spot_img
Tuesday, March 17, 2026
spot_img

ಕೆಎಎಸ್ ಪರೀಕ್ಷೆ ಬರೆಯುವ ಗದಗ ಜಿಲ್ಲೆಯ ವಿಕಲಚೇತನ ಶಿವಾನಂದ ಇ. ಸುಂಕದ ಅವರಿಗೆ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು

ಮಂಗಳೂರು: ಕೆಎಎಸ್ ಪರೀಕ್ಷೆ ಬರೆಯುವ ಗದಗ ಜಿಲ್ಲೆಯ ಶಿವಾನಂದ ಇ ಸುಂಕದ ಅವರಿಗೆ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಹಾಗೂ ರಾಜೇಂದ್ರಕುಮಾರ್ ಅವರಿಂದ ಆರ್ಥೀಕ ನೆರವನ್ನು ಸೋಮವಾರ ವಿತರಿಸಲಾಯಿತು.

ಗದಗ ಜಿಲ್ಲೆಯ ನರಗುಂದ ತಾಲೂಕಿನವರಾದ ಶಿವಾನಂದ ಇ ಸುಂಕದ ಶೇ. 80ರಷ್ಟು ವಿಕಲಚೇತನರಾಗಿದ್ದು  ಬಿಕಾಂ ಪದವೀಧರಾಗಿದ್ದಾರೆ. ಕೆಎಎಸ್ ಪರೀಕ್ಷೆ ಬರೆಯುವ ಮಹಾದಾಸೆ ಇಟ್ಟುಕೊಂಡಿರುವ ಶಿವಾನಂದ ಇ ಸುಂಕದ ಅವರು ಗದಗದಿಂದ ಮಂಗಳೂರಿಗೆ ಬಂದು ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಶಿವಾನಂದ ಅವರ ಮನವಿಗೆ ಸ್ಪಂದಿಸಿದ ರಾಜೇಂದ್ರ ಕುಮಾರ್ ಕೂಡಲೇ ಅವರಿಗೆ  ಆರ್ಥಿಕ ನೆರವನ್ನು ನೀಡಿ ಅವರ ಮುಂದಿನ ಭವಿಷ್ಯ ಕ್ಕೆ ಶುಭಕೋರಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಮಾಜಿ ನಿರ್ದೇಶಕರಾದ ರಾಜು ಪೂಜಾರಿ,  ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಉದ್ಯಮಿ ಇನಾಯಿತ್ ಅಲಿ, ಜಯಪ್ರಕಾಶ್ ತುಂಬೆ, ಸತೀಶ್ ಜಿ. ಎಸ್. ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!