spot_img
Wednesday, January 22, 2025
spot_img

ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಪವಿತ್ರ ಶುಕ್ರವಾರ ಆಚರಣೆ

ಕುಂದಾಪುರ: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಬೆ ಯಾತ್ರೆಯು ಒಂದೊಂದು ಶಿಲುಬೆ ಅಧ್ಯಾಯವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.

ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಬೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಸಂಭ್ರಮ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಮಾನ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ನಡೆಸಲಾಯಿತು.

ಸಂಜೆಯ ಪ್ರಾರ್ಥನ ವಿಧಿಗಳನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್ ನೆಡೆಸಿಕೊಟ್ಟು ಯೇಸುವಿನ ಗಾಯಗಳಿಂದ ನಾವು ಗುಣ ಹೊಂದಿದೆವು, ನಮ್ಮಲ್ಲಿ ಎರಡು ಪಂಗಡಗಳಿವೆ ಆಯುಧ, ಕತ್ತಿ, ಬಂದೂಕು ಇವುಗಳೊಡನೆ ಇರುವ ಪಂಗಡ, ಮತ್ತೊಂದು ಪಂಗಡ ಪ್ರೀತಿ ತ್ಯಾಗ ಸೇವೆ ಸತ್ಯದಿಂದ ಕೂಡಿದ ಪಂಗಡ, ಆದರೆ ಪ್ರೀತಿ ತ್ಯಾಗದ ಸೇವೆಯ ಪಂಗಡಕ್ಕೆ ಜಯ ಲಭಿಸುವುದು, ಇದನ್ನೆ ಯೇಸು ಹೇಳಿಕೊಟ್ಟಿದ್ದು, ತನ್ನ ಪುತ್ರ ಶಿಲುಭೆಯಲ್ಲಿ ಮರಣ ಹೊಂದಿ, ಜನ ಪರಿವರ್ತನೆಯಾಗಬೇಕು ಎಂಬುದು ದೇವರ ಯೋಜನೆ ಆಗಿತ್ತು ಅದರಂತೆ, ಯೇಸು ಶಿಲುಭೆ ಮರಣ ಹೊಂದಿ, ದೇವರ ಯೋಜನೆಯನ್ನು ಸಫಲಗೊಳಿಸಿದ ದಿನವೇ ಶುಭ ಶುಕ್ರವಾರ ಎನ್ನುತ್ತಾರೆ ಎಂದು ಅವರು ಸಂದೇಶ ನೀಡಿದರು.

ಈ ಪ್ರಾರ್ಥನಾ ವಿಧಿಯಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಭಾಗಿಯಾದರು. ಈ ವಿಧಿಯಲ್ಲಿ ಭಕ್ತಾಧಿಗಳು, ಧರ್ಮ ಭಗಿನಿಯರು ಭಕ್ತಿ ಶ್ರದ್ದೆಯಿಂದ ಬಹು ಸಂಖ್ಯೆಯಲ್ಲಿ ಪಾಲ್ಗೊಂಡರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!