spot_img
Monday, March 16, 2026
spot_img

ಯುವಜನತೆ ವ್ಯಸನಗಳಿಂದ ದೂರವಿದ್ದಾಗ ದೇಶದ ಸಮೃದ್ಧಿ ಸಾಧ್ಯ-ಸಚ್ಚಿದಾನಂದ ಅಡಿಗ

ಅಮಾಸೆಬೈಲು: ಯುವಜನತೆ ಚಟ ವ್ಯಸನಗಳಿಂದ ದೂರವಾಗಿದ್ದಷ್ಟು ದೇಶದ ಸಮೃದ್ಧಿ ಸಾಧ್ಯವಾಗುತ್ತದೆ. ಯುವಕರು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಈ ಎಲ್ಲ ವ್ಯಸನಗಳಿಂದ ಕಾಪಾಡಬೇಕು. ಶಾಲಾ ಕಾಲೇಜಿನ ಆಸು ಪಾಸಿನಲ್ಲಿ ಯಾವುದೇ ತರಹದ ವ್ಯಸನಕ್ಕೆ ಒಳಗಾಗುವಂತಹ ಕಾರ್ಯಕ್ರಮಗಳು ಅಥವಾ ಅಂಗಡಿಗಳು ಇರಕೂಡದು, ಯುವಜನತೆ ದೇಶದ ಆಸ್ತಿ ಅವರನ್ನು ಸರಿದಾರಿಯಲ್ಲಿ ಕರೆದೊಯ್ಯುವಲ್ಲಿ ಸಮಾಜದ ಪಾತ್ರ ಬಹಳಷ್ಟಿದೆ ಎಂದು ಸಚ್ಚಿದಾನಂದ ಅಡಿಗರವರು ಅಭಿಪ್ರಾಯಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ನಡೆದ ವ್ಯಸನ ಮುಕ್ತ ಭಾರತ ಇದರ ಪ್ರಯುಕ್ತ ಪ್ರಮಾಣ ವಚನ ಬೋಧಿಸುತ್ತಾ ನಾವೆಲ್ಲರೂ ಒಟ್ಟಾಗಿ ನಮ್ಮ ಜಿಲ್ಲೆ, ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸಲು ದೃಢ ನಿರ್ಧಾರ ತೆಗೆದುಕೊಳ್ಳೋಣ ಮಾದಕ ವಸ್ತು ಮುಕ್ತಗೊಳಿಸೋಣ ಎಂದರು.

ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ವಡ್ಡರ್ಸೆ, ಶಾಲಾ ಸಂಚಾಲಕರು ಶಶಿಧರ ಎನ್ ದೇವಾಡಿಗ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್, ಟ್ರಾನ್ಸ್ ಪೋರ್ಟ್ ಮ್ಯಾನೇಜರ್ ರಮಾಕಾಂತ ಪೂಜಾರಿ, ಶಾಲಾ ಶಿಕ್ಷಕರಾದ ನಳಿನಿ ಎಂ ರಾವ್, ಜ್ಯೋತಿ ಕುಂಜತ್ತಾಯ, ವಿಘ್ನೇಶ್ ಜಿ‌ಎಲ್ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!