Saturday, July 27, 2024

ಶಿರೂರು: ಪಿ‌ಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಮೇಳ

ಬೈಂದೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಪಿ‌ಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಈ ಶಾಲೆಯಲ್ಲಿ ವಿಶೇಷವಾಗಿ ಫೆಬ್ರವರಿ 28ರಂದು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಶಾಲಾ ಆವರಣದಲ್ಲಿ ‘ತಳವಿಲ್ಲದ ಬಾವಿ’ innovative and informative selfie corner ಸುಂದರವಾದ ಮನಸೂರೆಗೊಳ್ಳುವ ವಿಜ್ಞಾನ ವಿಶೇಷ ಮಾದರಿಗಳ, ರಂಗೋಲಿಗಳ ಚಿತ್ತಾರ 150ಕ್ಕೂ ಹೆಚ್ಚು ಮಾದರಿಗಳನ್ನು ಒಳಗೊಂಡ ವಿಜ್ಞಾನ ಮತ್ತು ಗಣಿತ ಮೇಳಗಳನ್ನು ಆಯೋಜಿಸಲಾಗಿತ್ತು.


ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಪೂಜಾರಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಸಿ.ವಿ. ರಾಮನ್ ರವರ ಕೊಡುಗೆ ಶ್ಲಾಘನೀಯ. ಈ ರೀತಿಯ ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಿ ಇದೊಂದು ಉತ್ತಮವಾದ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಉಷಾ ಜನಾರ್ಧನ್ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಹೊಸ್ಮನೆ, ಎಸ್.ಡಿ.ಎ.ಸಿ ಅಧ್ಯಕ್ಷರಾದ ಎಚ್.ಎಸ್. ಕುಮಾರ ಶೆಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಘುವೀರ್ ಶೇಟ್, ಶಿಕ್ಷಣ ಇಲಾಖೆಯ ನಾಗರತ್ನ ಸಿ.ಆರ್.ಪಿ ವಿಶ್ವನಾಥ್ ಮೇಸ್ತ, ಮಹಾದೇವ ಬಿಲ್ಲವ ಮುಖ್ಯ ಶಿಕ್ಷಕರು ನಾಯ್ಕನಕಟ್ಟೆ, ಮಾಧವ ಬಿಲ್ಲವ ಮುಖ್ಯ ಶಿಕ್ಷಕರು ಆಲಂದೂರು, ಶಂಕರ್ ಶಿರೂರು, ಮುಖ್ಯ ಶಿಕ್ಷಕರು ಪಿ‌ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೋಮರಾಯ ಜನ್ನು ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶಂಕರ ಸ್ವಾಗತಿಸಿದರು. ಚಂದ್ರ ನಾರಾಯಣ ಬಿಲ್ಲವ ವಂದಿಸಿದರು.

ವಿಜ್ಞಾನ ಮತ್ತು ಗಣಿತ ಮೇಳ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ವೈವಿಧ್ಯಮಯ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಅದರ ವಿವರಣೆಯನ್ನು ವೀಕ್ಷಕರಿಗೆ ಒದಗಿಸಿದರು. ಹೊಸ ಹೊಸ ಶೈಕ್ಷಣಿಕ ಪ್ರಯೋಗಗಳನ್ನು ನಡೆಸುತ್ತಾ ಬಂದಿರುವ ಈ ಶಾಲೆಯು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಪರಿಣಾಮಕಾರಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ವಿದ್ಯಾಭಿಮಾನಿಗಳು, ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!