Sunday, September 8, 2024

ಮೊಹಮ್ಮದ್ ಆಸೀಫ್ ಅವರಿಗೆ ವಿಶ್ವಮಾನ್ಯ ಅಂತರರಾಷ್ಟ್ರೀಯ ಪ್ರಶಸ್ತಿ 2024

ಕುಂದಾಪುರ: ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಅನಿವಾಸಿ ಕನ್ನಡಿಗರ ವೇದಿಕೆ ಸೌದಿ ಅರೇಬಿಯ ಒಟ್ಟಾಗಿ ಮೊದಲ ಬಾರಿಗೆ ಸೌದಿ ಅರೇಬಿಯದ ದಮಾಮ್ ನಲ್ಲಿ ಇದೆ ಫೆಬ್ರುವರಿ 8,9 ರಂದು ನಡೆಯುವ 17 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸೌದಿ ಅರೇಬಿಯದ ಅಲ್ ಮಿರ್ಝ ಕಾಂಟ್ರಕ್ಟಿಂಗ್ ಕಂಪೆನಿಯ ವ್ಯವಸ್ಥಾಪಕ, ಮಿಜಾರು ಆದರ್ಶ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ, ಸೌದಿ ಅರೇಬಿಯದ ಹಿದಾಯ ಫೌಂಡೇಶನ್ನಿನ ಸದಸ್ಯರಾಗಿರುವ ಮೊಹಮ್ಮದ್ ಆಸೀಫ್ ಅವರಿಗೆ ಬಡ ಹೆಣ್ಣು ಮಕ್ಕಳ ಉಚಿತ ಮದುವೆ ಸೇರಿದಂತೆ ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ವಿಶ್ವ ಮಾನ್ಯ ಪ್ರಶಸ್ತಿ 2024 (GLOBAL MAN AWARD 2024 ) ನ್ನು ನೀಡಿ ಗೌರವಿಸಲಾಗುತ್ತದೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ. ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಬಾಷೆಯನ್ನು ಅನಿವಾಸಿ ಕನ್ನಡಿಗರಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು. ಈ ಕಾರ್ಯಕ್ರಮದಲ್ಲಿ ಉದ್ಯಮಗೋಷ್ಠಿ, ಕವಿಗೋಷ್ಠಿ .ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕರ್ನಾಟಕದಿಂದ ಕಲಾವಿದರು, ಸಾಹಿಗಳು, ಸಚಿವರು ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸುತ್ತಿದ್ದು ಈ ಸಮ್ಮೇಳನವನ್ನು 2004 ರಿಂದ ವಿವಿಧ ದೇಶಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದವೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!