spot_img
Sunday, February 15, 2026
spot_img

ಐ.ಸಿ.ಎಸ್.ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಹಟ್ಟಿಯಂಗಡಿ ಶಾಲೆಗೆ ದಾಖಲೆಯ ಫಲಿತಾಂಶ

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ 2024–25ನೇ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, ಕಳೆದ   22 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ಕುಂದಾಪುರ ತಾಲ್ಲೂಕಿನ ಏಕೈಕ ಐಸಿಎಸ್ಇ ಪಠ್ಯಕ್ರಮದ ಶಾಲೆ ಇದಾಗಿದೆ.

ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 660 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ, ಪಾಠಶಾಲೆ, ಶೈಕ್ಷಣಿಕ ನೆರವು, ಶಿಸ್ತು – ಎಲ್ಲವನ್ನೂ ಒಟ್ಟಿಗೆ ನೀಡುತ್ತಿರುವ ಈ ಸಂಸ್ಥೆ ಈ ಭಾಗದ ಮಾದರಿ ವಸತಿ ಶಾಲೆಯಾಗಿ ಹೊರಹೊಮ್ಮಿದೆ.

ಈ ವರ್ಷ 237 ವಿದ್ಯಾರ್ಥಿಗಳು ಐಸಿಎಸ್ಇ 10ನೇ ವರ್ಗದ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 139 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 98 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಕುಮಾರಿ ದೀಕ್ಷಾ ಕೋರಿ  98.80% ಅಂಕದೊಂದಿಗೆ  ಪ್ರಥಮ ಸ್ಥಾನ, ಕುಮಾರಿ ನಿಧಿ ಶೆಟ್ಟಿ 98.60%  ದ್ವಿತೀಯ ಸ್ಥಾನ ಹಾಗೂ ಕುಮಾರಿ ಹರ್ಷಿತಾ ಎಸ್. ಪೂಜಾರಿ 98.20% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ನಿರಂತರ ಸಾಧನೆ ಶಾಲೆಯ ಮಾದರಿಯ ಶಿಕ್ಷಣ ತಂತ್ರ, ಶಿಸ್ತಿನ ಪರಿಸರ ಹಾಗೂ ಶಿಕ್ಷಕರ ದಿಟ್ಟ ಸಮರ್ಪಣೆಯ ಫಲದಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಫಲಿತಾಂಶವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ, ಈ ಸಾಧನೆಯ ಹಿಂದೆ ನಿಂತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ನಿರಂತರ ಸಹಕಾರ ನೀಡಿದ ಪೋಷಕರ ಭರವಸೆಯೇ ಕಾರಣವೆಂದು ಶಾಲೆಯ ಪ್ರಾಂಶುಪಾಲರೂ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಅವರು ಈ ಗೌರವವನ್ನು ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!