Sunday, September 8, 2024

ರಾಮ ಕ್ಷತ್ರೀಯ ಸಂಘ (ರಿ) ಗಂಗೊಳ್ಳಿ : ಮಕ್ಕಳಿಗೆ ವಿದ್ಯಾರ್ಥಿವೇತನಾ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ

ಜನಪ್ರತಿನಿಧಿ (ಗಂಗೊಳ್ಳಿ) : ದಿನಾಂಕ :07-07-2024 ಆದಿತ್ಯವಾರದಂದು ಶ್ರೀಸೀತಾರಾಮಚಂದ್ರ ಸಭಾಭವನದಲ್ಲಿ ರಾಮಕ್ಷತ್ರಿಯ ಸಂಘದ ವತಿಯಿಂದ ಗಂಗೊಳ್ಳಿ ಪರಿಸರ ವ್ಯಾಪ್ತಿಯ ಸ್ವಜಾತಿ ಸಮಾಜ ಭಾಂಧವರ ಮಕ್ಕಳಿಗೆ ವಿದ್ಯಾರ್ಥಿವೇತನಾ, ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ ಹಾಗೂ ಕೊಡೆ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ರಾಜೇಶ್ ಎಮ್. ಜಿ. ಯವರ ನೇತ್ರತ್ವದಲ್ಲಿ, ಮಹಿಳಾ ಮಂಡಳಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಭಾವೇದಿಕೆಯಲ್ಲಿ ಅತಿಥಿಗಳಾದ ಯುವಕ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ, ಮಹಿಳಾ ಮಂಡಳಿಯ ಅಧ್ಯಕ್ಷ ಮೀನಾಕ್ಷಿ ರಾಮಚಂದ್ರ ಹಾಗೂ ರಾಮಕ್ಷತ್ರೀಯ ಸಂಘದ ಉಪಾಧ್ಯಕ್ಷ ಗಂಗಾಧರ ಉಗ್ರಾಣಿ ಮತ್ತು ವಾಸುದೇವ ನಡುಮನೆ ಜೊತೆ ಕಾರ್ಯದರ್ಶಿಯಾಗಿ ಶ್ರೀನಿವಾಸ ಉಗ್ರಾಣಿ, ಪದಾಧೀಕಾರಿಗಳಾದ ದಿನೇಶ ಉಗ್ರಾಣಿ, ಶ್ರೀಧರ ಹೊಸ್ಮನೆ, ನಾಗೇಶ್ ಅಪ್ಪಯ್ಯನ ಮನೆ, ರಾಧಾಕೃಷ್ಣ ಕೊಡಪಾಡಿ, ಕಾರ್ಯದರ್ಶಿ ಶ್ರೀಧರ ಎನ್. ಸಕ್ಲಾತಿ ಹಾಗೂ ಯುವಕ – ಮಂಡಳಿಯ ಕಾರ್ಯದರ್ಶಿ ಸುರೇಶ ನಡುಮನೆಯವರು ಉಪಸ್ಥಿತರಿದ್ದರು.

ರಾಜೇಶ ಎಮ್. ಜಿ. ಸ್ವಾಗತಿಸಿದರು. ತಮ್ಮ ಪ್ರಸ್ತಾವಿಕ ಮಾತಿನಲ್ಲಿ ಸೀತಾರಾಮಚಂದ್ರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಅವರು ಆಗಸ್ಟ್ 17ನೇ ತಾರೀಖಿನಿಂದ ಸಪ್ಟೆಂಬರ್ 16 ನೇ ತಾರೀಖಿನ ವರೆಗೆ ಸಿಂಹ ಮಾಸದಲ್ಲಿ (ಸೋಣೆ ತಿಂಗಳು) ಸೀತಾರಾಮಚಂದ್ರ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷೀಣಾ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ವಿಷಯವನ್ನು ಪ್ರಸ್ತಾವಿಸಿ, ಸಮಾಜ ಬಾಂಧವರ ಏಳಿಗೆಗಾಗಿ ಸಹಕರಿಸಬೇಕಾಗಿ ವಿನಂತಿಸಿ ಶ್ರೀ ಸೀತಾರಾಮಚಂದ್ರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಂಡರು.

ನಂತರ P. U.C ಮತ್ತು S.S.L.C ಯಲ್ಲಿ 90% ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗೌರವ ಪೂರ್ವಕ ಸನ್ಮಾನ ಮಾಡಿ ಪ್ರೋತ್ಸಾಹ ಧನವನ್ನು ನೀಡಲಾಯಿತು. ಹಾಗೆಯೇ 8 ನೇ ತರಗತಿಯಿಂದ P.U.C ಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!