spot_img
Thursday, May 7, 2026
spot_img

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಕೊಡುಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ವಿಶಿಷ್ಟ ಸರಣಿ ಕಾರ್ಯಕ್ರಮದಡಿ ನಿರಂತರ ಪ್ರತೀ ತಿಂಗಳು ಕಾರ್ಯಕ್ರಮ ಸಂಘಟಿಸಿ ಏಳು ವರ್ಷ ಯಶಸ್ವಿಯಾಗಿ ಪೂರೈಸಿ ಸಾಂಸ್ಕೃತಿಕ ರಂಗಭೂಮಿಯಲ್ಲಿ ಎಲ್ಲರ ಗಮನ ಸೆಳೆದಿದೆ. ಅನೇಕ ಅಡ್ಡಿ, ಆತಂಕಗಳನ್ನು ದಾಟಿ 350 ವರ್ಷ ದಾಟಿ ಮುನ್ನಡೆಯುತ್ತಿದ್ದು, ಈ ಗೊಂಬೆಯಾಟ ಅಕಾಡೆಮಿಯ ನಿರಂತರ ಚಟುವಟಿಕೆಗಳನ್ನು ಗಮನಿಸಿ ಅಕಾಡೆಮಿಗೆ ಬೆಂಗಳೂರಿನ ಉದ್ಯಮಿ ನಾರಾಯಣ ಹರಿದಾಸ್ ಕಾಮತ್‌ರವರು ಸಿ.ಸಿ.ಕ್ಯಾಮೆರಾ ಹಾಗೂ ಟಾಟಾ ಮೋಟರ್ ಫೈನಾನ್ಸ್, ಪ್ರಧಾನ ಕಚೇರಿ, ಮುಂಬಯಿ ಇದರ ಉಪಾಧ್ಯಕ್ಷರಾದ ಸುಜೀರ್ ಲಕ್ಷ್ಮೀನಾರಾಯಣ ನಾಯಕ್ ಸೋಲಾರ್ ಲೈಟ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.

ಇತ್ತೀಚೆಗೆ ಗೊಂಬೆಯಾಟ ಅಕಾಡೆಮಿಯ ವತಿಯಿಂದ ಗೊಂಬೆ ಮನೆಯಲ್ಲಿ ನಡೆದ ಕಾರ್ಯಕ್ರಮದ ದಾನಿಗಳನ್ನು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕೊಂಕಣ್ ರೈಲ್ವೆ ಮಾಜಿ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್ ರಘುನಾಥ್ ನಾಯಕ್, ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆಟ್ಸ್ ಆಂಡ್ ಸೈನ್ಸ್, ಮಾಹೆ, ಮಣಿಪಾಲ, ಇದರ ಮುಖ್ಯಸ್ಥರಾದ ಪ್ರೊ. ವರದೇಶ್ ಹಿರೇಗಂಗೆ, ನಿವೃತ್ತ ಉಪನ್ಯಾಸಕ ಪ್ರೊ. ವೆಂಕಟೇಶ್ ಪೈ, ಪತ್ರಕರ್ತ ಜಾನ್ ಡಿಸೋಜಾ, ಕಾಸರಗೋಡಿನ ಉದ್ಯಮಿ ಸದಾಶಿವ ಭಟ್, ಮಣಿಪಾಲದ ಪನವಾರ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ ಉಪಸ್ಥಿತರಿದ್ದರು.

https://janaprathinidhi.com/wp-content/uploads/2022/04/IMG20220320155719.jpg

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!