spot_img
Monday, March 23, 2026
spot_img

ಕೃಷಿಯಲ್ಲಿ ಬೆಳೆಗಳ ಮೌಲ್ಯವರ್ಧನೆ ಬಹುಮುಖ್ಯ-ಮನೋಜ್ ಮಿನೇಜಸ್

ನಾಗೂರು : ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ

ಬೈಂದೂರು: ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಧಾರಣೆ ಇಲ್ಲದೆ ರೈತರು ಕೃಷಿಯಿಂದ ಹಿಮ್ಮುಖರಾಗುತ್ತಿದ್ದಾರೆ. ಆದ್ದರಿಂದ ರೈತರು ತಾವು ಬೆಳೆದ ಬೆಳೆಯನ್ನು ಸರಿಯಾದ ರೀತಿಯಲ್ಲಿ ಮೌಲ್ಯವರ್ಧನೆ ಮಾಡಿ ಸ್ಥಳೀಯವಾಗಿ ಅವಕಾಶ ಇದ್ದಲ್ಲಿ ಮಾರುಕಟ್ಟೆಯನ್ನು ತಾವೇ ಸ್ವತಹ ಮಾಡುವುದು ಸೂಕ್ತ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೇಂದ್ರ ಕಚೇರಿ ಧರ್ಮಸ್ಥಳದ ಕೃಷಿ ಪ್ರಾದೇಶನಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಹೇಳಿದರು.

ಅವರು ನಾಗೂರು ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟ (ರಿ) ಬೈಂದೂರು ಪ್ರವರ್ತಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮತ್ತು ನಬಾರ್ಡ್ ಸಂಸ್ಥೆ ಬೆಂಗಳೂರು ಆಯೋಜಿಸಿರುವ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಚಂದ್ರ ಪೂಜಾರಿ ವಹಿಸಿದ್ದರು.

ಭತ್ತ ಬೆಳೆಗಾರ ಒಕ್ಕೂಟಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ, ಸಹಕಾರವನ್ನು ನೀಡಿ ಉತ್ತಮ ಸಾಧನೆ ಮಾಡಿರುವ ಒಕ್ಕೂಟದ ಸದಸ್ಯರಾದ ಲಲಿತಮ್ಮ ಮತ್ತು ಶಶಿಕುಮಾರ್ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿರಿಧಾನ್ಯ ಘಟಕ ಧಾರವಾಡದ ಹಿರಿಯ ನಿರ್ದೇಶಕರಾದ ದಿನೇಶ್ ಎಂ, ತಾಲ್ಲೂಕಿನ ಹಿರಿಯ ಯೋಜನಾಧಿಕಾರಿ ಶಶಿರೇಖಾ ಪಿ, ಎಫ್.ಪಿ.ಸಿ ಯೋಜನಾಧಿಕಾರಿ ನಿಖಿಲೇಶ್. ಎಮ್, ಭತ್ತ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಮಂಜಯ್ಯ ಶೆಟ್ಟಿ, ರವಿರಾಜ್ ಪೂಜಾರಿ, ಶಿವರಾಮ ಶೆಟ್ಟಿ, ಕಿರಣ್ ಕುಮಾರ್, ಸುರೇಂದ್ರ ನಾಯ್ಕ್, ರಾಜು ಪೂಜಾರಿ, ಗೀತಾ, ನೀಲು, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ಸದಾನಂದ, ಉಲ್ಲಾಸ ಮೇಸ್ತ, ಕೃಷಿ ಅಧಿಕಾರಿಗಳಾದ ಚೇತನ್ ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ರವಿಶಂಕರ್, ರಾಘವೇಂದ್ರ ನಿರೂಪಿಸಿ, ಹಿರಿಯ ಯೋಜನಾಧಿಕಾರಿ ಶಶಿರೇಖಾ ಪಿ ಯವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮುಕಾಂಬಿಕಾ ಭತ್ತ ಬೆಳೆಗಾರ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಂಯೋಜಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!