spot_img
Wednesday, January 22, 2025
spot_img

ತಲ್ಮಕ್ಕಿಯಲ್ಲಿ ಸಾಮಾಜಿಕ ಅರಣೀಕರಣ, ಗಿಡನಾಟಿ ಕಾರ್ಯಕ್ರಮ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಕುಂದಾಪುರ-2 ತಾಲೂಕು, ಜನಜಾಗೃತಿ ವೇದಿಕೆ ಕುಂದಾಪುರ-2, ಸಾಮಾಜಿಕ ಅರಣ್ಯ ಇಲಾಖೆ ಕುಂದಾಪುರ ಗ್ರಾಮ ಪಂಚಾಯತ್ ಹೊಂಬಾಡಿ-ಮಂಡಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಿದ್ಕಲ್ಕಟ್ಟೆ, ಶ್ರೀಬ್ರಹ್ಮಲಿಂಗೇಶ್ವರ ಆಡಳಿತ ಮಂಡಳಿ ತಲ್ಮಕ್ಕಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಅರಣೀಕರಣ ಕಾರ್ಯಕ್ರಮ ತಲ್ಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು.

ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಪರಿಸರಕ್ಕೆ ಸಂಬಂಧಪಟ್ಟ ಗಿಡನಾಟಿ, ಪರಿಸರ ಮಾಹಿತಿ ,ಸ್ವಚ್ಚತೆ ಮುಂತಾದ ವಿಷಯಗಳನ್ನು ಶಾಲೆ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಆಯೋಜನೆ ಮಾಡಲಾಗುತ್ತಿದೆ. ಈ ದೇವಸ್ಥಾನದ ಆಡಳಿತ ಮಂಡಳಿಯ ಬೇಡಿಕೆಯಂತೆ ದೇವಸ್ಥಾನದ ಆವರಣದಲ್ಲಿ ೫೦೦ ಗಿಡಗಳನ್ನು ನೆಡುವ ಕೆಲಸಮಾಡುತ್ತಿದ್ದು ಇದನ್ನು ಶೌರ್ಯ ಘಟಕದವರು ಹಾಗೂ ಸಂಘದ ಸದಸ್ಯರು ಸೇರಿ ಗಿಡಗಳನ್ನು ನಾಟಿ ಮಾಡಲಿದ್ದಾರೆ. ಆಪತ್ತು ಬಂದಾಗ ವಿಪತ್ತು ನಿರ್ವಹಣಾ ತಂಡದವರು ಸದಾ ಸೇವೆಗೆ ಸಿದ್ದರಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸುಲೇಖಾ ಎಸ್ ಶೆಟ್ಟಿ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು ಅನೇಕ ಉತ್ತಮ ಕೆಲಸಗಳ ಮೂಲಕ ಗ್ರಾಮದ ಅಭಿವೃದ್ದಿಯಲ್ಲಿ ತೊಡಗಿಕೊಂಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಅರುಣ ಕುಮಾರ್ ಹೆಗ್ಡೆ, ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ವಿಶ್ವಾಸ್ ಭಂಡಾರ್ ಕರ್, ಪ್ರೇಮಾನಂದ ಪ್ರಭು, ಭಜನಾ ಪರಿಷತ್ ಸಂಯೋಜಕಿ ಯಶೋಧ ಬಿ ಶೆಟ್ಟಿ, ವಲಯಾಧ್ಯಕ್ಷ ರಮೇಶ ಪೂಜಾರಿ, ಶೌರ್ಯ ಘಟಕದ ಪ್ರತಿನಿಧಿ ಅಶೋಕ್, ಮೇಲ್ವಿಚಾರಕಿ ಪ್ರಮಿಳಾ, ಕೃಷಿ ಮೇಲ್ವಿಚಾರಕ ಪ್ರದೀಪ್ ಕುಮಾರ್, ಸೇವಾಪ್ರತಿನಿಧಿ ಪ್ರತಿಮಾ, ಗಾಯತ್ರಿ ಉಪಸ್ಥಿತರಿದ್ದರು.

ಶೌರ್ಯ ಘಟಕದ ಸದಸ್ಯರು, ಸಂಘಗಳ ಒಕ್ಕೂಟ ಸದಸ್ಯರು ಭಾಗವಹಿಸಿದ್ದರು. ಪ್ರಮೀಳಾ ಸ್ವಾಗತಿಸಿ ವಂದಿಸಿದರು. ಕೃಷಿ ಮೇಲ್ವಿಚಾರಕ ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!