Saturday, October 12, 2024

ಸಹಕಾರ ಮನೋಭಾವದಿಂದ ಆರ್ಥಿಕ ಅಭಿವೃದ್ಧಿ- ಆಲ್ಬನ್ ಡಿಸೋಜ

ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾರ್ಕಳ ಶಾಖೆ ಉದ್ಘಾಟನೆ

ಕಾರ್ಕಳ: ಇತ್ತೀಚೆಗಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅತ್ಯುನ್ನತ ಪರಿಭಾಷೆ, ಅತ್ಯುನ್ನತ ಅಭಿವೃದ್ಧಿ, ವೈಯಕ್ತಿಕ ಅಭಿವೃದ್ಧಿ, ಕುಟುಂಬದ ಅಭಿವೃದ್ಧಿ, ಪ್ರಾಂತ್ಯ ದೇಶದ ಅಭಿವೃದ್ಧಿ, ಈ ಬ್ಯಾಂಕಿಂಗ್ ಮೂಲಕ ಉದ್ಯಮದ ಮೂಲಕ ಆಗುತ್ತಾ ಇದೆ. ಹಣ ಇದ್ದವರು ಇಲ್ಲದವರಿಗೆ ಕೊಟ್ಟು ಸಹಕಾರ ಮಾಡುವುದು ಅಂದರೆ ಇದ್ದವರು ಠೇವಣಿ ಇರಿಸಿ ಇಲ್ಲದವರು ಇಲ್ಲಿಂದ ಅದನ್ನು ಸಾಲದ ರೂಪದಲ್ಲಿ ಪಡೆದು ವ್ಯವಹಾರ ನಡೆಸಿ ಅಭಿವೃದ್ಧಿ ಹೊಂದುವ ಸಹಕಾರ ಮನೋಭಾವದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಕಾರ್ಕಳ ಅತ್ತೂರು, ಸಂತ ಲಾರೆನ್ಸ್ ಬಸಿಲಿಕಾ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜ ಹೇಳಿದರು.

ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 12ನೇ ಶಾಖೆಯು ಕಾರ್ಕಳದ ಮಿನಿ ವಿಧಾನಸೌಧ ರಸ್ತೆ ತಾಲೂಕು ಆಫೀಸ್ ಹತ್ತಿರ, ವಿಶಾಲ ಕಟ್ಟಡದ ನೆಲಮಹಡಿಯಲ್ಲಿ ಆರಂಭಗೊಂಡಿದ್ದು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ತ್ವರಿತ ವೇಗದಲ್ಲಿ ದಾಪುಗಾಲು ಹಾಕುತ್ತ ಇದ್ದು, ಇಂದು ಕಾರ್ಕಳದ ಜನತೆಗೆ ಲೋಕಾರ್ಪಣೆ ಮಾಡಿದೆ. ಈ ಸಂಸ್ಥೆಗೆ ಉಜ್ವಲ ಭವಿಷ್ಯವನ್ನು ಹೊಂದಲಿ ಎಂದರು.

ಕ್ರೈಸ್ಟ್ ದಿ ಕಿಂಗ್ ಚರ್ಚ್ ಕಾರ್ಕಳದ ವಂದನೀಯ ಕ್ಲೈಮೆಂಟ್ ಮಸ್ಕರೇನ್ಹಸ್ ಇವರು ಶಾಖೆಯನ್ನು ಆಶೀರ್ವದಿಸಿ ’ಧನ ಇರುವುದು, ಅದು ಉಪಯೋಗಕ್ಕಾಗಿ, ಕೂಡಿಸಿಟ್ಟು ಒಳಗಿಟ್ಟರೆ ಅದು ನಡೆಯುವುದಿಲ್ಲ ಚಲಾವಣೆ ಆಗಬೇಕು ಧನವನ್ನು ಹಂಚಿ ಎಲ್ಲರಿಗೂ ಉಪಕಾರ ಆದರೆ ಅದಕ್ಕೆ ಹಣ ಎಂದು ಹೆಸರು ಕೊಡಬಹುದು ಇಲ್ಲದಿದ್ದರೆ ಹಣಕ್ಕೆ ಏನು ಬೆಲೆಯೂ ಇಲ್ಲ ಅದಕ್ಕೆ ಬೆಲೆ ಕೊಡುಬೆಕು, ನೀವು, ಸಮಾಜದ ಪರಿವರ್ತನೆಗಾಗಿ, ಒಳಿತಿಗಾಗಿ ಇದು ಸದಾ ನೀವು ವ್ಯಯಿಸಿ ಅಂತ ಹಾರೈಸಿ ಭಗವಂತನ ಆಶೀರ್ವಾದ ಸದಾ ನಿಮ್ಮೆಲ್ಲರಲ್ಲಿ ಇರಲಿ ಎಲ್ಲರಿಗೂ ಒಳಿತನ್ನು ಕೋರುತ್ತೇನೆ’ ಎಂದು ಶುಭ ಹಾರೈಸಿದರು.

ಶಾಖೆಯ ಭದ್ರತಾ ಕೊಠಡಿಯನ್ನು ಕುಕ್ಕಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಥಾಮಸ್ ಮಸ್ಕರೇನಸ್ ಉದ್ಘಾಟಿಸಿದರು. ಗಣಕಯಂತ್ರವನ್ನು ಕ್ರೈಸ್ಟ್ ದ ಕಿಂಗ್ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ನೇವಿಲ್ ಡಿಸಿಲ್ವರವರು ಉದ್ಘಾಟಿಸಿ, ಈ ಪರಿಸರದಲ್ಲಿ ರೋಜರಿ ಸೊಸೈಟಿಯ ೧೨ ನೇಯ ಶಾಖೆಯಾಗಿದೆ ಇದು ನಮಗೆ ಬಹಳ ಹೆಮ್ಮೆಯ ವಿಷಯ ಇದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ನಾವೆಲ್ಲರೂ ಸೇರಿ ಈ ಸಂಸ್ಥೆಗೆ ಉತ್ತಮ ವ್ಯವಹಾರವನ್ನು ನೀಡಿ ಉನ್ನತ ಮಟ್ಟಕ್ಕೆ ಏರಲು ಕೈ ಜೋಡಿಸೋಣ’ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಸಂಘದ ಅಧ್ಯಕ್ಷರಾದ ಜೋನ್ಸನ್ ಡಿ ‘ ಅಲ್ಮೇಡಾ ಸ್ವಾಗತಿಸಿ, ಕಾರ್ಕಳ, 32 ವರ್ಷಗಳ ಇತಿಹಾಸ , 155 ಕೋಟಿಗೂ ಮಿಕ್ಕಿ ಠೇವಣಿ, 130 ಕೋಟಿ ಸಾಲ, 186 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ಸ್ಥಾಪನೆಯದ ವರ್ಷದಿಂದ ನಿರಂತರ ಡಿವಿಡೆಂಡ್ ನೀಡುತ್ತಿದೆ ಇದೆ ಎಂದರು.

ಉಪಾಧ್ಯಕ್ಷರಾದ ಕಿರಣ್ ಮೇಲ್ವಿನ್ ಲೋಬೋ ಅತಿಥಿಗಳನ್ನು ಗೌರವಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಮೇಬಲ್ ಡಿ‌ಆಲ್ಮೇಡಾ, ನಿರ್ದೇಶಕರಾದ ಫಿಲಿಪ್ ಡಿ’ಕೋಸ್ತಾ, ವಿಲ್ಸನ್ ಡಿ’ ಸೋಜಾ, ಪ್ರಕಾಶ್ ಲೋಬೋ, ಒಜ್ಲಿನ್ ರೆಬೆಲ್ಲೊ, ಶ್ರೀ ಟೆರೆನ್ಸ್ ಸುವಾರಿಸ್, ಶ್ರೀ ಮೈಕಲ್ ಪಿಂಟೋ, ಶ್ರೀಮತಿ ಡಯಾನ ಅಲ್ಮೇಡಾ, ಶ್ರೀಮತಿ ಶಾಂತಿ ಡಾಯಸ್ ಉಪಸ್ಥಿತರಿದ್ದರು. ಶಾಖಾ ಸಭಾಪತಿ ಓಜ್ವಾಲ್ಡ್ ಸಂತೋಷ್ ಡಿ’ಸಿಲ್ವ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!