Wednesday, September 11, 2024

ಶ್ರೀರಾಮ ದೇವಸ್ಥಾನ ಕಂಚುಗೋಡು: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ ಸಮುದ್ರ ನೀರಾಜನ-ಸಾಗರೇಶ್ವರ ಪೂಜೆ

ಮರವಂತೆ: ಶ್ರೀರಾಮ ದೇವಸ್ಥಾನ ಕಂಚುಗೋಡು, ಹೊಸಾಡು ಇದರ ಸುವರ್ಣ ಸಂಭ್ರಮ -ಸಂತಷ ಸಂಗಮ ಏಪ್ರಿಲ್ 10ರಿಂದ 19 ಮತ್ತು 22-2024ರಂದು ಐತಿಹಾಸಿಕ ವೈಭವದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ ಸಮುದ್ರ ನೀರಾಜನ-ಸಾಗರೇಶ್ವರ ಪೂಜೆ ನಡೆಯಲಿದೆ.

ಏಪ್ರಿಲ್ 10 ಬುಧವಾರ ಕ್ಷೇತ್ರ ಪುರೋಹಿತರಾದ ರಾಘವೇಂದ್ರ ಭಟ್ ಕಿರಿಮಂಜೇಶ್ವರ ಇವರ ಪೌರೋಹಿತ್ಯದಲ್ಲಿ ಸಂಕಲ್ಪನಿಧಿ ಸಮರ್ಪಣೆ, ಸಂಜೆ 4 ಗಂಟೆಗೆ ರಜತ ಕವಚ ಸಮರ್ಪಣೆ ಹಾಗೂ ಪುರಮೆರವಣಿಗೆ, ಸಂಜೆ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಏ.11 ಗುರುವಾರ ಬೆಳಿಗ್ಗೆ 8 ಗಂಟೆಗೆ ಗಣಹೋಮ,, 9,15ಕ್ಕೆ ದೀಪಸ್ಥಾಪನೆ, ಮದ್ಯಾಹ್ನ 11.30ರಿಂದ ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟೆಗೆ ಧಾರ್ಮಿಕ ಉಪನ್ಯಾಸ, ಸಂಜೆ 6 ಗಂಟೆಗೆ ಸಪ್ತಾಹ ಭಜನಾ ಕಾರ್ಯಕ್ರಮ ಆರಂಭ, ಸಂಜೆ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಏ.12ರಂದು ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀನಾರಾಯಣ ಹೋಮ, ಮಧ್ಯಾಹ್ನ 11.30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟೆಗೆ ಸುಗಮ ಸಂಗೀತ, ಮಧ್ಯಾಹ್ನ 3.30ರಿಂದ ಹೊರೆಕಾಣಿಕೆ ಸಮರ್ಪಣೆ, ಸಂಜೆ 6 ಗಂಟೆಯಿಂದ ಭಜನಾ ಕಾರ್ಯಕ್ರಮ, ಸಂಜೆ 7ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಏ.13ರಂದು ಬೆಳಿಗ್ಗೆ 10 ಗಂಟೆಗೆ ಶ್ರೀರಾಮ ತಾರಕ ಹೋಮ, ಮಧ್ಯಾಹ್ನ 11.30ಕ್ಕೆ ಅನ್ನಸಂತರ್ಪಣೆ,, ಮಧ್ಯಾಹ್ನ 1 ಗಂಟೆಗೆ ಭಕ್ತಿ ರಸಮಂಜರಿ, ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ ಹಾಗೂ ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ ಪುರಮೆರವಣಿಗೆ, ಸಂಜೆ 7 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

ಏ.14ರಂದು ಬೆಳಿಗ್ಗೆ 10 ಗಂಟೆಗೆ ಪಂಚಮುಖಿ ಅಂಜನೇಯ ಹೋಮ, ಮಧ್ಯಾಹ್ನ 11.30ಕ್ಕೆ ಗಂಟೆಯಿಂದ ಅನ್ನಸಂತರ್ಪಣೆ, ಮಧ್ಯಾಹ್ನ 1 ಗಂಟೆಗೆ ಯಕ್ಷಗಾನ, ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಏ.15ರಂದು ಬೆಳಿಗ್ಗೆ 10 ಗಂಟೆಗೆ ವಿಷ್ಣು ಸಹಸ್ರನಾಮ ಹೋಮ, ಮಧ್ಯಾಹ್ನ 11.30ಕ್ಕೆ ಅನ್ನಸಂರ್ತಣೆ, ಮಧ್ಯಾಹ್ನ 3 ಗಂಟೆಗೆ ಜಗದ್ಗುರು ಶ್ರೀಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ನರಸೀಪುರ, ಹಾವೇರಿ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಡಾ.ಎ ಚನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಇವರ ನೇತೃತ್ವದಲ್ಲಿ ಸಮುದ್ರ ನೀರಾಜನ-ಸಾಗರೇಶ್ವರ ಪೂಜೆ ನಡೆಯಲಿದೆ. ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ, 7 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಏ.16ರಂದು ಬೆಳಿಗ್ಗೆ 10 ಗಂಟೆಗೆ ಶ್ರೀರಾಮ ಅಷ್ಟೋತ್ತರ ಸಹಸ್ರನಾಮ ಹೋಮ, 11.30ಕ್ಕೆ ಅನ್ನಸಂತರ್ಪಣೆ, 1 ಗಂಟೆಗೆ ಸುಗಮ ಸಂಗೀತ, ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, 7 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಏ.17ರಂದು ಬುಧವಾರ ರಾಮನವಮಿ, ಸೂರ್ಯೋದಯದಿಂದ ಅಖಂಡ ಭಜನಾ ಕಾರ್ಯಕ್ರಮ, ಬೆಳಿಗ್ಗೆ 10 ಗಂಟೆಯಿಂದ ಸತ್ಯನಾರಾಯಣ ಪೂಜೆ, 11.30ಕ್ಕೆ ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಪುರಮೆರವಣಿಗೆ, ಸಂಜೆ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ.

ಏ.18ರಂದು ಬೆಳಿಗ್ಗೆ 6 ಗಂಟೆಗೆ ಅಖಂಡ ಭಜನಾ ಹಾಗೂ ಸಪ್ತಾಹ ಭಜನಾ ಮಂಗಲೋತ್ಸವ, ಶ್ರೀರಾಮತಾರಕ ಮಹಾಮಂತ್ರ ಹೋಮ, ಮಧ್ಯಾಹ್ನ 11.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಐತಿಹಾಸಿಕ ವೈಭವದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ, ಸಂಜೆ 7 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಏ.19ರಂದು ಸಂಜೆ 7 ಗಂಟೆಗೆ ಅನ್ನಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ನಿಧಿ ಕಲಾವಿದರು ಉಡುಪಿ ಇವರಿಂದ ನಾಟಕ ಅಪ್ಪೆ ಮಂತ್ರದೇವತೆ ಪ್ರದರ್ಶನಗೊಳ್ಳಲಿದೆ.

ಏ.22ರಂದು ಮಧ್ಯಾಹ್ನ 11.30ಕ್ಕೆ ಅನ್ನಸಂತರ್ಪಣೆ, ಸಂಜೆ 3 ಗಂಟೆಗೆ ಶ್ರಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಮಹಾಸನ್ನಿಧಾನಂಗಳವರ ಆಶೀರ್ವಚನ ನಡೆಯಲಿದೆ.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!