Monday, September 9, 2024

ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ: ಗ್ರಾಮ ಪಂಚಾಯಿತಿ ಬಲವರ್ಧನೆಗೆ ಹಲವು ಮಹತ್ವದ ನಿರ್ಣಯ

ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆ ಕುಂದಾಪುರ ತಾಲೂಕು. ಪಂಚಾಯತ್ ಸಭಾಂಗಣದಲ್ಲಿ ಇತೀಚೆಗೆ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ. ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ವಂಡ್ಸೆ ವಹಿಸಿದ್ದರು. ಒಕ್ಕೂಟದ ಗೌರವಾಧ್ಯಕ್ಷರಾದ ಎಸ್.ಜನಾರ್ದನ್ ಮರವಂತೆ, ಕಾರ್ಯದರ್ಶಿ ಶ್ವೇತಾ ಎಸ್. ಆರ್. ಕುಂಭಾಶಿ, ಖಜಾಂಚಿ ಸೂಲಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು.

ಒಕ್ಕೂಟದ ಸೆಕ್ರೇಟರಿಯೆಟ್ ವತಿಯಿಂದ ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಪ್ರಸ್ತುತ ಗ್ರಾಮ ಪಂಚಾಯತ್ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರೋಪಾಯದ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಕುಂದಾಪುರ ಹಾಗೂ ಬೈಂದೂರು. ತಾಲೂಕಿನ ವಿವಿಧ ಗ್ರಾಮ ಪಂಚಾಯತ್‍ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಎದುರಿಸುತ್ತಿರುವ ಜಿಲ್ಲಾ ಮಟ್ಟದ ಸಮಸ್ಯೆಗಳು:
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‍ಗೆ ಬಿಡುಗಡೆಯಾಗುತ್ತಿರುವ ಅನುದಾನವನ್ನು ವಿನಿಯೋಗಿಸುವಾಗ ಜಿ.ಪಿ.ಡಿ.ಪಿ.ಯ ಅಡಿಯಲ್ಲಿ ಗ್ರಾಮ ಪಂಚಾಯತ್ ಯೋಜಿಸಿದ ಯೋಜನೆಗಳನ್ನೇ ಜಿ.ಪಂ. ಮತ್ತು ತಾ.ಪಂ.ಗಳು ಗ್ರಾಮ ಪಂಚಾಯತ್ ಜೊತೆ ಆಯ್ಕೆ ಮಾಡಿಕೊಳ್ಳಬೇಕು ಎಂದಿದೆ. ಹೀಗಿದ್ದರೂ ಸಹ ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಗ್ರಾಮ ಸ್ವರಾಜ್ ಕಾಯಿದೆಗೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕೈಗೊಳ್ಳುವ ಗ್ರಾ.ಪಂ. ವ್ಯಾಪ್ತಿಯ ಯೋಜನೆಗಳನ್ನು ಜಿ.ಪಿ.ಡಿ.ಪಿ.ಗೆ. ಅನುಗುಣವಾಗಿ ಪಂಚಾಯತ್ ಸಹಯೋಗದಲ್ಲಿ ಕೈಗೊಳ್ಳುವಂತೆ. ಕ್ರಮವಹಿಸಬೇಕು ಎಂದು ನಿರ್ಣಯಿಸಲಾಯಿತು.

ತಾಲೂಕು ಯೋಜನಾ ಸಮಿತಿ ಹಾಗೂ ಜಿಲ್ಲಾ ಯೋಜನಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿಯೇ ಯೋಜನಾ ಪ್ರಕ್ರಿಯೆಗಳು ಸರಿಯಾಗಿ ಆಗುತ್ತಿಲ್ಲ. ಗ್ರಾಮ ಸ್ವರಾಜ್ ಕಾಯಿದೆಯಲ್ಲಿ ಇರುವಂತೆ ಗ್ರಾಮ ಸಭೆ & ಗ್ರಾಮ ಪಂಚಾಯತ್ ಯೋಜನೆಯನ್ನು ಆಧರಿಸಿ ಬೇರೆ ಹಂತದ ಯೋಜನಾ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಕಾರ್ಯನಿರ್ವಹಿಸುವಂತಾಗಬೇಕು.

ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಪಂಚಾಯತ್ ಪರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ. ಜನಸ್ಪಂದನ ಸಭೆ ನಡೆಸುವ ಬಗ್ಗೆ ಗ್ರಾಮ ಪಂಚಾಯತ್‍ಗೆ ಮಾಹಿತಿಯನ್ನು ಕೇವಲ ಮೊದಲ ದಿನವಷ್ಟೇ ನೀಡಿದರು. ಇಡೀ. ಸಭೆಯಲ್ಲಿ ಯಾವುದೇ ರೀತಿಯ ಚರ್ಚೆಗೆ ಆಸ್ಪದವನ್ನೇ ನೀಡಲಿಲ್ಲ. ಅಲ್ಲದೇ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಈ ಬಗ್ಗೆ ಒಟ್ಟಾಗಿ ಪ್ರಬಲವಾಗಿ ಧ್ವನಿ ಎತ್ತುವುದು. ಈ ಬಗ್ಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಂಚಾಯತ್ ರಾಜ್ ಸಚಿವರ ಗಮನಕ್ಕೆ ತರುವಂತೆ ನಿರ್ಣಯಿಸಲಾಯಿತು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‍ನ ಯಾವುದೇ ಗ್ರಾಮ ಪಂಚಾಯತ್‍ಗೆ ಸಂಬಂಧಿಸಿದ ಸಭೆಗಳನ್ನು ಪಿ.ಡಿ.ಓ ಅವರೊಂದಿಗೆ ಮಾತ್ರ. ಸಭೆ. ನಡೆಸಿ. ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತ್‍ನ ವಾಸ್ತವ ಚಿತ್ರಣ ಸಿಗುವುದಿಲ್ಲವಾದ್ದರಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಕುಂಟಾಗುತ್ತಿದೆ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳು ಪಿ.ಡಿ.ಓ. ಹಾಗೂ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಜಂಟಿಯಾಗಿ ನಡೆಯಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು.

ಜಿಲ್ಲಾಡಳಿತವು ನೆರೆ ಪರಿಹಾರ/ಮಳೆ ಹಾನಿ ನಿಧಿಯನ್ನು ಪಂಚಾಯತ್ ಜೊತೆಗೂಡಿ ವಿನಿಯೋಗಿಸುತ್ತಿಲ್ಲ. ಸ್ಥಳೀಯ ಪರಿಸ್ಥಿತಿಯ ಚಿತ್ರಣ ಪಂಚಾಯತ್‍ಗೆ ಇರುವುದರಿಂದ ಗ್ರಾಮ ಪಂಚಾಯತ್ ಜೊತೆಗೂಡಿ ಈ ನಿಧಿಯು ಅಗತ್ಯವಿರುವಲ್ಲಿ ಸದ್ವಿನಿಯೋಗವಾಗಬೇಕು.
ನೆರೆ ಪರಿಹಾರ ನಿಧಿಯ ವಿನಿಯೋಗವನ್ನು ಗ್ರಾಮ ಪಂಚಾಯತ್ ಜೊತೆಗೂಡಿ ಅಗತ್ಯತೆಗೆ ಅನುಗುಣವಾಗಿ ಯೋಜಿಸಿ. ಜಿಲ್ಲಾಡಳಿತವು ಈ ನಿಧಿಯಿಂದ ಪಂಚಾಯತ್ ಮಾಡಿದ ಖರ್ಚನ್ನು ಭರಿಸಬೇಕು. ಗ್ರಾಮ ಪಂಚಾಯತ್ ಕೆ.ಡಿ.ಪಿ. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಿಗೆ ಮಾತ್ರ ಅವಕಾಶವಿದೆ. ಆದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೆ.ಡಿ.ಪಿ.ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೊಂದಿಗೆ ನಾಮನಿರ್ದೇಶಿತ ಸದಸ್ಯರು ಭಾಗವಹಿಸಲು ಅವಕಾಶವಿದೆ. ಕೆ.ಡಿ.ಪಿ.ಸಭೆಗಳಿಗೆ ಸಂಬಂಧ ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಬರುತ್ತಿಲ್ಲ. ಅಲ್ಲದೇ ಬರುವ ಅಧಿಕಾರಿಗಳು, ಸಿಬ್ಬಂದಿಗಳು ಅಭಿವೃದ್ಧಿಯ ಪ್ರಗತಿಯ ಕುರಿತಾದ ಸೂಕ್ತ ಮಾಹಿತಿ ಪಡೆದುಕೊಂಡು ಸಭೆಗೆ ಹಾಜರಾಗುವುದಿಲ್ಲ. ಕೆ.ಡಿ.ಪಿ. ಸಭೆಯ ನಿರ್ಣಯಗಳಿಗೆ ಇತರ ಇಲಾಖೆಯ ಅಧಿಕಾರಿಗಳು ಉತ್ತರದಾಯಿಗಳಾಗುತ್ತಿಲ್ಲ. ಯಾವುದೇ ಇಲಾಖೆಗಳು ಗ್ರಾಮ ಪಂಚಾಯತ್ ಬರೆದ ಪತ್ರಕ್ಕೆ ಉತ್ತರ ಸಹ ನೀಡುವಷ್ಟು ಬದ್ಧತೆ ತೋರುವುದಿಲ್ಲ ಕೆ.ಡಿ.ಪಿ. ಸಭೆಗಳಲ್ಲಿ £ಗದಿತ ನಮೂನೆಯಲ್ಲಿ ಮಾತ್ರ. ಅಂಕಿ-ಅಂಶಗಳನ್ನು ರ?ತಿ ಮಾಡಿಕೊಡಲು ಅವಕಾಶವಿದ್ದು, ಸಮಗ್ರ. ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮಾಡಲಾದ ಮತ್ತು ಮಾಡಬೇಕಾದ ಅಭಿವೃದ್ಧಿಗಳ ಹಾಗೂ ಸಮಸ್ಯೆಗಳ ಕುರಿತಾದ ವಾಸ್ತವ ರಚನೆ ನಡೆಯುತ್ತಿಲ್ಲ. ಇದರಿಂದಾಗಿ ಸಮಗ್ರ ಅಭಿವೃದ್ದಿಯ ಕುರಿತಾದ ಪ್ರಗತಿಯ ಬಗ್ಗೆ ವಿವರಗಳ ವರದಿ, ಮಾಹಿತಿ ಸರಿಯಾಗಿ ಸಿಗುವುದಿಲ್ಲ
ಕೆಡಿಪಿ. ಸಭೆಗಳಿಗೆ ಗ್ರಾಮ ಪಂಚಾಯತ್ ಸಮಿತಿಯ ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಕನಿಷ್ಟ. 5 ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶವಿರಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುವ ಕೆ.ಡಿ.ಪಿ.ಸಭೆಗಳು ಪರಿಣಾಮಕಾರಿಯಾಗಬೇಕಾದರೆ, ಆ ಸಭೆಗಳಲ್ಲಿ ಚರ್ಚಿಸುವ ವಿಷಯಗಳಿಗೆ ಜವಾಬ್ದಾರಿಯುತ ಪ್ರತಿಕ್ರಿಯೆ ಕೊಡಬಲ್ಲಂತಹ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಜರಾಗುವಂತಾಗಬೇಕು. ತಪ್ಪಿದಲ್ಲಿ, ಅವರ ಮೇಲೆ ಅಗತ್ಯ ಶಿಸ್ತುಕ್ರಮ ಕೈಗೊಳ್ಳುವಂತಾಗಬೇಕು. ಕೆ.ಡಿ.ಪಿ. ಸಭೆಯ ನಿರ್ಣಯಗಳಿಗೆ ಸಂಬಂಧಪಟ್ಟ ಇಲಾಖೆಗಳು ಬದ್ಧರಾಗಿರಬೇಕು. ಹಾಗೂ ಗ್ರಾಮ ಪಂಚಾಯತ್ ನಿಂದ ಬಂದ ಪತ್ರಗಳಿಗೆ ಪ್ರತಿಕ್ರಿಯೆ ನೀೀಡಬೇಕು. ಇಡೀ ಪಂಚಾಯತ್‍ನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮಾಡಲಾದ ಮತ್ತು ಮಾಡಬೇಕಾದ ಅಭಿವೃದ್ಧಿಗಳ ಹಾಗೂ ಸಮಸ್ಯೆಗಳ ಕುರಿತಾದ ವಾಸ್ತವ. ಚರ್ಚೆ ನಡೆದು ಪರಿಹಾರ ಕಂಡುಕೊಳ್ಳಬೇಕು.
ನರೆಗಾ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ (ವೈಯಕ್ತಿಕ, ಸಾಮುದಾಯಿಕ ಇತ್ಯಾದಿ) ಕೂಲಿ ಪಾವತಿ, ಸಾಮಗ್ರಿ ವೆಚ್ಚಗಳು ಹೀಗೆ ಎಲ್ಲವೂ ತಕ್ಷಣವೇ ಪಾವತಿಯಾಗುತ್ತಿಲ್ಲ. ಹಣಪಾವತಿ ಬಾಕಿ ಇರುವುದರಿಂದ ನರೇಗಾದ ಅನುಷ್ಟಾನದಲ್ಲಿ ಸಮಸ್ಯೆ ಉಂಟಾಗುತ್ತಿದೆ.
ಕಾಮಗಾರಿ ಮುಗಿದ ನಂತರವೂ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡದೇ ತಕ್ಷಣವೇ ಹಣ ಪಾವತಿಯಾಗುವಂತಾಗಬೇಕು
ಈ ಹಣ ಪಾವತಿ ವಿಳಂಬಕ್ಕೆ ತಾಲೂಕು ಪಂಚಾಯತ್ ಅಲ್ಲಿ ಈ ವಿಷಯದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿಯಿರುವ ಅಧಿಕಾರಿಗಳೂ
ಸಹ ಕಾರಣವಾಗಿದ್ದಾರೆ.
ಸಾಮಾಜಿಕ ಲೆಕ್ಕಪರಿಶೋಧನೆಗೆ ಬರುವವರಿಗೆ ನರೆಗಾ ಯೋಜನೆಯ ಬಗ್ಗೆಯಾಗಲೀ, ಸಾಮಾಜಿಕ ಲೆಕ್ಕಪರಿಶೋಧನೆಯ ಪರಿಕಲ್ಪನೆಯ
ಬಗ್ಗೆಯಾಗಲೀ ಸೂಕ್ತವಾದ ಮಾಹಿತಿ ಇಲ್ಲ. ಇವರು ಅಧಿ£ಯಮದಲ್ಲಿರುವ ಅವಕಾಶವನ್ನು ಕಡೆಗಣಿಸಿ ಗ್ರಾಮ ಪಂಚಾಯತ್ ಆಡಳಿತದಲ್ಲಿ
ಹಸ್ತಕ್ಷೇಪ ಮಾಡುತ್ತಾರೆ. ಕಾರಣವಿಲ್ಲದೇ, ಗ್ರಾಮಸಭಾದ ಸಭೆಯ ಆಕ್ಷೇಪವಿಲ್ಲದಿದ್ದರೂ, ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇದ್ದರೂ ಕೈಗೊಂಡ ಯೋಜನೆ ಸರಿಯಾಗಿಲ್ಲ ಎಂದು ಷರಾ ಬರೆಯುತ್ತಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲ. ಉದಾಹರಣೆಗೆ ಈ ವರ್ಷ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಧ್ವಜಾರೋಹಣ ಮಾಡಬೇಕು ಎಂದು ಇರುವ 2009ರ ಸುತ್ತೋಲೆಯನ್ನು ಪುನರ್‍ಪರಿಗಣಿಸಿ ಎಂದು ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕಡೆಗಣಿಸಿ ಶಾಲೆಗಳಲ್ಲಿ ಧ್ವಜಾರೋಹಣ ಮಾಡಲಾಗಿದೆ.
ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯು ಈ ರೀತಿಯ ಪಂಚಾಯತ್ ಅನ್ನು ಕಡೆಗಣಿಸುವಂತಹ ನಡೆಯನ್ನು, ನಿರ್ಧಾರಗಳನ್ನು ತೆಗೆದುಕೊಂಡು, ಕೆಲವು ತಪ್ಪು ಮಾಹಿತಿಯನ್ನು ಶಾಲೆಗಳಿಗೆ ನೀಡುತ್ತಿದೆ. ಶಿಕ್ಷಣ ಇಲಾಖೆಯೂ ಸಹ ಅವರ ಜೊತೆ ಸೇರಿ ಕೆಲಸ ಮಾಡುತ್ತಿದೆ. ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯಿದೆಯಂತೆ ಸ್ಥಳೀಯ ಸರಕಾರವಾದ ಗ್ರಾಮ ಪಂಚಾಯತ್ ಅದರ ವ್ಯಾಪ್ತಿಗೆ ಒಳಪಡುವ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕಾಯಿದೆಯ ನಿಯಮಗಳು ಹಾಗೂ ಗ್ರಾಮ ಸ್ವರಾಜ್ ಕಾಯಿದೆಯು ಸಮನ್ವಯತೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಶಾಲಾಭಿವೃದ್ಧಿ ಸಮಿತಿಯು ಗ್ರಾಮ ಪಂಚಾಯತ್‍ನ ಉಪಸಮಿತಿಯಾಗಿದ್ದರೂ ಗ್ರಾಮ ಪಂಚಾಯತ್ ಗಮನಕ್ಕೆ ತಾರದೇ ಶಾಲಾಭಿವೃದ್ಧಿ
ಸಮಿತಿ ರಚನೆ ಮಾಡುವುದು, ನಿರ್ಣಯಗಳನ್ನು ಪಂಚಾಯತ್‍ಗಳಿಗೆ ಕಳುಹಿಸದೇ ಇರುವುದು ಹಾಗೂ ಹಣಕಾಸಿನ ನಿರ್ವಹಣೆ ಲೆಕ್ಕಗಳನ್ನು ಕೊಡದೇ ಇರುವುದು ನಡೆಯುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಯಿತು. ಗ್ರಾಪಂ ಜನಪ್ರತಿನಿಧಿಗಳು ಅವರ ಪಂಚಾಯತ್ ವ್ಯಾಪ್ತಿಯ ಜನರ ಪರವಾಗಿ ಯಾವುದೇ ಕೆಲಸಕ್ಕೆ ಹೋದರೆ, ತಾಲೂಕು ಕಛೇರಿಯಲ್ಲಿ ಸೂಕ್ತ ಸ್ವಂದನೆ ದೊರಕುತ್ತಿಲ್ಲ. ಗ್ರಾಮ ಪಂಚಾಯತ್‍ಗಳಲ್ಲಿ ಪಂಚಾಯತ್ ಚುನಾಯಿತ ಸದಸ್ಯರ ಗೌರವಧನ ಮತ್ತು ಸಭಾ ಭತ್ಯೆಯನ್ನು ನಿಯಮಿತವಾಗಿ ನೀಡುತ್ತಿಲ್ಲ. ಇದಕ್ಕಾಗಿ ಪಿ.ಡಿ.ಓ. ಅವರು ಅನುದಾನ ಬಂದ ನಂತರ ನೀಡುವುದಾಗಿ ಹೇಳುತ್ತಾರೆ.ಪಂಚಾಯತ್ ಸಿಬ್ಬಂದಿಗಳಿಗೆ, ಪಿ.ಡಿ.ಓಗಳಿಗೆ ಪ್ರತಿ ತಿಂಗಳು ವೇತನವಾಗುವಂತೆ, ಸದಸ್ಯರ ಗೌರವಧನ ಮತ್ತು ಸಭಾ ಭತ್ಯೆಯನ್ನು ಪ್ರತಿ ತಿಂಗಳೂ ಕಡ್ಡಾಯವಾಗಿ ಕೊಡುವಂತಾಗಬೇಕು.

ಅಪಾಯಕಾರಿ ಮರಗಳನ್ನು ಕಡಿಯುವ ಬಗ್ಗೆ ಗ್ರಾಮ ಪಂಚಾಯಿತಿಗೆ ಗೊಂದಲವಿದೆ. ಅಪಾಯಕಾರಿ ಮರಗಳನ್ನು ನೇರವಾಗಿ ಗ್ರಾಮ ಪಂಚಾಯತ್ ಕಡಿಯುವಂತಿಲ್ಲ. ಇದಕ್ಕಾಗಿ ಅರಣ್ಯ ಇಲಾಖೆಗೆ ಪತ್ರ ಬರೆಯಬೇಕು. ಇಲಾಖೆಯವರು ವಿಷಯ ತಿಳಿಸಿ ಹಲವು ದಿನಗಳಾದರೂ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರಿ ಜಾಗದಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಗ್ರಾಮ ಪಂಚಾಯಿತಿನಲ್ಲಿರುವ ಗ್ರಾಮ ಆಡಳಿತಾಧಿಕಾರಿ ಪ್ರತಿ ಎರಡು ಮೂರು ಪಂಚಾಯಿತಿಗೆ ಚಾರ್ಜ್ ಹಾಕಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಹಾಗಾಗಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.

ಚುನಾವಣಾ ಸಂದರ್ಭದಲ್ಲಿ ಯಾವುದೇ ಖರ್ಚನ್ನು ಗ್ರಾಮ ಪಂಚಾಯಿತಿಗೆ ಹೇರುವಂತಿಲ್ಲ. ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಯವರಿಗೆ ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಅನುದಾನ ಬಿಡುಗಡೆಯಾಗುತ್ತದೆ. ಆ ಅನುದಾನದಲ್ಲಿ ಚುನಾವಣೆಗಳಿಗೆ ಬೇಕಾದ ವ್ಯವಸ್ಥೆಗೆ ಬೇಕಾದ ಖರ್ಚುವೆಚ್ಚಗಳಿಗೆ ಜಿಲ್ಲಾಧಿಕಾರಿಯವರೇ ಜವಾಬ್ದಾರರು. ಯಾವುದೇ ಇಲಾಖೆಯ ಜೊತೆ ಗ್ರಾಮ ಪಂಚಾಯತ್ ಪತ್ರ ವ್ಯವಹಾರ ನಡೆಸಿದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಆ ಇಲಾಖೆಯಿಂದ ನೀಡುವುದಿಲ್ಲ.

ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಆದರೆ ಗ್ರಾಮ ಸ್ವರಾಜ್ ಕಾಯಿದೆಯ ಪ್ರಕಾರ ಗ್ರಾಮ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕರು ಗ್ರಾಮ ಪಂಚಾಯತ್ ಅಧ್ಯಕ್ಷರೇ ಆಗಿರುವುದರಿಂದ ಈ ಸಮಿತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಧ್ಯಕ್ಷರಾಗಿರಬೇಕು.

ಪ್ರತಿ ಪಂಚಾಯತ್ ಗೂ ಒಬ್ಬ ಖಾಯಂ ಪಿ.ಡಿ.ಓ. ಮತ್ತು ಕಾರ್ಯದರ್ಶಿಯವರ ನೇಮಕವಾಗಬೇಕು. ಶಾಸಕರು, ಸಂಸದರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಯಾದರೆ, ಗ್ರಾಮ ಪಂಚಾಯತ್ ಅಲ್ಲಿ ಸ್ಥಾನ ಖಾಲಿ ಇದೆ ಎಂದು ತೋರಿಸಬೇಕು.
ಜನಸಂಖ್ಯೆ ಮತ್ತು ವಿಸ್ತೀರ್ಣದ ಆಧಾರದ ಮೇಲೆ ಶಾಸನಬದ್ದ ಅನುದಾನ ಹೆಚ್ಚಳವಾಗಬೇಕು. ಗ್ರಾಮ ಪಂಚಾಯತ್ ರಾಜ್ಯ ಸರ್ಕಾರದ ವಿಷಯ. ಶಾಸನಬದ್ಧ ಅನುದಾನ ಕೇಂದ್ರದ ಮೊತ್ತಕ್ಕಿಂತ ಕಡಿಮೆ ಆಗುವುದು ಸರಿಯಲ್ಲ. ಶಾಸನಬದ್ಧ ಅನುದಾನವನ್ನು ಕನಿಷ್ಠ ರೂ.25ಲಕ್ಷಗಳಿಗೆ ಹೆಚ್ಚಿಸಬೇಕು

ಸಿಬ್ಬಂದಿ ವೇತನವನ್ನು ಸರ್ಕಾರವೇ ನೀಡುವಂತಾಗಬೇಕು. ಹಾಗೂ ಶಾಸನಬದ್ಧ ಅನುದಾನದ ಬಳಕೆಗೆ ಗ್ರಾಮ ಪಂಚಾಯತ್‍ಗೆ ಮುಕ್ತ ಅವಕಾಶವಿರಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸದಸ್ಯರ ಗೌರವಧನ ಹೆಚ್ಚಳವಾಗಬೇಕು. ಗ್ರಾಮ ಪಂಚಾಯತ್ ಸದಸ್ಯರ ಸಭಾ ಭತ್ಯೆಯನ್ನು ಕನಿಷ್ಠ 1,000/-ಗಳಿಗೆ ಹೆಚ್ಚಿಸಬೇಕು. ಗ್ರಾಮ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕರಾದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಪಂಚಾಯತ್ ಕೆಲಸಕ್ಕೆ ಸಂಬಂಧಿಸಿದ ಓಡಾಟಕ್ಕೆ ಇಂಧನ ವೆಚ್ಚ ನೀಡುವಂತಾಗಬೇಕು. ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಕಾಯಿದೆಯಲ್ಲಿ ಇರುವ ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆಯನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಪರಿಷ್ಕರಿಸಬೇಕು.ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ನೀಡುತ್ತಿರುವ ಆನ್‍ಲೈನ್ ತರಬೇತಿಗಳು ಪಂಚಾಯತ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂವಹನಕ್ಕೆ ಸೂಕ್ತವಾಗುವ ರೀತಿಯಲ್ಲಿ ತರಬೇತಿ ನಡೆಸಬೇಕು. ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಅವರ ಹೆಚ್ಚಿನ ಸಾಮರ್ಥ್ಯಾಭಿವೃದ್ಧಿಗಾಗಿ ಅಧ್ಯಯನ ಪ್ರವಾಸಕ್ಕೆ ವ್ಯವಸ್ಥೆ ಮಾಡಬೇಕು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಇತರ ಎಲ್ಲ ಇಲಾಖೆಗಳ ಕಾಮಗಾರಿಯ ಯೋಜನೆ ಮತ್ತು ಅಂದಾಜುಪಟ್ಟಿಯನ್ನು ಕಾಮಗಾರಿ ಪ್ರಾರಂಭವಾಗುವ ಮೊದಲೇ ಗ್ರಾಮ ಪಂಚಾಯತ್‍ಗೆ ನೀಡುವುದು ಮತ್ತು ಹಸ್ತಾಂತರದ ಅವಶ್ಯಕತೆ ಇದ್ದಲ್ಲಿ ಅಧ್ಯಕ್ಷರ ಮತ್ತು ಪಿ.ಡಿ.ಓ. ಅವರ ಜಂಟಿ ಸಹಿಯನ್ನು ಕಡ್ಡಾಯಗೊಳಿಸಬೇಕು.

ಜಲ ಜೀವನ ಮಿಷನ್ ಯೋಜನೆಯನ್ನು ಖಾಸಗಿ ಏಜನ್ಸಿಗಳಿಗೆ ಗುತ್ತಿಗೆ ನೀಡಿದ್ದು, ಅವರು ಯೋಜನೆಯನ್ನು ತಯಾರಿಸುವಾಗ ಪಂಚಾಯತ್ ಜೊತೆ ಸೇರಿ ಯೋಚಿಸದೇ. ಕೆಲವು ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಈಗ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಕೆಲವು ಪ್ರದೇಶಗಳನ್ನು ಯೋಜನೆಯಲ್ಲಿಲ್ಲ ಎಂಬ ಕಾರಣಕ್ಕೆ ಕೈಬಿಡುತ್ತಿದ್ದಾರೆ. ನೀರು ಸಂಗ್ರಹಿಸುವ ಓವರ್ ಹೆಡ್ ಟ್ಯಾಂಕ್ ಮತ್ತು ಆ ಟ್ಯಾಂಕ್‍ಗೆ ನೀರು ಪೂರೈಸುವ ಪೈಪ್‍ಲೈನ್ ಕಾಮಗಾರಿ ಆರಂಭಿಸುವ ಮೊದಲೇ, ನೀರು ಸರಬರಾಜು ಮಾಡುವ ಪೈಪ್‍ಲೈನ್ ಕಾಮಗಾರಿಗಳನ್ನು ಪ್ರಾರಂಬಿಸಿ. ಅವು ಈಗ ಮುಗಿಯುವ ಹಂತದಲ್ಲಿದೆ. ಅಲ್ಲದೇ ನೀರು ಸರಬರಾಜು ಮಾಡುವ ಪೈಪ್‍ಲೈನ್ ನಿರ್ವಹಣಾ ಅವಧಿ ಕೇವಲ ಒಂದು ವರ್ಷ. ಹೀಗಾಗಿ ಆ ಪೈಪ್‍ಲೈನ್ ನಲ್ಲಿ ಓವರ್ ಹೆಡ್ ಟ್ಯಾಂಕ್ ಆಗಿ ನೀರು ಬರುವ ಮೊದಲೇ ಅದರ ನಿರ್ವಹಣಾ ಅವಧಿ ಮುಕ್ತಾಯವಾಗುತ್ತದೆ. ಇದರೊಂದಿಗೆ ಕಾಮಗಾರಿ ಮುಕ್ತಾಯವಾಗಿ ಅದನ್ನು ಗ್ರಾಮ ಪಂಚಾಯತ್‍ಗೆ ಹಸ್ತಾಂತರ ಮಾಡುವ ಮೊದಲೇ ಗುತ್ತಿಗೆದಾರರಿಗೆ ಹೆಚ್ಚಿನ ಹಣ ಪಾವತಿಯಾಗಿರುತ್ತದೆ. ಕಳಪೆ ಕಾಮಗಾರಿ ನಡೆಸಿದರೂ ಆ ಬಗ್ಗೆ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈಡೀ ಯೋಜನೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿದ್ದು, ಇದರಿಂದಾಗಿ ನೀರು ಪೂರೈಕೆ ಆರಂಭಿಸಿದ ಮೇಲೆ ಸರಾಗವಾಗಿ ನೀರು ಹರಿದು ಹೋಗುವುದು ಸಾಧ್ಯವೇ ಇಲ್ಲ. ಅಲ್ಲದೇ ಈ ರೀತಿಯ ಪೈಪ್‍ಲೈನ್ ಕಾಮಗಾರಿ ಮಾಡುವಾಗ ಕೆಲವೆಡೆ ಹಾನಿಯುಂಟಾಗಿದೆ. ಜಲಜೀವನ್ ಮಿಷನ್ ಕಾಮಗಾರಿಯ ಸಮಯದಲ್ಲಿ ಉಂಟಾದ ಯಾವುದೇ ಹಾನಿಯ ದುರಸ್ಥಿ ಕೆಲಸವನ್ನು ಕಾಮಗಾರಿ ನಡೆಸಿದವರೇ ಪೂರ್ಣಗೊಳಿಸಿಕೊಡಬೇಕು.

ಮರಳು ಮತ್ತು ಕಲ್ಲು ಗಣಿಗಾರಿಕೆಯಿಂದ ಬರುವ ರಾಜಧನದ ಹಂಚಿಕೆ ಗ್ರಾಮ ಪಂಚಾಯತ್ಗಳಿಗೆ ಆಗುತ್ತಿಲ್ಲ. ಸಂಬಂಧಪಟ್ಟ ರಸ್ತೆ ನಿರ್ವಹಣೆ ಗ್ರಾಮ ಪಂಚಾಯತ್ ಜವಾಬ್ದಾರಿಯಾಗುವುದರಿಂದ 50% ರಾಜಧನವು ಗ್ರಾಮ ಪಂಚಾಯತ್‍ಗೆ ಹಂಚಿಕೆಯಾಗಬೇಕು.

ಹಲವು ವರ್ಷಗಳಿಂದ ಗ್ರಾಮ ಪಂಚಾಯತ್‍ಗಳಲ್ಲಿ ನಿವೇಶನ ಹಂಚಿಕೆಯಾಗಿಲ್ಲ. ಭೂಮಿ ಖರೀದಿಸಿ ಹಂಚಿಕೆ ಮಾಡುವ ಅನಿವಾರ್ಯತೆ ಇದ್ದಲ್ಲಿ, ಪ್ರಸ್ತುತ ಎಕರೆಗೆ 9 ಲಕ್ಷ ದರವಿರುವುದರಿಂದ ಖರೀದಿ ಸಾಧ್ಯವಾಗುತ್ತಿಲ್ಲ: ಗ್ರಾಮ ಪಂಚಾಯತ್ ಹಾಗೂ ತಹಶೀಲ್ದಾರ್ ಅವರು ಜಂಟಿಯಾಗಿ ನಿವೇಶನ ಗುರುತಿಸುವ ಕೆಲಸವಾಗಬೇಕು. ನಂತರ, ಗ್ರಾಮ ಪಂಚಾಯತ್‍ನಲ್ಲಿರುವ ಪಟ್ಟಿಯಂತೆ ನಿವೇಶನ ರಹಿತರಿಗೆ ನಿವೇಶನ ಗುರುತಿಸಿ, ಹಂಚಿಕೆಯನ್ನು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಇದಕ್ಕೆ ಗ್ರಾಮ ಪಂಚಾಯತ್‍ಗಳಿಗೆ ಅವಕಾಶ ಮಾಡಿಕೊಡಬೇಕು. ಭೂಮಿ ಖರೀದಿಸಿ ಹಂಚಿಕೆ ಮಾಡುವ ಅನಿವಾರ್ಯತೆ ಇದ್ದಲ್ಲಿ, ಭೂಮಿ ಖರೀದಿಯ ದರವನ್ನು ಹೆಚ್ಚಿಸಬೇಕು.
ರಾಜ್ಯ ಮಟ್ಟದ ವಿಷಯಗಳು: ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ, 25 ಸೆಂಟ್ಸ್ ಜಮೀನಿನವರೆಗೆ ಗ್ರಾಮ ಪಂಚಾಯತ್‍ನಲ್ಲಿಯೇ ಜಿಲ್ಲಾ ಪಂಚಾಯತ್ ಅನುಮೋದಿತ ನೋಂದಾಯಿತ ಖಾಸಗಿ ವಾಸ್ತುಶಿಲ್ಪಿಯವರು ಮಾಡಿದ ಏಕ ನಿವೇಶನ (ಸಿಂಗಲ್ ಲೇ ಔಟ್) ನಕ್ಷೆ/ವಿನ್ಯಾಸಕ್ಕೆ ಅನುಮೋದನೆ ನೀಡುವ ಅಧಿಕಾರ ಇತ್ತು. ಈಗ ತಾಲೂಕು ಮುಖ್ಯ ಕೇಂದ್ರದಲ್ಲಿ ಇದನ್ನು ತಾಲೂಕು ಯೋಜನಾ ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿ ಆದೇಶ ಹೊರಡಿಸಲಾಗಿದೆ. ತಾಲೂಕು ಕೇಂದ್ರದಲ್ಲಿಯೂ ಈ ಬಗ್ಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ, ಇಡೀ ಪ್ರಕ್ರಿಯೆ ವಿಳಂಬವಾಗುತ್ತದೆ. ಆದ್ದರಿಂದ 25 ಸೆಂಟ್ಸ್ ವಿಸ್ತೀರ್ಣದವರೆಗಿನ ಜಮೀನಿಗೆ ಏಕ ನಿವೇಶನ (ಸಿಂಗಲ್ ಲೇ ಔಟ್) ನಕ್ಷೆ/ವಿನ್ಯಾಸಗಳಿಗೆ ಮೊದಲಿನಂತೆ ಅನುಮೋದನೆ ನೀಡುವ ಅಧಿಕಾರ ಮತ್ತು ಜವಾಬ್ದಾರಿ ಗ್ರಾಮ ಪಂಚಾಯತ್ ಗೆ ಇರುವಂತೆ ಒತ್ತಾಯ ಹೇರುವುದು.
15ನೇ ಹಣಕಾಸು ಆಯೋಗದ ಅನುದಾನದ ಗುರಿಯನ್ನು ತಕ್ಷಣವೇ ನಿಗದಿಪಡಿಸಲು ಒತ್ತಾಯಿಸಬೇಕು. ಈಗ ಕೋವಿಡ್ ಪರಿಸ್ಥಿತಿ ಇಲ್ಲದಿರುವುದರಿಂದ 25% ಅನುದಾನದ ಕಡಿತವನ್ನು ಹಿಂಪಡೆದುಕೊಂಡು ಸಂಪೂರ್ಣ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.

ಸರ್ಕಾರದಿಂದ ಹೆಚ್ಚಿನ ಇಂಜಿನಿಯಗರ್ ನೇಮಕವಾಗಬೇಕು, ಅಥವಾ ಸ್ಥಳೀಯವಾಗಿ ಪಂಚಾಯತ್‍ಗಳಿಗೆ ನೇಮಕ ಮಾಡಿಕೊಳ್ಳಲು ಕಾಯ್ದೆಯನುಸಾರ ಅಧಿಕಾರವಿದ್ದು ಸ್ಪಷ್ಟ ಸೂಚನೆ ಅಥವಾ ಆದೇಶವನ್ನು ಸರ್ಕಾರದಿಂದ ನೀಡಬೇಕು. 10 ಸಾವಿರ ಮಾನವದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯತಗಳಿಗೆ ನರೆಗಾ ಕೆಲಸಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಪ್ರಕ್ರಿಯೆ ತುರ್ತಾಗಿ ಆಗಬೇಕು. ರಾಜ್ಯ ಸರ್ಕಾರ ಘೋಷಿಸಿದ ಸಿಬ್ಬಂದಿ ನೇಮಕವನ್ನು ಕಾಯಿದೆಯಲ್ಲಿರುವಂತೆ. ಜಿ.ಪಂ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪೂರ್ವಾನುಮೋದನೆ ಪಡೆದು ಗ್ರಾಮ ಪಂಚಾಯತ್ ನೇಮಕ ಮಾಡುವಂತಾಗಬೇಕು. ಈ ಬಗ್ಗೆ ಯಾವುದೇ ನಿರ್ಧಾರವಾಗದಿದ್ದರೆ, ಒಕ್ಕೂಟದಿಂದ ನ್ಯಾಯಾಲಯದ ಮೊರೆ ಹೋಗಬೇಕು. ಕೆಲವು ಪಂಚಾಯತ್ಗಳ ಪಿಡಿಓಗಳು ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಕಛೇರಿ ಕೆಲಸಗಳಿಗೆ ಹಾಗೂ ಶಾಸಕರು, ಸಂಸದರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಯಾಗಿದ್ದಾರೆ. ಹೀಗಾಗಿ ಒಂದಕ್ಕಿಂತ ಹೆಚ್ಚು ಪಂಚಾಯತ್‍ಗಳಿಗೆ ಒಬ್ಬರಂತೆ ಪಿ.ಡಿ.ಓ/ಕಾರ್ಯದರ್ಶಿಯವರನ್ನು ನಿಯೋಜಿಸಲಾಗುತ್ತದೆ. ಇದರಿಂದಾಗಿ ಪಂಚಾಯತ್ ಅಭಿವೃದ್ಧಿ ಕುಂಠಿತವಾಗುತ್ತಿದೆ ಇತ್ಯಾದಿ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!