spot_img
Saturday, April 25, 2026
spot_img

ಎಂ ಐ ಟಿ ಕುಂದಾಪುರದಲ್ಲಿ ಎಂ ಪಿ ಎಲ್ 2025

ಕುಂದಾಪುರ: ಇತ್ತೀಚೆಗೆ ಎಂ ಐ ಟಿ ಕುಂದಾಪುರದಲ್ಲಿ  ಎಂ ಪಿ ಎಲ್ 2025( ಎಂ ಐ ಟಿ ಕೆ ಪ್ರೀಮಿಯರ್ ಲೀಗ್ ) ಆಯೋಜಿಸಲಾಗಿತ್ತು. ಇದರಲ್ಲಿ 8 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯ ದಲ್ಲಿ ಹಾವ್ಕ್ ಐಸ್ ತಂಡವು  ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ವಿಜೇತರಾದರು. ಹುಡುಗಿಯರ ಆರು ತಂಡಗಳಿದ್ದು,  ಫೀನಿಕ್ಸ್ ತಂಡ ವಿಜೇತರು ಮತ್ತು ಹಾಕ್ ಐಸ್ ರನ್ನರ್ಸ್ ಆಗಿ ಹೊರಹೊಮ್ಮಿದರು.  ಫೈನಲ್ಸ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿಕಾಸ್ ಬಿ ಪೂಜಾರಿ, ಬೆಸ್ಟ್ ಬೌಲರ್ ರಜಿಕ್, ಬೆಸ್ಟ್ ಬ್ಯಾಟ್ಸ್‌ಮನ್ ಅಖಿಲ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಸುಜಲ್ ಎಸ್ ಶೆಟ್ಟಿ ವಿಶೇಷ ಕ್ರೀಡಾಪ್ರತಿಭೆ ಮೆರೆದರು. ಈ ಪಂದ್ಯಾಟವನ್ನು ಕಾಲೇಜಿನ ವಿದ್ಯಾರ್ಥಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಪೂಜಾರಿ, ಹಾಗೂ ದೈಹಿಕ ನಿರ್ದೇಶ ಡಾ . ನವೀನ್ ಕುಮಾರ್ ಸಂಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅಥಿತಿಗಳಾದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ದೀಪಕ್ ಕುಮಾರ್, ಮ್ಯಾನೇಜರ್ ವಿವೇಕಾನಂದ ಬಸ್ರೂರು, ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್  ಪ್ರಸಾದ್ , ನಿರ್ಣಾಯಕರಾದ ವಿಘ್ನೇಶ್ ಕೊಲ್ಕೆರೆ ಯೋಗೀಶ್ ಗೋಳಿಯಂಗಡಿ ಮತ್ತು ಕಾಮೆಂಟರಿಯಲ್ಲಿ ಪ್ರವೀಣ್ ಮಾರ್ಗೋಳಿ ಭಾಗವಹಿಸಿದ್ದರು. ಈ ಪಂದ್ಯಾಟಕ್ಕೆ ಸಿವಿಲ್ ಕಂಟ್ರಾಕ್ಟರ್  ಪ್ರವೀಣ್, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಯುವಮೇರಿಡಿಯನ್ ಮತ್ತು ಎಂ ಐ ಟಿ ಕೆ ಅಧ್ಯಾಪಕರಾದ  ಗಗನ್ ಅವರು ಸಹಕರಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!