spot_img
Sunday, February 15, 2026
spot_img

ಗಂಗೊಳ್ಳಿ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ | 13 ಕಾಂಗ್ರೆಸ್, 12 ಬಿಜೆಪಿ, 6 ಎಸ್.ಡಿ.ಪಿ.ಐ ಬೆಂಬಲಿತರಿಗೆ ಜಯ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಹಿಂದುತ್ವದ ಭದ್ರಕೋಟೆಯಾಗಿದ್ದ ಗಂಗೊಳ್ಳಿಯಲ್ಲಿ ಬಿಜೆಪಿಯ ಆಂತರಿಕ ಅಸಮಾಧಾನದಿಂದ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ಒಟ್ಟು 33 ಸದಸ್ಯ ಬಲದ ಗಂಗೊಳ್ಳಿಯಲ್ಲಿ 13 ಕಾಂಗ್ರೆಸ್ ಬೆಂಬಲಿತರು, 12 ಬಿಜೆಪಿ ಬೆಂಬಲಿತರು, 6 ಎಸ್.ಡಿ.ಪಿ.ಐ ಬೆಂಬಲಿತರು, 2 ಪಕ್ಷೇತರರು ಜಯ ಗಳಿಸಿದ್ದಾರೆ.

ಗಂಗೊಳ್ಳಿ 1ನೇ ಕ್ಷೇತ್ರದಿಂದ ಗುರುರಾಜ, ರೇಖಾ ಖಾರ್ವಿ, ಸರೋಜ ಕೃಷ್ಣ ಪೂಜಾರಿ, ನಾಗರಾಜ ಖಾರ್ವಿ, ನಾಗರತ್ನ ಶೇರುಗಾರ್, ಗಂಗೊಳ್ಳಿ 2ನೇ ಕ್ಷೇತ್ರದಿಂದ ತಬ್ರರೈಸ್, ಶರೀನಾ, ಅಬೂಬಕ್ಕರ್ ನಾಖೂದಾ, ರಜ್ಬಲ್, ಗಂಗೊಳ್ಳಿ 3ನೇ ಕ್ಷೇತ್ರದಿಂದ ದೀಪಾ, ಗೋಪಾಲ ಖಾರ್ವಿ, ಮಮತಾ ಎಸ್ ಗಾಣಿಗ, ಶ್ಯಾಮಲ ಶೆಡ್ತಿ, ಗಂಗೊಳ್ಳಿ 4ನೇ ಕ್ಷೇತ್ರದಿಂದ ಮಹೇಶ್, ಅಮ್ಮು ಮೊಗವೀರ, ಶೋಭಾ ಕೃಷ್ಣ ಬಿಲ್ಲವ, ದೇವೇಂದ್ರ ಖಾರ್ವಿ, ಗಂಗೊಳ್ಳಿ 5ನೇ ಕ್ಷೇತ್ರದಿಂದ ಲಕ್ಷ್ಮೀ ಪೂಜಾರಿ, ಜನ್ನಿ ಖಾರ್ವಿ, ಗಣೇಶ ಪೂಜಾರಿ, ಜಯೇಂದ್ರ ಖಾರ್ವಿ, ಗಂಗೊಳ್ಳಿ 6ನೇ ಕ್ಷೇತ್ರದಿಂದ ಮಂಜುಳಾ ದೇವಾಡಿಗ, ಮ್ಯಾಕ್ಸಿಮ್ ಆಲ್ಭರ್ಟ್ ಫೆರ್ನಾಂಡೀಸ್, ಜಮೀಲಾ, ಮೋಮಿನ್ ಸಮೀರ್ ಆಹ್ಮದ್, ಜಯಂತಿ ಖಾರ್ವಿ, ಗಂಗೊಳ್ಳಿ 7ನೇ ಕ್ಷೇತ್ರದಿಂದ ಸುರೇಖಾ ಕಾನೋಜಿ, ಶ್ರೀನಾಥ ಖಾರ್ವಿ, ರಿಯಾಜ್ ಆಹಮ್ಮದ್, ಗಂಗೊಳ್ಳಿ 8ನೇ ಕ್ಷೇತ್ರದಿಂದ ಚಂದ್ರ ಖಾರ್ವಿ, ಅಕ್ಕಮ್ಮ ಯು.ಕುಮಾರ್, ಅಶ್ವಿನಿ ಖಾರ್ವಿ, ರಾಜೇಂದ್ರ ಗೆಲುವು ಸಾಧಿಸಿದ್ದಾರೆ.

ಡಿಸೆಂಬರ್ 8ರಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿತ್ತು. ಡಿ.13ರಂದು ಮತ ಎಣಿಕೆ ಕಾರ್ಯ ನಡೆದಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಆರಂಭವಾದ ಮತ ಎಣಿಕೆ ರಾತ್ರಿಯ ತನಕವೂ ನಡೆಯಿತು.

ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‌ಡಿಪಿ‌ಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!