Sunday, September 8, 2024

ಸಾಧನೆಗೆ ಸರ್ ಎಂ. ವಿಶ್ವೇಶ್ವರಯ್ಯನವರು ಶ್ರೇಷ್ಠ ಉದಾಹರಣೆ-ವಿಜಯ ವಿಷ್ಣು ಮಯ್ಯ


ಕುಂದಾಪುರ: ಇಂಜಿನಿಯರ್‍ಸ್ ದಿನಾಚರಣೆ

ಕುಂದಾಪುರ: ಸರ್ ಎಂ. ವಿಶ್ವೇಶ್ವರಯ್ಯನವರು ಇವತ್ತು ಪೂಜನೀಯ ಸ್ಥಾನ ಪಡೆಯಬೇಕಿದ್ದರೆ ಅವರ ಸಾಧನೆಗಳು, ಛಲ, ಆತ್ಮವಿಶ್ವಾಸ ಅದಕ್ಕೆ ಕಾರಣ. ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವುದಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರು ಶ್ರೇಷ್ಠ ಉದಾಹರಣೆ. ಆವತ್ತಿನ ದಿನಗಳಲ್ಲಿ ಅವರದ ಒಂದೊಂದು ಹೆಜ್ಜೆಗಳು ನಮಗೆ ಸ್ಪೂರ್ತಿಯುತವಾಗಿ ಕಾಣಸಿಗುತ್ತಿದೆ ಎಂದು ಅಸೋಯೇಷನ್ ಆಫ್ ಕನ್ಸಲ್ಟೆಂಗ್ ಇಂಜಿನಿಯರ್‍ಸ್ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಹೇಳಿದರು.
ಅವರು ಅಸೋಯೇಷನ್ ಆಫ್ ಕನ್ಸಲ್ಟೆಂಗ್ ಸಿವಿಲ್ ಇಂಜಿನಿಯರ್‍ಸ್ ಮತ್ತು ಆರ್ಟಿಟೆಕ್ಸ್ಟ್ ರಿ. ಕುಂದಾಪುರ ಇವರ ವತಿಯಿಂದ ಕಂದಾವರ ಅಡಿಟೋರಿಯಂ ಮೆಪು ಕೋಟೇಶ್ವರ ಇಲ್ಲಿ ಸೆ.೧೫ ಬುಧವಾರ ನಡೆದ ಇಂಜಿನಿಯರ್‍ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕನಸಿನ ರೂಪುಗಳಿಗೆ ಆಕಾರ ಕೊಡುವುದು ಇಂಜಿನಿಯರ್. ದೇಶದ ಪ್ರಗತಿಯಲ್ಲಿಯೂ ಇಂಜಿನಿಯರ್‍ಸ್‌ಗಳ ಕೊಡುಗೆ ಇದೆ. ಇವತ್ತು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ಇಂಜಿನಿಯರ್‌ಗಳ ಮಹತ್ವವೂ ವೃದ್ದಿಸುತ್ತಿದೆ. ಹಗಲು ರಾತ್ರಿ ಎನ್ನದೆ ದುಡಿಯುವ ಇಂಜಿನಿಯರ್‌ಗಳು ವಿಶ್ವಾಸದಿಂದ ಕೆಲಸ ಮಾಡಬೇಕು. ವೃತ್ತಿಯ ಬಗ್ಗೆ ಅಭಿಮಾನವಿರಬೇಕು. ಆಹಂ ಇಲ್ಲದ ವ್ಯಕ್ತಿತ್ವ ನಮ್ಮದಾಗಬೇಕು. ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು ಎಂದರು.
ಅಸೋಯೇಷನ್ ಆಫ್ ಕನ್ಸಲ್ಟೆಂಗ್ ಸಿವಿಲ್ ಇಂಜಿನಿಯರ್‍ಸ್ ಮತ್ತು ಆರ್ಟಿಟೆಕ್ಸ್ಟ್ ರಿ. ಕುಂದಾಪುರದ ಅಧ್ಯಕ್ಷರಾದ ರಾಮಚಂದ್ರ ಎನ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಅಶೋಕ್ ರೆಡ್ಡಿ ಎಸ್, ಪೂಜಾ ಮಾರ್ಬಲ್ ಮತ್ತು ಗ್ರಾನೈಟ್ಸ್ ಉಡುಪಿ, ಪೂಜಾ ಟೈಲ್ಸ್ ಬೀಜಾಡಿ ಇದರ ಮಾಲೀಕರು ಸುಭಾಷ್ ಜೈನ್, ಪ್ರಖ್ಯಾತ ಇಂಜಿನಿಯರ್ ಎಂ. ಸುಬ್ಬಣ್ಣ ಶೆಟ್ಟಿ, ಕೋಟೇಶ್ವರ, ಛಿoಟಿಛಿಡಿeಣe ತಜ್ಞರು, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಪೌರ ಕಾರ್ಮಿಕ ಸತೀಶ, ನಿವೃತ್ತ ಅಂಚೆ ಸಿಬ್ಬಂದಿ ನರಸಿಂಹ, ಸಮಾಜ ಸೇವಕ ನಾರಾಯಣ ಆಚಾರ್ಯ ಇವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆಗೈದ ಸಮಿತಿಯ ಸದಸ್ಯರ ಮಕ್ಕಳಾದ ಸಾತ್ವಿಕ್, ವರ್ಷ ಹೆಗ್ಡೆ, ಕಿರಣ್ ಆಚಾರ್ ಇವರನ್ನು ಅಭಿನಂದಿಸಲಾಯಿತು. ಇಂಜಿನಿಯರ್ ಅಸೋಯೇಷನ್ ಆಫ್ ಕನ್ಸಲ್ಟೆಂಗ್ ಸಿವಿಲ್ ಇಂಜಿನಿಯರ್‍ಸ್ ಮತ್ತು ಆರ್ಟಿಟೆಕ್ಸ್ಟ್ ರಿ. ಕುಂದಾಪುರದ ಅಧ್ಯಕ್ಷರಾದ ರಾಮಚಂದ್ರ ಎನ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಸತೀಶ್ ಶೆಟ್ಟಿ ಹಕ್ಲಾಡಿ ವರದಿ ಮಂಡಿಸಿದರು. ಬಿ.ಎಂ.,ಗುರುರಾಜ್ ರಾವ್, ಆರ್ಟಿಟೆಕ್ಸ್ಟ್ ಇಕ್ಬಾಲ್ ಪಿ.ಎಂ., ನಳಿನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗಾಯಕ ಗಣೇಶ ಬೀಜಾಡಿ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!