spot_img
Wednesday, November 19, 2025
spot_img

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ

ಮುಂಬಯಿ: ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಸಂಘಟನೆಯನ್ನು ಮುನ್ನೆಡೆಸುವ ಜವಬ್ದಾರಿ ಯುವ ಜನತೆಯ ಮೇಲಿದೆ. ಆ ನಿಟ್ಟಿನಲ್ಲಿ ಮುಂದಿನ ಅವಧಿಗೆ ಸಂತೋಷ್ ಪುತ್ರನ್ ನೇತೃತ್ವದ ಬಲಿಷ್ಠ ತಂಡದ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸದಸ್ಯರೆಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದರೊಂದಿಗೆ ತಮ್ಮ ಮಕ್ಕಳು ಕೂಡಾ ಭಾಗವಹಿಸುವಂತಾಗಬೇಕು ಎಂದು ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿ ಮುಂಬಯಿ ಇದರ ಗೌರವಾಧ್ಯಕ್ಷ ಸುರೇಶ್ ಕಾಂಚನ್ ಹೇಳಿದರು.

ಅವರು ಅಕ್ಟೋಬರ್ 5 ರಂದು ಮುಂಬಯಿ ಫೋರ್ಟ್‌ನಲ್ಲಿರುವ ಕಾಂಜೀ ಕೇತ್ಸಿ ಸಭಾಗೃಹದಲ್ಲಿ ಜರಗಿದ ಸಂಘದ ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೆರವು ನೀಡಲು ನಾವು ಸಿದ್ಧರಿದ್ದೇವೆ ಸದಸ್ಯರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಅದು ಅಲ್ಲದೆ ನಮ್ಮ ಸಂಘದ ಶಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಆಡಳಿತ ಮಂಡಳಿಯ ಗಮನಕ್ಕೆ ತಂದರೆ ಅಂತಹ ವಿದ್ಯಾರ್ಥಿಗಳಿಗೆ ನಾವು ನೆರವು ನೀಡಬಹುದು. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ನಾವು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಬೇಕಾಗಿದೆ. ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಕೂಡ ಅವರಿಗೆ ನಮ್ಮ ಇತಿಹಾಸ ಪುರಾಣಗಳ ಬಗ್ಗೆ ಮಾಹಿತಿ ಇರುವುದು ತುಂಬಾ ಸಂತಸದ ಸಂಗತಿ ಸಂಘಟನಾಭಿವೃದ್ಧಿಗೆ ತಾವೆಲ್ಲರೂ ಸಹಕಾರ ನೀಡಬೇಕು ಸಂಘಟನೆಯ ಬಲವರ್ಧನೆಗೆ ಸದಸ್ಯರೆಲ್ಲರು ಕೈ ಜೋಡಿಸಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾಬಲ ಕುಂದರ್ ಮಾತನಾಡುತ್ತಾ, ಮಕ್ಕಳು ಅತ್ತ್ಯುತ್ತಮವಾದ ರೀತಿಯಲ್ಲಿ ಕಾರ್ಯಕ್ರಮಗಳನ್ನು ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಜನರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದು ಶೈಕ್ಷಣಿಕ ನೆರವು ಪಡೆದ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಮರೆಯಬಾರದು. ನಾವು ಇನ್ನು ಮುಂದೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ನೆರವು ನೀಡಬೇಕು ಎಂದರು.

ನೂತನ ಅಧ್ಯಕ್ಷ ಸಂತೋಷ್ ಪುತ್ರನ್ ಮಾತನಾಡುತ್ತಾ, ಇಂದು ನಡೆದ ಹಲವಾರು ಸ್ಪರ್ಧೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡಿರುವುದು ಮತ್ತು ಹಾಡು ಹೇಳಿರುವುದು ನೋಡಿ ತುಂಬಾ ಖುಷಿಯಾಯಿತು. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಭಂಗವಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತೇನೆ. ನಮ್ಮ ಸಮುದಾಯದಲ್ಲಿ ಬೆಳಕಿಗೆ ಬಾರದೆ ಉಳಿದಿರುವ ಅದೆಷ್ಟೋ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯಗೊಳಿಸುವ ಪ್ರಯತ್ನ ಮಾಡಲಿದ್ದೇವೆ ಯುವ ಜನರು ಮುಂದೆ ಬಂದು ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನನಗೆ ದೊರೆತ ಈ ಮೂರು ವರ್ಷದ ಅವಧಿಯನ್ನು ವ್ಯರ್ಥ ಮಾಡದೆ ಸಂಘದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೇಳಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರದೀಪ ಚಂದನ್ ಸಂಘದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಹತ್ತು ಮತ್ತು ಹನ್ನೆರಡನೆ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕುರಿತು ಕೆಲವೊಂದು ಕಿವಿಮಾತುಗಳನ್ನು ಹೇಳಿದರು.

ಮುಂಬರುವ ೨೦೨೫-೨೭ರ ಕಾಲಾವಧಿಗೆ ಆಯ್ಕೆಗೊಂಡಿರುವ ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಲಾಯಿತು. ವಿವಿಧ ವಯೋಮಿತಿಗೆ ಅನುಗುಣವಾಗಿ ಆಯೋಜಿಸಿದ ವಿವಿಧ ಪ್ರತಿಭಾ ಸ್ಪರ್ಧೆಗಳಲ್ಲಿ ವಿಜೇತರಾದ ಚಿರಾಗ್ ಮೆಂಡನ್ ಅಂಶು ಚಂದನ್ ಧನ್ವಿ ಮೊಗವೀರ ಸಹನ್ಯ ಪುತ್ರನ್ ಸನ್ನಿಧಿ ಮೊಗವೀರ ಆದ್ಯಾ ಮೊಗವೀರ ಸಾನ್ವಿ ಮೊಗವೀರ ಸಾನಿಕಾ ಮೊಗವೀರ ಪ್ರಿಯಾಂಶು ಸುವರ್ಣ ಸಿದ್ದೀನಾ ಮೊಗವೀರ ಶ್ರೇಯಾಂಶ್ ಶ್ರಾವ್ಯ ಕಾಂಚನ್ ಅನುಶ್ರೀ ಚಂದನ್ ಆಸ್ತಿಕ್ ಮೊಗವೀರ ಮತ್ತು ಪೂಜಾ ಬಂಗೇರ ಅವರುಗಳಿಗೆ ಬಹುಮಾನ ವಿತರಿಸಿದರೆ ವಿದ್ಯಾರ್ಥಿವೇತನಕ್ಕೆ ಸಹಾಯಧನ ನೀಡಿದವರನ್ನು ಗೌರವಿಸಲಾಯಿತು. ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಗೋಪಾಲ್ ಚಂದನ್, ಹಿರಿಯರಾದ ಶ್ರೀನಿವಾಸ್ ಮೆಂಡನ್, ಅಶೋಕ ಮೆಂಡನ್, ಸಂಘದ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ದೇಣಿಗೆ ನೀಡಿದ ಭಾಸ್ಕರ್ ಶ್ರೀಯಾನ್ ಮತ್ತು ಅರವಿಂದ ಪುತ್ರನ್ ಅವರನ್ನು ಗೌರವಿಸಲಾಯಿತು.

ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ವಹಿಸಿದ್ದರು. ನಾಣು ಚಂದನ್, ಎನ್. ಹೆಚ್. ಬಗ್ವಾಡಿ, ಸಂತೋಷ್ ಪುತ್ರನ್, ಸುಚಿತ್ರಾ ಪುತ್ರನ್, ರತ್ನಾಕರ ಚಂದನ್, ರಾಜು ಮೊಗವೀರ, ಗೋಪಾಲ ಮೊಗವೀರ, ನಾರಾಯಣ ಮೆಂಡನ್, ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್, ಕೋಶಾಧಿಕಾರಿ ಸತೀಶ್ ಶ್ರೀಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ವಯೋಮಿತಿಗೆ ಅನುಗುಣವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯ ತೀರ್ಪುಗಾರರಾಗಿ ಗುರುಗಳಾದ ಡಾ. ಮನಾಲಿ ರಾವ್ ಮತ್ತು ಡಾ. ಮೀನಾಕ್ಷಿ ಶ್ರೀಯಾನ್ ಸಹಕರಿಸಿದರು.

ಡೊಂಬಿವಲಿ ಶಾಖೆಯ ದಶಮಾನೋತ್ಸವ ಕಾರ್ಯಕ್ರಮಗಳು ಡಿಸೆಂಬರ್ ಮಾಸದಿಂದ ಆರಂಭವಾಗಲಿದೆ. ಅದಕ್ಕಾಗಿ ಸಮಾಜ ಬಾಂಧವರ ಸಹಕಾರ ಕೋರಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಭಾ ಸ್ಪರ್ಧೆಯನ್ನು ಶರಾವತಿ ಸುವರ್ಣ ಹಾಗೂ ಸಭಾ ಕಾರ್ಯಕ್ರಮವನ್ನು ರಾಘವೇಂದ್ರ ಬಗ್ವಾಡಿ ನಿರ್ವಹಿಸಿದರೆ ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್ ವಂದಿಸಿದರು ಸದಸ್ಯರಾದ ಮೀನಾಕ್ಷಿ ಮೊಗವೀರ, ತಾರಾ ಬಂಗೇರ, ಶಾಂತಿ ಮೊಗವೀರ, ರಾಜೇಂದ್ರ ಚಂದನ್, ಸುರೇಶ ತೋಳಾರ್, ಮಾಧವ ಚಂದನ್, ಉದಯಕುಮಾರ್ ಪುತ್ರನ್, ರಘುರಾಮ ಮೆಂಡನ್ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!