Monday, September 9, 2024

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ | ರಾತ್ರೋರಾತ್ರಿ ಗುಂಡಿನ ದಾಳಿ, ಮನೆಯೊಂದಕ್ಕೆ ಬೆಂಕಿ ಹಚ್ಚಿ ಹಿಂಸಾಚಾರ !

ಜನಪ್ರತಿನಿಧಿ (ಮಣಿಪುರ) : ಗಲಭೆ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಜಿರಿಬಾಮ್‌ ಜಿಲ್ಲೆಯಲ್ಲಿಸಹಜ ಸ್ಥಿತಿ ನಿರ್ಮಾಣ ಮಾಡುವ ದೃಷ್ಟಿಯಲ್ಲಿ ಮೈತೇಯಿ ಹಾಗೂ ಹಮಾರ್‌ ಸಮುದಾಯಗಳ ನಡುವೆ ಮೊನ್ನ(ಗುರುವಾರ) ಮಾತುಕತೆ ನಡೆದಿತ್ತು. ಆದರೇ, ದಿನ ಕಳೆಯುತ್ತಿದ್ದಂತೆ ಗುಂಡಿನ ದಾಳಿ ಹಾಗೂ ಮನೆಯೊಂದಕ್ಕೆ ಬೆಂಕಿ ಹಂಚಿ ಹಿಂಸಾಚಾರವೆಸಗಿದ ಪ್ರಕರಣಗಳು ವರದಿಯಾಗಿವೆ ಎಂದು ಇಂದು(ಶನಿವಾರ) ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಲಾಲ್‌ಪಾನಿ ಗ್ರಾಮದಲ್ಲಿ ಯಾರೂ ವಾಸವಿಲ್ಲದ ಮನೆಯೊಂದಕ್ಕೆ ನಿನ್ನೆ(ಶುಕ್ರವಾರ) ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಕೆಲವು ಮೈತೇಯಿ ಕುಟುಂಬಗಳು ವಾಸವಿವೆ. ಜಿಲ್ಲೆಯಲ್ಲಿ ಹಿಂಸಾಚಾಋ ಭುಗಿಲೇಳುತ್ತಿದ್ದಂತೆ ಅವರೆಲ್ಲ, ಮನೆಗಳನ್ನು ತೊರೆದಿದ್ದರು. ಭದ್ರತಾ ವ್ಯವಸ್ಥೆಯಲ್ಲಿ ಉಂಟಾಗರುವುದರಿಂದ ಕಿಡಿಗೇಡಿಗಳು ಪರಿಸ್ಥಿಯಿಯ ಲಾಭ ಪಡೆದು ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಗ್ರಾಮವನ್ನು ಗುರಿಯಾಗಿಸಿ ಹಲವು ಸುತ್ತಿನ ಗುಂಡಿನ ದಾಳುನ್ನೂ ನಡೆಸಿದ್ದಾರೆ. ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದಿದ್ದಾರೆ.

ಮೈತೇಯಿ ಹಾಗೂ ಹಮಾರ್‌ ಸಮುದಾಯಗಳ ಮುಖಂಡರು ಅಸ್ಸಾಂನ ಚಛರ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಶಿಬಿರದಲ್ಲಿ ಸಭೆ ನಡೆಸಿದ್ದರು.

ಜಿರಿಬಾಮ್‌ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್‌, ಸಿಆರ್‌ಪಿಎಫ್‌ ಸಿಬ್ಬಂದಿ, ಥೌಡೌ, ಪೈತೇ ಮತ್ತು ಮಿಜೋ ಸಮುದಾಯಗಳ ಪ್ರತಿನಿಧಿಗಳೂ ಈ ಸಂದರ್ಭದಲ್ಲಿ ಸೇರಿದ್ದರು.

ಯಾವುದೇ ರೀತಿಯ ಹಿಂಸಾಕೃತ್ಯಗಳು ನಡೆಯದಂತೆ ಹಾಗೂ ಜಿಲ್ಲೆಯಲ್ಲಿ ಮರಳಿಸಹಜ ಸ್ಥಿತಿ ನಿರ್ಮಾಣ ಆಗುವುದಕ್ಕೆ ಬೇಕಾಗಿ ಮಾತುಕತೆ ನಡೆಸಲಾಗಿತ್ತು. ಅದಕ್ಕೆ ಸಹಕಾರ ನೀಡುವುದಾಗಿ ಎಲ್ಲಾ ಸಮುದಾಯಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದವು. ಆಗಸ್ಟ್‌ ೧೫ರಂದು ಮುಂದಿನ ಸಭೆ ನಡೆಸಲು ನಿಗದಿಯಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!