Saturday, September 14, 2024

ʼಇಂಡಿಯಾʼ ಮೈತ್ರಿಕೂಟ ಹಿಂದೂ ಧಾರ್ಮಿಕ ನಂಬಿಕೆಯನ್ನು ಅವಮಾನಿಸುತ್ತಿದೆ : ಪ್ರಧಾನಿ ಮೋದಿ

ಜನಪ್ರತಿನಿಧಿ (ತಮಿಳುನಾಡು ) : ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟದ ನಾಯಕರು ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ನಂಬಿಕೆಯನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ʼಶಕ್ತಿʼ ಹೇಳಿಕೆಗೆ ತಿರುಗುಬಾಣ ಬಿಟ್ಟಿದ್ದಾರೆ.

ತಮಿಳುನಾಡಿನ ಸೇಲಂನಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ಮೋದಿ, ಕಾಂಗ್ರೆಸ್‌ ಹಾಗೀ ಡಿಎಂಕೆ ಉದ್ದೇಶಪೂರ್ವಕವಾಗಿ ಯೋಜಿತವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿವೆ. ಆ ಪಕ್ಷಗಳು ಬೇರೆ ಯಾವುದೇ ಪಕ್ಷಗಳನ್ನು ಗುರಿಯಾಗಿಸಿ ಹೀಗೆ ಟೀಕೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ʼಶಕ್ತಿʼ ಎಂದರೇ ಹಿಂದೂ ಧರ್ಮದಲ್ಲಿ ಮಾತೃ ಶಕ್ತಿ, ನಾರಿ ಶಕ್ತಿ. ಆದರೇ ಕಾಂಗ್ರೆಸ್‌ ಹಾಗೂ ಡಿಎಂಕೆ ಸೇರಿದ ʼಇಂಡಿಯಾʼ ಮೈತ್ರಿಕೂಟವು ʼಶಕ್ತಿʼಯನ್ನು ನಾಶಗೊಳಿಸಲು ಬಯಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.

ʼಶಕ್ತಿʼ ದೈವಿಕ ಸಂಕೇತ. ಮಾರಿಯಮ್ಮನ್‌, ಮಧುರೈ ಮೀನಾಕ್ಷಿಯಮ್ಮನ್‌ ಹಾಗೂ ಕಂಚಿ ಕಾಮಾಕ್ಷಿಯಂತಹ ವಿವಿಧ ದೇವತೆಗಳ ರೂಪದಲ್ಲಿ ಆರಾಧಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರಕವಿ ಸುಬ್ರಹ್ಮಣ್ಯ ಭಾರತಿ ಅವರು ಭಾರತ ಮಾತೆಯನ್ನು ಶಕ್ತಿ ಎಂದು ಪೂಜಿಸಿದರು. ಶಕ್ತಿಯನ್ನು ನಾಶಪಡಿಸುವವರಿಗೆ ತಮಿಳುನಾಡಿನ ಜನತೆ ತಕ್ಕ ಶಿಕ್ಷೆ ನೀಡಲಿದ್ದಾರೆ. ನಾನು ಶಕ್ತಿ ಉಪಾಸಕ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!