spot_img
Tuesday, March 17, 2026
spot_img

ವಕ್ವಾಡಿ | ಕಾಲಕಾಲಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಆಗುವುದು ಊರಿನ ಸೌಭಾಗ್ಯ : ಡಾ. ವಿಜಯ ಮಂಜರು

ಜನಪ್ರತಿನಿಧಿ (ವಕ್ವಾಡಿ) : ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಎಲ್ಲಾ ದೇವತಾ ಕಾರ್ಯಗಳು ಒಂದು ಜ್ಞಾನದ ಪರಾಕಾಷ್ಠೆಯಲ್ಲಿ ಪರಿಸಮಾಪ್ತಿ ಹೊಂದಬೇಕು. ಭಗವಂತನ ಮುಂದೆ ನಾವು ಅನುಭವಿಸುವ ಅನುಭೂತಿಯಲ್ಲಿಯೇ ಎಲ್ಲಾ ಭಕ್ತಿಯ ಸಾರವಿದೆ ಎಂದು ಡಾ. ವಿಜಯ ಮಂಜರು ಹೇಳಿದರು.

ಅವರು ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಹಳೆಯಮ್ಮ ದೇವಿಯ ಪುನರ್ ಪ್ರತಿಷ್ಠೆಯ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಇಂದು (ಮಂಗಳವಾರ) ನಡೆದ ಧಾರ್ಮಿಕ ಪ್ರವಚನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಲಕಾಲಕ್ಕೆ ಊರಿನ ದೇವಸ್ಥಾನದ ಜೀರ್ಣೋದ್ಧಾರ ಆಗುವುದು ಊರಿನ ಸೌಭಾಗ್ಯ. ಭಗವಂತನ ಪುಣ್ಯದ ವ್ಯವಹಾರದಲ್ಲಿ ಎಂದೂ ಮೋಸ ಆಗುವುದಿಲ್ಲ. ಹಾಗಾಗಿ ಭವನಂತನ ಸೇವೆಯಲ್ಲಿ ಭಾಗಿಯಾಗುವುದು ಮುಖ್ಯ ಎಂದು ಅವರು ಹೇಳಿದರು.

ಎಲ್ಲದರಲ್ಲೂ ದೇವರನ್ನು ಕಂಡ0ತಹ ಸಂಸ್ಕೃತಿ ನಮ್ಮದು. ಪ್ರಕೃತಿಯನ್ನು ಆರಾಧಿಸುವ ದಿವ್ಯ ಪರಂಪರೆ ನಮ್ಮದು. ಇಂತಹ ಸನಾತನ ಸಾಕಾರ ಚಿಂತನೆ ನಮ್ಮಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಭಗವಂತ ಸರ್ವತಂತ್ರ ಸ್ವತಂತ್ರ. ಆತನ ಆರಾಧನೆಯ ನೆಲೆಯಲ್ಲಿ ನಾವು ಬದುಕಿರುವುದೇ ನಮ್ಮಲ್ಲೆಲ್ಲರ ಪುಣ್ಯವೆಂದು ಭಾವಿಸುವುದರಿಂದಲೇ ಅನಂತ ಪುಣ್ಯ ಲಭಿಸುತ್ತದೆ. ಪುಣ್ಯ ಕಾಣಿಸುವುದಿಲ್ಲ. ಪುಣ್ಯ ನಮಗೆ ಅರಿವಿಲ್ಲದೇ ನಮಗೆ ಲಭ್ಯವಾಗುತ್ತಲೇ ಇರುತ್ತದೆ. ಸೃಷ್ಟಿ ಮತ್ತು ಲಯ ನಮ್ಮ ಆಧ್ಯಾತ್ಮಿಕ ತತ್ವ ನಮಗೆ ಹಾಕಿ ಕೊಟ್ಟ ದಾರಿ ಎಂದು ಅವರು ಹೇಳಿದರು.

ಮಹಾಲಿಂಗನ ಆರಾಧನೆ ಎಂದರೆ ಸಗುಣ, ನಿರ್ಗುಣಗಳ ಆರಾಧನೆ. ದೇವರು ಎಲ್ಲೆಡೆ ಇದ್ದಾನೆ. ಧಾರ್ಮಿಕತೆಯ ಭಾವನೆ ಉದ್ದೀಪನಗೊಳ್ಳಲು ದೇವಸ್ಥಾನಗಳು ಬೇಕು. ದೇವಸ್ಥಾನಗಳ ಜೀರ್ಣೋದ್ಧಾರ ಇಡೀ ಊರಿಗೆ ಚೈತನ್ಯ ತುಂಬುವ ಕಾರ್ಯ ಎಮದು ಅವರು ಹೇಳಿದರು.

ಬಳಿಕ ಜೀಣೋದ್ಧಾರ ಕಾರ್ಯಕ್ಕೆ 25,000 ರೂ. ಮತ್ತು ಅದಕ್ಕಿಂತ ಹೆಚ್ಚಿಗೆ ದೇಣಿಗೆ ನೀಡಿದ ದಾನಿಗಳಿಗೆ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅನುವಂಶಿಯ ಮುಕ್ತೇಸರರಾದ ವಿ. ಲಕ್ಷ್ಮೀ ನಾರಾಯಣ ಹೊಳ್ಳ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ದುಬೈ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎ ಚಂದ್ರಶೇಖರ ಶೆಟ್ಟಿ, ಹುಬ್ಬಳ್ಳಿ ಹಾಗೂ ಪರ್ಯಾಯ ಅರ್ಚಕ ಗಿರೀಶ್ ಐತಾಳ್, ಪುರುಷೋತ್ತಮ ಹೊಳ್ಳ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಅಕ್ಷತಾ ಗಿರೀಶ್, ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!