spot_img
Tuesday, March 17, 2026
spot_img

ವಕ್ವಾಡಿ : ಮಹಾಲಿಂಗೇಶ್ವರನಿಗೆ ಅಷ್ಠಬಂಧ, ಶಿಖರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ | ಹಳೆಯಮ್ಮ ದೇವಿ ಪ್ರತಿಷ್ಠಾಪನೆ

ಜನಪ್ರತಿನಿಧಿ (ವಕ್ವಾಡಿ) : ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಹಳೆಯಮ್ಮ ದೇವಿಯ ದೇವಸ್ಥಾನಗಳ ಜೀರ್ಣೋದ್ಧಾರ, ಅಷ್ಠಬಂಧ ಮತ್ತು ಬ್ರಹ್ಮಕಲಶೋತ್ಸವು ಆದಿತ್ಯವಾರ ವೇದಮೂರ್ತಿ ಪ್ರಸನ್ನ ಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಆರಂಭವಾಯಿತು.

ವಕ್ವಾಡಿಯ ಪಂಚಾಯತ್ ವಠಾದ ಬಳಿ ಇರುವ ದೇವಸ್ಥಾನದ ಸ್ವಾಗತ ಗೋಪುರದ ಬಳಿಯಿಂದ ಆದಿತ್ಯವಾರ ಸಂಜೆ ಶ್ರೀ ಮಹಾಲಿಂಗೇಶ್ವರನ ಉತ್ಸವಕ್ಕಾಗಿ ನೂತನವಾಗಿ ನಿರ್ಮಿಸಿದ ಪಲ್ಲಕ್ಕಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾಕ್ಕೆ ಕಲಶ ಶಿಖರ, ಶ್ರೀ ಹಳೆಯಮ್ಮ ದೇವಿ, ಚಿಕ್ಕಮ್ಮ ದೇವಿ, ಹೈಗೂಳಿ ದೈವದ ಪದ್ಮ ಶಿಲೆ, ಉತ್ಸವ ಪರಿಕರಣೆಗಳ ವೈಭವದ ಪುರ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರ ಮಾಡಿಕೊಳ್ಳಲಾಯಿತು.

ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹಳೆಯಮ್ಮ ದೇವಸ್ಥಾನಗಳಲ್ಲಿ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಅಧಿವಾಸ ಹೋಮಗಳು ನಡೆದವು.

ನಿನ್ನೆ (ಸೋಮವಾರ) ಬೆಳಗ್ಗೆ ದೇವರ ಉತ್ಸವ ಕಟ್ಟೆನಾಗ ಮತ್ತು ದೇವಸ್ಥಾನದ ನಾಗ ದೇವರ ಪ್ರತಿಷ್ಠೆ ಮತ್ತು ನವಕಪ್ರಧಾನ ಕಲಶಾಭಿಷೇಕ ಹಾಗೂ ಕರ್ಕಾಟಕ ಲಗ್ನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಠಬಂಧ, ಶಿಖರ ಪ್ರತಿಷ್ಠೆ, ಹೋಮಗಳು ನಡೆದವು.

ಹಳೆಯಮ್ಮ ದೇವಿಯ ಗುಡಿಯ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ನಾಗನ ಕಟ್ಟೆಯಲ್ಲಿ ನಾಗ ದೇವರ ಪ್ರತಿಷ್ಠೆ, ಕಲಾಹೋಮ ಮತ್ತು ಕಲಶಾಭಿಷೇಕ ಹಾಗೂ ನಾಗ ಸಂದರ್ಶನ ಸೇವೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ ಸ್ಥಾಪನೆ (1008 ಕಲಶ) ಮತ್ತಿತರ ಹೋಮಾದಿಗಳು ನಡೆದವು. ಹಳೆಯಮ್ಮ ದೇವಿ ಪರಿವಾರ ದೈವಗಳ ಪ್ರತಿಷ್ಠಾಪನೆ, ಕಲಾಹೋಮ ಮತ್ತು ಕಲಶಾಭಿಷೇಕ, ದೇವಿಯ ದರ್ಶನ ಸೇವೆ ಹಾಗೂ ಮಹಾಪೂಜೆ ನಡೆಯಿತು.

ಇಂದು (ಮ0ಗಳವಾರ) ಶ್ರೀ ಮಹಾಲಿಂಗೇಶ್ವರನಿಗೆ ಕಲಶಾಧಿವಾಸಹೋಮ ಮತ್ತು ಬ್ರಹ್ಮಕಲಶೋತ್ಸವ, ಶತರುದ್ರಾಭಿಷೇಕ, ಮಹಾಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶಿಯ ಮುಕ್ತೇಸರರಾದ ವಿ. ಲಕ್ಷ್ಮೀ ನಾರಾಯಣ ಹೊಳ್ಳ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ದುಬೈ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎ ಚಂದ್ರಶೇಖರ ಶೆಟ್ಟಿ, ಹುಬ್ಬಳ್ಳಿ ಹಾಗೂ ಪರ್ಯಾಯ ಅರ್ಚಕ ಗಿರೀಶ್ ಐತಾಳ್ ಸೇರಿ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ವಕ್ವಾಡಿ : ಮಹಾಲಿಂಗೇಶ್ವರನಿಗೆ ಅಷ್ಠಬಂಧ, ಶಿಖರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ | ಹಳೆಯಮ್ಮ ದೇವಿ ಪ್ರತಿಷ್ಠಾಪನೆ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!