Monday, September 9, 2024

ಬೂದಿ ಬಳಸಿ ಭತ್ತದ ನೇಜಿ ತಯಾರಿ: ಕೃಷಿಕ ರಾಘವೇಂದ್ರ ಹಾಲಾಡಿ ಅವರ ವಿನೂತನ ಪ್ರಯೋಗ

ಕುಂದಾಪುರ: ಭತ್ತ ಭೇಸಾಯದಲ್ಲಿ ರೈತರ ವಿಜ್ಞಾನವೇ ಹೊಸ ಕ್ರಾಂತಿಗಳಿಗೆ ಕಾರಣವಾಗುತ್ತಿರುವುದು ಸರ್ವವಿಧಿತ. ರೈತರೇ ತಮ್ಮ ಅಮೂಲ್ಯ ಅನುಭವ ಬಳಸಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಅದರಿಂದ ಯಶಸ್ಸು ಕಾಣುತ್ತಿದ್ದಾರೆ. ಭತ್ತ ಬೇಸಾಯದಲ್ಲಿ ಹಾಲಾಡಿಯ ಪ್ರಗತಿಪರ ರೈತ ರಾಘವೇಂದ್ರ ಹಾಲಾಡಿ ನಿರಂತರವಾಗಿ ಭತ್ತ ಬೇಸಾಯದಲ್ಲಿ ಗುರುತಿಸಿಕೊಂಡವರು. ಯಾಂತ್ರೀಕೃತ ಕೃಷಿ ಪದ್ದತಿಯನ್ನು ಇನ್ನಷ್ಟು ವಿಕಾಸಿತಗೊಳಿಸಲು ಪ್ರಯತ್ನಶೀಲರಾದವರು. ಭತ್ತ ಬೇಸಾಯದಲ್ಲಿ ಯಂತ್ರಗಳು ಕಾಲಿಟ್ಟಾಗ ಸ್ವ ಆಸಕ್ತಿಯಿಂದ ನಾಟಿ ಯಂತ್ರ ಖರೀಧಿಸಿ ಪ್ರತೀ ವರ್ಷ ನೂರಾರು ಎಕರೆ ನಾಟಿ ಮಾಡುವ ಮೂಲಕ ಗಮನ ಸಳೆದ ಬೇಸಾಯಗಾರ.

ನೇಜಿ ತಯಾರಿ, ಸಸಿಮಡಿ ನಿರ್ವಹಣೆ, ಕೊನೆಯಲ್ಲಿ ಯಂತ್ರಗಳ ಮೂಲಕ ನಾಟಿ, ಕಳೆ ನಿರ್ವಹಣೆ, ಕಟಾವು ಹೀಗೆ ಭತ್ತ ಬೇಸಾಯದಲ್ಲಿ ಮಾನವ ಶ್ರಮದಿಂದ ಮುಕ್ತವಾಗಿ ಯಂತ್ರಗಳ ಬಳಕೆಯ ಬಗ್ಗೆ ಹಳ್ಳಿ ಹಳ್ಳಿಯ ರೈತರಿಗೆ ಅರಿವು ಮೂಡಿಸುತ್ತ ಬಂದವರು. ಪ್ರಾರಂಭದಲ್ಲಿ ಯಂತ್ರನಾಟಿಗೆ ನೇಜಿ ತಯಾರಿ ಅತ್ಯಂತ ಪ್ರಮುಖವಾಗುತ್ತದೆ. ಇತ್ತೀಚೆಗೆ ಮ್ಯಾಟ್ ಮೂಲಕ ಭತ್ತದ ನೇಜಿ ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಮಣ್ಣನ್ನು ಜರಡಿ ಹಿಡಿದು ಸಿದ್ಧ ಪಡಿಸುವ ಅದನ್ನು ವ್ಯವಸ್ಥಿತವಾಗಿ ಟ್ರೆ ಗೆ ಹಾಕಿ ಮೊಳಕೆ ಭರಿಸಿದ ಬೀಜವನ್ನು ಹಾಕಿ ಮುಚ್ಚಿಗೆ ಮಾಡುವುದು ಇತ್ಯಾದಿ ಪಾಲನೆ ಕಾರ್ಯಗಳು ಅತ್ಯಂತ ಸೂಕ್ಷ್ಮವಾದುದು. ಈ ಎಲ್ಲಾ ವಿಚಾರದಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುವ ರಾಘವೇಂದ್ರ ಅವರು ಈ ಬಾರಿ ಅಕ್ಕಿ ಗಿರಣಿಯಲ್ಲಿ ಸಿಗುವ ಬೂದಿಯನ್ನು ಬಳಸಿ ನೇಜಿ ತಯಾರಿಸಿ ಯಶಸ್ವಿಯಾಗಿದ್ದಾರೆ.

ಈ ತನಕ ಟ್ರೆಯಲ್ಲಿ ಆರಿಸಿದ ಫಲವತ್ತಾದ ಮಣ್ಣಿನಲ್ಲಿ ನೇಜಿ ತಯಾರಿಸುವುದ್ದಕ್ಕೂ ಟ್ರೆಯಲ್ಲಿ ಬೂದಿ ಬಳಸಿ ನೇಜಿ ತಯಾರಿಸಿದ್ದೂ ತುಂಬಾ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. ಬೂದಿ ಬಳಕೆಯಿಂದ ಸಸಿಮಡಿ ಬಲಿಷ್ಠವಾಗಿದ್ದು ಸಸಿಗಳು ಉದ್ದವಾಗಿ ಬಂದಿದೆ. 14-15 ದಿನಕ್ಕೆ ನೇಜಿ ನಾಟಿಗೆ ಸಿದ್ಧವಾಗುತ್ತದೆ. ಬೇಗ ಬೇರು ಬಿಟ್ಟು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಸಸಿಯ ಬೆಳವಣಿಗೆ ನಿರೀಕ್ಷೆಗೂ ಮೀರಿದ ಉತ್ತಮ ಮಟ್ಟದಲ್ಲಿ ಕಂಡು ಬಂದಿದೆ. ಅಕ್ಕಿ ಗಿರಣಿಯ ಭತ್ತದ ಹೊಟ್ಟನ್ನು ಸುಟ್ಟ ಬೂದಿಯಲ್ಲಿ ಸಾಕಷ್ಟು ಪೋಟಾಶಿಯಂ ಅಂಶ ಹೊಂದಿರುವುದರಿಂದ ಸಸ್ಯಗಳ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿದ್ದು ಹಸಿರಾಗಿ ಬೆಳೆಯುತ್ತದೆ.
ಬೂದಿಯಲ್ಲಿ ಸಸಿ ಮಾಡಿದ್ದರಿಂದ ನಾಟಿ ಕಾರ್ಯ ಬೇಗನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನೇಜಿ ಸೊಕ್ಕಿ ಹೋಗುವ ಸಂದರ್ಭವಿದೆ. ಗರಿಗಳು ಸೊಪ್ಪಾಗುವ ಹಂತವೂ ಇರುತ್ತದೆ. ನಿರ್ದಿಷ್ಟ ದಿನಗಳೊಳಗೆ ನಾಟಿ ಮಾಡಿದರೆ ಗದ್ದೆಗೆ ಬೇಗ ಹೊಂದಿಕೊಂಡು ಬೆಳವಣಿಗೆ ಉತ್ತಮವಾಗುತ್ತದೆ. ರಾಘವೇಂದ್ರ ದೇವಾಡಿಗರು ಈಗಾಗಲೇ ಬೂದಿಯಿಂದ ತಯಾರಿಸಿದ ಸಸಿಮಡಿಯನ್ನು ನಾಟಿ ಮಾಡಿದ್ದು ಸಮೃದ್ಧವಾಗಿ ಬೆಳೆಯುತ್ತಿರುವುದು ಕಾಣಬಹುದು. ಉತ್ತಮ ಇಳುವರಿಯನ್ನು ಕೂಡಾ ನಿರೀಕ್ಷೆ ಮಾಡಿದ್ದಾರೆ.

ಯಾಂತ್ರೀಕೃತ ಭತ್ತ ಬೇಸಾಯದಲ್ಲಿ ಬಹಳ ಪ್ರಮುಖವಾದುದು ನಾಟಿ. ಒಂದು ಎಕ್ರೆಗೆ 80 ಟ್ರೆ ಬೇಕಾಗುತ್ತದೆ. 16-18 ಕೆ.ಜಿ ಬಿತ್ತನೆ ಬೀಜ ಬೇಕಾಗುತ್ತದೆ.ಈ ಬೂದಿಯಲ್ಲಿ ನೇಜಿ ತಯಾರಿ ವಿಧಾನ ಈಗಾಗಲೇ ಕೃಷಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆಗಿದೆ. ಸಾಧಕ ಬಾಧಕಗಳ ಬಗ್ಗೆಯೂ ಅವಲೋಕನವಾಗುತ್ತಿದೆ. ಒಟ್ಟಾರೆಯಾಗಿ ರೈತರೊರ್ವರ ಪ್ರಯೋಗ ಅನ್ನದಾತರಿಗೆ ಇನ್ನಷ್ಟು ಭರವಸೆಯಾಗುವ ಸಂಭಾವ್ಯತೆ ಇದೆ.

ಮಾಹಿತಿಗೆ ರಾಘವೇಂದ್ರ ಅವರ ದೂರವಾಣಿ ಸಂಖ್ಯೆ 9900768679 ಸಂಪರ್ಕಿಸಬಹುದು.

“ಅಕ್ಕಿ ಗಿರಣಿಯ ಬೂದಿಯ ಮೂಲಕ ನೇಜಿ ತಯಾರಿ ರೈತರಿಗೆ ಸರಳವಾದುದು. ಮೊಳಕೆಯೊಡೆದ ಎಳೆಯ ನೇಜಿಗಳ ಬೆಳವಣಿಗೆಗೆ ಪ್ರಾರಂಭದಿಂದಲೇ ಯಥೇಚ್ಛ ಪ್ರಮಾಣದಲ್ಲಿ ಪೋಟ್ಯಾಶ್ ಅಂಶ ಸಿಗುವುದರಿಂದ ಸಸಿಗಳು ಬಲಿಷ್ಠವಾಗಿ ಬೆಳೆಯುತ್ತವೆ. ಬೂದು ಸಾಂಧ್ರವಲಯ ಜಾಳಾಗಿರುವುದರಿಂದ ಸುಲಲಿತವಾಗಿ ಬೇರು ಬಿಟ್ಟು ಬೇಗ ಬೆಳವಣಿಗೆ ಹೊಂದುತ್ತದೆ. ಮಣ್ಣು ಬಳಸಿ ಸಸಿಮಡಿ ತಯಾರು ಮಾಡಿದಕ್ಕಿಂತ ಬೇಗ ನಾಟಿ ಮಾಡುವುದು ಸೂಕ್ತ” -ರಾಘವೇಂದ್ರ ಹಾಲಾಡಿ, ಪ್ರಗತಿಪರ ರೈತ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!