spot_img
Friday, April 3, 2026
spot_img

ಯಕ್ಷಗಾನ ಮೇಳಗಳು ಸಂಚಾರಿ ದೇವಸ್ಥಾನವಿದ್ದಂತೆ-ಪುರಂದರ ಶೆಟ್ಟಿಗಾರ್ 

ಕುಂದಾಪುರ: ಕರಾವಳಿ ಕರ್ನಾಟಕದ ಹೆಮ್ಮೆಯ ಜಾನಪದ ಕಲೆ ಯಕ್ಷಗಾನ. ಹರಕೆ ಯಕ್ಷಗಾನ ಬಯಲಾಟ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗುವುದರೊಂದಿಗೆ ಚೌಕಿಯಲ್ಲಿರುವ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರೆ ಯಕ್ಷಗಾನ ಮೇಳಗಳು ಸಂಚಾರಿ ದೇವಸ್ಥಾನವಿದ್ದಂತೆ ಹಾಗಾಗಿ ದೇವಸ್ಥಾನಕ್ಕೆ ಹೋದ ಪುಣ್ಯ ಕಲಾಭಿಮಾನಿಗಳಿಗೆ ಲಭ್ಯವಾಗುತ್ತದೆ ಎಂದು ಮೂಲ್ಕಿ ಮಾನಂಪಾಡಿ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್ ಹೇಳಿದರು.

ತ್ರಾಸಿ ಶ್ರೀಮತಿ ಪ್ರೇಮಾ ಮತ್ತು ರಾಜೇಂದ್ರ ಶೆಟ್ಟಿಗಾರ್‌ರವರ ಬಾಬ್ತು, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರ ಮಾರಣಕಟ್ಟೆ ಮೇಳದ ಹರಕೆ ಬಯಲಾಟ ಕೋಟೇಶ್ವರ ಕುದುರೆಕೆರೆಬೆಟ್ಟಿನ ಸಂಕಲ್ಪ ಮ್ಯೂಸಿಯಂ ಎದುರುಗಡೆ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾರಣಕಟ್ಟೆ ಮೇಳದ ಹಿರಿಯ ವೇಷಧಾರಿ ಐರ್‌ಬೈಲ್ ಆನಂದ ಶೆಟ್ಟಿಯವರನ್ನು, ಪುರಂದರ ಶೆಟ್ಟಿಗಾರ್‌ರವರನ್ನು, ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಹಂಗಳೂರು ಶನೀಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಣ್ಣಯ್ಯ ಪೂಜಾರಿ, ಮಾರಣಕಟ್ಟೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಘುರಾಮ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ತ್ರಾಸಿ ರಾಜೇಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ೩ನೇ ವರ್ಷದ ಯಕ್ಷಗಾನ ಪ್ರದರ್ಶನ ರೂವಾರಿ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತನಾಡಿದರು. ಲೋಕೇಶ್ ಶೆಟ್ಟಿಗಾರ್ ಬೆಂಗಳೂರು ಕಾರ್ಯಕ್ರಮ ಸಂಯೋಜಿಸಿದರು. ಭಾಗವತರಾದ ಅಶೋಕ್ ಕೆರೆಕೆಟ್ಟೆ ಕಾರ್ಯಕ್ರಮ ನಿರೂಪಿಸಿದರೆ, ಗುರುರಾಜ್ ಶೆಟ್ಟಿಗಾರ್ ಶಾಂತಾಪುರ ವಂದಿಸಿದರು. ನಂತರ ಮಾರಣಕಟ್ಟೆ ಮೇಳದವರಿಂದ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗದ ಪ್ರದರ್ಶನ ಜರುಗಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!