spot_img
Tuesday, March 17, 2026
spot_img

ಭಾರತೀಯ ವಾಯುಪಡೆ ದಿನ : ಪ್ರಧಾನಿ ಮೋದಿ ಶುಭಾಶಯ

ಜನಪ್ರತಿನಿಧಿ (ನವದೆಹಲಿ) : ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಾಯುಪಡೆ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.

ಜಗತ್ತಿನ ನಾಲ್ಕನೇ ಬಲಿಷ್ಠ ಸೇನೆಯಾಗಿರುವ ಭಾರತೀಯ ವಾಯುಪಡೆ ಪ್ರಾರಂಭದಿಂದಲೂ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಭಾರತೀಯ ವಾಯುಪಡೆಯು ಪ್ರಮುಖ ಐದು ಯುದ್ಧಗಳಲ್ಲಿ ಭಾಗಿಯಾಗಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದರೆ ಒಂದು ಯುದ್ಧವು ಚೀನಾದ ನಡುವೆ ನಡೆದಿತ್ತು.

ಭಾರತೀಯ ವಾಯುಪಡೆ ದಿನದ ಮಹತ್ವ
ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಭಾರತೀಯ ವಾಯುಸೇನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಉದ್ದೇಶದಿಂದ ಈ ದಿನವು ಮಹತ್ವವನ್ನು ಪಡೆದುಕೊಂಡಿದೆ. ಈ ದಿನದಂದು ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರನ್ನು ಗೌರವಿಸಲಾಗುತ್ತದೆ. ಅದಲ್ಲದೇ, ನಮ್ಮ ದೇಶದ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮುಖೇನವಾಗಿ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿಯನ್ನು ಪ್ರದರ್ಶಿಸಲಾಗುತ್ತದೆ.

ಪ್ರಧಾನಿ ಮೋದಿ ಶುಭಾಶಯ : ನಮ್ಮ ವೀರ ವಾಯು ಯೋಧರಿಗೆ ವಾಯುಪಡೆ ದಿನದ ಶುಭಾಶಯಗಳು. ನಮ್ಮ ವಾಯುಪಡೆಯು ಅವರ ಧೈರ್ಯ ಮತ್ತು ವೃತ್ತಿಪರತೆಗಾಗಿ ಮೆಚ್ಚುಗೆ ಪಡೆದಿದೆ. ನಮ್ಮ ದೇಶವನ್ನು ರಕ್ಷಿಸುವಲ್ಲಿ ವಾಯುಪಡೆ ಯೋಧರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳುತ್ತಾರೆ.

Air Force Day

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!