spot_img
Thursday, May 7, 2026
spot_img

ಹುಣ್ಸೆಮಕ್ಕಿ ಹೆಗ್ಡೆ ಹೌಸ್‌ನಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಕುಂದಾಪುರ, ಜೂ.17: ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೋನಾ ಸಂಕಷ್ಟದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹುಣ್ಸೆಮಕ್ಕಿಯ ಹೆಗ್ಡೆ ಹೌಸ್ ಕುಟುಂಬಸ್ಥರು ಕೊಡಮಾಡಿದ ಕಿಟ್ ವಿತರಣಾ ಕಾರ್ಯಕ್ರಮ ಜೂ.೧೬ರಂದು ತಲ್ಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಹುಣ್ಸೆಮಕ್ಕಿ ಹೆಗ್ಡೆ ಹೌಸ್ ಕುಟುಂಬಸ್ಥರು ಸುಮಾರು 200 ಕ್ಕೂ ಮಿಕ್ಕಿ ಜನರಿಗೆ ಆಹಾರದ ಕಿಟ್‌ನ್ನು ವಿತರಿಸಿದರು. ಹೆಗ್ಡೆ ಹೌಸ್‌ನ ಪ್ರವರ್ತಕರಾದ ಸಬ್ಲಾಡಿ ಎನ್. ಮಂಜಯ್ಯ ಶೆಟ್ಟಿ ಮತ್ತು ಶ್ರೀಮತಿ ವಸಂತಿ ಎಂ. ಶೆಟ್ಟಿ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಮಡಿವಾಳ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಅರುಣ್ ಕುಮಾರ್ ಹೆಗ್ಡೆ, ಜ್ಯೋತಿ, ಸಂತೋಷ ಎಚ್., ಗಣೇಶ ಶೆಟ್ಟಿ, ತಲ್ಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿಶ್ವಾಸ್ ಭಂಡಾರ್‌ಕರ್, ಸಬ್ಲಾಡಿ ಜಯರಾಮ ಶೆಟ್ಟಿ, ಪ್ರಶಾಂತ್ ಮೊಳಹಳ್ಳಿ ನಿವೃತ್ತ ಯುವಜನ ಸೇವಾ ಕ್ರೀಡಾ ಇಲಾಖೆಯ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ಈ ಕಿಟ್ ಕೊಡುಗೆ ನೀಡಲು ಹೆಗ್ಡೆ ಹೌಸನ ಕುಟುಂಬಸ್ಥರಾದ ಶ್ರೀಮತಿ ಜಯಂತಿ ಎಸ್.ಹೆಗ್ಡೆ ಮತ್ತು ಶಿವರಾಮ ಹೆಗ್ಡೆ, ಶ್ರೀಮತಿ ಸಂಧ್ಯಾ ಶ್ರೀಸುಹಾಸ್ ಶೆಟ್ಟಿ ಅಮೇರಿಕಾ, ಶ್ರೀಮತಿ ದೀಪ್ತಿ ಶ್ರೀ ನರೇಂದ್ರ ಹೆಗ್ಡೆ ಸಿಂಗಾಪುರ, ಶ್ರೀಮತಿ ವಿದ್ಯಾ ಶ್ರೀ ರತ್ನಪೂರ್ಣ ರೈ ಬೆಂಗಳೂರು ಸಹಕರಿಸಿದರು.


ಕಳೆದ ವಾರ ಸೀಲ್ಡೌನ್ ಅದ ಬ್ರಹ್ಮ ಜನತಾ ಕಾಲನಿಯ 45 ಮನೆಗಳಿಗೆ 5 ದಿನಗಳ ಕಾಲ ಉಚಿತವಾಗಿ ಹಾಲನ್ನು ವಿತರಣೆಯನ್ನು ಹೆಗ್ಡೆ ಹೌಸ್ ವತಿಯಿಂದ ಮಾಡಲಾಗಿತ್ತು. ಕೊಡುಗೆ ಸ್ವೀಕರಿಸಿದ ಎಲ್ಲರಿಗೂ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಕೃತಜ್ಞತೆಯನ್ನು ಅರ್ಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!