಾರ್ಮಿಕ ಸಭೆ


ಕುಂದಾಪುರ: ಕುಂದಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊಗವೀರ ಭವನ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕಾಗಿದೆ. ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾಗಲಾಗುವುದು. ಪುರಾಣ ಪ್ರಸಿದ್ಧ ಬಗ್ವಾಡಿ ದೇವಸ್ಥಾನದಲ್ಲಿ ಈಗಾಗಲೇ ಭಜನಾ ತಂಡ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲಿಯೂ ಭಜನಾ ತಂಡಗಳು ಆರಂಭವಾಗಿ ಒಂದು ಬಗ್ವಾಡಿ ದೇವಸ್ಥಾನದಲ್ಲಿ ಭಜನೆ ಮಾಡುವ ಪ್ರವೃತ್ತಿ ಮೂಡಿಬರಲಿ. ಮಹಿಷಾಸುರಮರ್ದಿನಿಯನ್ನು ನಂಬಿದ ಎಲ್ಲರೂ ಅಭಿವೃದ್ದಿ ಹೊಂದಿದ್ದಾರೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವಾಧ್ಯಕ್ಷರಾದ ಸುರೇಶ್ ಆರ್.ಕಾಂಚನ್ ಹೇಳಿದರು.

ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಮಾತನಾಡಿ, ಕುಂದಾಪುರದಲ್ಲಿ ಮೊಗವೀರ ಭವನವನ್ನು ಆರು ತಿಂಗಳ ಒಳಗೆ ಅದು ಪೂರ್ಣಗೊಳಿಸುವ ಆಶಯವಿದ್ದು ನಮ್ಮ ಮಾರ್ಗದರ್ಶಕರಾದ ನಾಡೋಜ ಡಾ.ಜಿ.ಶಂಕರ್ ಅವರ ಮಾರ್ಗದರ್ಶನ ಪಡೆದುಕೊಂಡು ತ್ವರಿತವಾಗಿ ಮೊಗವೀರ ಭವನವನ್ನು ಸಮಾಜಕ್ಕೆ ಅರ್ಪಣೆ ಆಗಲಿದೆ. ಅದಕ್ಕೆ ಸಮಸ್ತ ಸಮಾಜ ಬಾಂಧವರು ಸಹಕಾರ ನೀಡಬೇಕಾಗಿದೆ ಎಂದರು.
ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಆನಂದ್ ಸಿ.ಕುಂದರ್ ಮಾತನಾಡಿ, ಬಗ್ವಾಡಿ ದೇವಸ್ಥಾನ ಮೊಗವೀರ ಸಮಾಜದ ಹೆಮ್ಮೆಯ ಸಂಕೇತ. ಪುರಾತನವಾದ ಕ್ಷೇತ್ರ ಜೀರ್ಣೋದ್ದಾರಗೊಂಡ ಬಳಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ಮಾತನಾಡಿ, ಬಗ್ವಾಡಿ ಹೋಬಳಿ ಉಚ್ಚಿಲ ದೇವಸ್ಥಾನದ ಸ್ವರ್ಣಕಳಸಕ್ಕೆ 1.5 ಕೆಜಿ ಚಿನ್ನ ನೀಡಿದ ಹೆಮ್ಮೆಗೆ ಪಾತ್ರವಾಗಿದೆ. ಹಾಗೆ ಹೊರೆಕಾಣಿಕೆಯಲ್ಲಿಯೂ ಕೂಡಾ 208 ವಾಹನಗಳಲ್ಲಿ ಹೊರೆಕಾಣಿಕೆಯನ್ನು ಸಮರ್ಪಿಸಿದ್ದೇವೆ. ಇದೀಗ ಕುಂದಾಪುರ ಮೊಗವೀರ ಭವನ ಕಾಮಗಾರಿ ಪೂರ್ಣಗೊಳಿಸುವ ಜವಬ್ದಾರಿ ನಮ್ಮ ಮೇಲಿದೆ. ಮೊಗವೀರ ಭವನ ಸಮಿತಿ ಅಧ್ಯಕ್ಷರಾದ ಸುರೇಶ್ ಆರ್.ಕಾಂಚನ್ ಅವರ ನೇತೃತ್ವದಲ್ಲಿ ಅಕ್ಟೋಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದೇವೆ. ಅದೇ ರೀತಿ ಬಗ್ವಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಕೋಟೆಯ ೧೦ ಎಕ್ರೆ ಪ್ರದೇಶದಲ್ಲಿ ಶೈಕ್ಷಣಿಕ ಅಥವಾ ಅಭಿವೃದ್ದಿ ಕಾರ್ಯ ನಡೆಸುವ ಬಗ್ಗೆ ನಾಡೋಜ ಡಾ.ಜಿ.ಶಂಕರ್ ಅವರು ಮಾರ್ಗದರ್ಶನದಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್, ಪ್ರದೀಪ ಚಂದನ್ ಕುಂದಬಾರಂದಡಿ (ಮುಂಬಯಿ), ಬೆಣ್ಣೆಕುದ್ರು ಕುಲ ಮಹಾಸ್ತೀ ದೇವಸ್ಥಾನದ ಮೆನೇಜರ್ ಸೋಮಶೇಖರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ್, ಕುಂದಾಪುರ ಶಾಖಾ ಮಾಜಿ ಅಧ್ಯಕ್ಷರಾದ ಎಂ.ಎಂ.ಸುವರ್ಣ, ಸದಾನಂದ ಬಳ್ಕೂರು, ನಾಗೇಶ್ ಕಾಂಚನ್ ನಾಡ, ಹಕ್ಲಾಡಿ ಗ್ರಾ.ಪಂ. ಅಧ್ಯಕ್ಷ ಚೇತನ್ ಮೊಗವೀರ, ಮೀರಾರೋಡ್ ಸ್ಥಳೀಯ ಸಮಿತಿಯ ರಘುರಾಮ ಚಂದನ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಬೈಂದೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್, ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ. ನಾಯ್ಕ್, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಶಾಖಾ ಸಮಿತಿ ಕಾರ್ಯದರ್ಶಿ ಪ್ರಭಾಕರ ಎನ್.ಸೇನಾಪುರ ಹಾಗು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುರೇಶ ಆರ್. ಕಾಂಚನ್, ಅನ್ನದಾನದ ಸೇವಾಕರ್ತರಾದ ನಾಗೇಶ ಪಿ ಕಾಂಚನ್ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

ಶಾಖಾ ಸಮಿತಿ ಉಪಾಧ್ಯಕ್ಷ ರಾಜು ಶ್ರೀಯಾನ್ ಗುಜ್ಜಾಡಿ ಸ್ವಾಗತಿಸಿದರು. ಶಾಖಾ ಸಮಿತಿ ಕೋಶಾಧಿಕಾರಿ ಸುಧಾಕರ ಕಾಂಚನ್ ಕಾರ್ಯಕ್ರಮ ನಿರ್ವಹಿಸಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!