spot_img
Wednesday, January 22, 2025
spot_img

“ಆ 90 ದಿನಗಳು”: ತಂದೆ-ಮಗ ಅಭಿನಯಿಸುತ್ತಿರುವ ಚಿತ್ರ

ಮಾ.11ಕ್ಕೆ ರಾಜ್ಯಾದ್ಯಂತ ಬಿಡುಗಡೆ : ಯಾಕೂಬ್ ಖಾದರ್ ಗುಲ್ವಾಡಿ, ರೊನಾಲ್ಡ್ ಲೋಬೊ ಜಂಟಿ ನಿರ್ದೇಶನದ ಚಿತ್ರ

ಕುಂದಾಪುರ: ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮತ್ತು ಅವರ ಮಗ ಯುವ ನ್ಯಾಯವಾದಿ ರತಿಕ್ ಮುರ್ಡೇಶ್ವರ ಒಟ್ಟಿಗೆ ಅಭಿನಯಿಸುತ್ತಿರುವ ’ಆ 90 ದಿನಗಳು’ ಚಿತ್ರ ಚಿತ್ರ ಪ್ರೇಮಿಗಳ ಗಮನ ಸೆಳೆದಿದ್ದು, ಇದೇ 11ರಂದು ಬಿಡುಗಡೆಗೊಳ್ಳಲಿದೆ.

ನಟ ರತಿಕ್ ಮುರ್ಡೇಶ್ವರ ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರಪ್ರೇಮಿಗಳಿಗೆ ಪರಿಚಿತರಾಗಿದ್ದಾರೆ. ಪ್ರತಿಭಾನ್ವಿತ ಕಲಾವಿದ, ರತಿಕ್ ಮುರ್ಡೇಶ್ವರ ಕನ್ನಡದ ಭರವಸೆಯ ಚಿತ್ರನಟರಾಗಿ ಗುರುತಿಸಿಕೊಂಡಿದ್ದಾರೆ. ಯುವ ಚಿತ್ರಪ್ರೇಮಿಗಳ ಮನಗೆದ್ದಿರುವ ರತಿಕ್ ಅಭಿನಯ, ಪಾತ್ರಕ್ಕೆ ನೀಡುವ ಒತ್ತು, ನವರಸಗಳ ಅಭಿವ್ಯಕ್ತಿಯಲ್ಲಿ ಇವರು ತೋರಿಸುವ ತನ್ಮಯತೆ ಮೂಲಕ ಇವರೋರ್ವ ಭರವಸೆಯ ನಟರಾಗಿ ಮೂಡಿ ಬಂದಿದ್ದಾರೆ. ಆ ಹಿನ್ನೆಲೆಯಲ್ಲಿ ’ಆ 90 ದಿನಗಳು’ ಚಿತ್ರ ರತಿಕ್ ಪಾಲಿಗೆ ಭರವಸೆಯ ಚಿತ್ರವಾಗಿದೆ. ಅವರು ಈ ತನಕ ಅಭಿನಯಿಸಿದ ಚಿತ್ರಗಳ ಪೈಕಿ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಈ ಚಿತ್ರದ ಇನ್ನೊಂದು ವಿಶೇಷ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಪ್ರಮುಖ ಪಾತ್ರವೊಂದನ್ನು ಈ ಚಿತ್ರದಲ್ಲಿ ಅವರು ನಿರ್ವಹಿಸಿದ್ದಾರೆ. ಕೋರ್ಟ್‌ನಲ್ಲಿ ತನ್ನ ನಿರರ್ಗಳವಾದ ವಾದದ ಮೂಲಕವೇ ಪ್ರಸಿದ್ಧರಾಗಿರುವ ರವಿಕಿರಣ್ ಮುರ್ಡೇಶ್ವರ ಈ ಚಿತ್ರದಲ್ಲಿಯೂ ಕೂಡಾ ಗಮನ ಸಳೆಯಲಿದ್ದಾರೆ. ಮಾರ್ಚ್ 11ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.


ಒಂದು ವರ್ಷದ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ತಯಾರಾದ “ಆ 90 ದಿನಗಳು” ಸಿನಿಮಾ ತಯಾರಾಗಿದ್ದು, ಈಗಾಗಲೆ ಈ ಸಿನಿಮಾದ ಹಾಡು ಮತ್ತು ಟ್ರೈಲರ್‌ಗೆ ರಾಜ್ಯದಾದ್ಯಂತ ಅದ್ಭುತ ಪ್ರತಿಕ್ರಿಯೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಗ್ಗೆ ಚರ್ಚೆಗಳಾಗುತ್ತಿವೆ ಜೊತೆಗೆ ಇದೇ 3 ರಿಂದ 10 ತನಕ ಪ್ರತಿಷ್ಠಿತ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿದ್ದು ಈ ಮೂಲಕ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಸೃಷ್ಟಿಸಿದೆ.

ಎಂಎಂಪಿ ನಿರ್ಮಾಣದ, ಗುಲ್ವಾಡಿ ಟಾಕೀಸ್ ನೇತೃತ್ವದಲ್ಲಿ ’ಆ 90 ದಿನಗಳು’ ಚಿತ್ರವು 2 ಗಂಟೆಯ ಅವಧಿಯದ್ದಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ, ನಿರ್ಮಾಪಕರು ರೊನಾಲ್ಡ್ ಲೋಬೊ. ನಾಯಕ ನಟರಾಗಿ ರತಿಕ್ ಮುರ್ಡೇಶ್ವರ್ ನಟಿಸುತ್ತಿದ್ದಾರೆ. ನಾಯಕಿಯಾಗಿ ಚಂದ್ರಿಕಾ ನಟಿಸುತ್ತಿದ್ದಾರೆ. ಉಳಿದಂತೆ ಕೃತಿಕಾ ಬಾಗಲಕೋಟ, ಹಿರಿಯ ನಟಿ ಭವ್ಯ, ಪ್ರದೀಪ್ ಪೂಜಾರಿ ಉಪ್ಪಿನಕುದ್ರು, ಮಾರುತಿ, ಅಮೀರ್ ಹಂಝ, ಪೂರ್ಣಿಮಾ ಸುರೇಶ್ ಮೊದಲಾದ ಖ್ಯಾತ ನಟನಟಿಯರೊಂದಿಗೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ರಾಧಾಕೃಷ್ಣ ಬಸ್ರೂರು ಸಂಗೀತವಿದೆ. ವಿಶೇಷವಾಗಿ ಯಾಕೂಬ್ ಖಾದರ್ ಗುಲ್ವಾಡಿ ಮತ್ತು ರೊನಾಲ್ಡ್ ಲೋಬೊ. ಜಂಟಿ ನಿರ್ದೇಶನದ ಚಿತ್ರ ಇದಾಗಿದೆ.

ಚಿತ್ರದಲ್ಲಿ ದುಬಾರಿ ಸೆಟ್‌ಗಳ ಮೊರೆ ಹೋಗದೇ ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಪ್ರೇಕ್ಷಕನ ಮುಂದಿಡುವ ಪ್ರಯತ್ನ ಮಾಡಲಾಗಿದೆ. ಕುಂದಾಪುರದ ಭೌಗೋಳಿಕ ಚೆಲುವು, ಕರಾವಳಿ ಮತ್ತು ಸೀಮೆಯ ನಡುವಿನ ಅಗರ್ಭವಾದ ಪ್ರಕೃತಿ ಸೌಂದರ್ಯದ ಪ್ರದೇಶಗಳನ್ನು ಹುಡುಕಿ ಅಲ್ಲಿ ಚಿತ್ರೀಕರಣ ನಡೆಸಲಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!