spot_img
Wednesday, January 22, 2025
spot_img

ಹರೆಗೋಡು: ಕರಾಟೆ ರಾಷ್ಟ್ರ, ರಾಜ್ಯಮಟ್ಟದ ಪದಕ ವಿಜೇತೆ ಚಿರಸ್ವಿಗೆ ಸನ್ಮಾನ

ಕುಂದಾಪುರ: ಹರೆಗೋಡು, ಹುಲಿಕೆರೆ ಶ್ರೀ ಮಲಯಾಳ ಬೊಬ್ಬರ್ಯ ಹಾಗೂ ಕೆಂಪಣ್ಣ ಹಾಗುಳಿ ಸಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವ ಹಾಲು ಹಬ್ಬ ಜ.24ಮತ್ತು 25ರಂದು ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೇ.ಮೂ. ಮಂಜುನಾಥ್ ಭಟ್ ಹರೆಗೋಡು ಅಧ್ಯಕ್ಷೀಯ ಮಾತುಗಳನ್ನಾಡಿ, ಒಂದು ದೈವಸ್ಥಾನ ವೃದ್ದಿ ಆಗಬೇಕಾದರೆ ಐದು ವಿಚಾರಗಳು ಮುಖ್ಯವಾಗಿ ಬೇಕಾಗುತ್ತದೆ. ಅರ್ಚಕರ ಭಕ್ತಿಭಾವದ ಪೂಜೆ ಮಂತ್ರಘೋಷ ಶುದ್ಧಾಚಾರ ನಿಯಮಗಳನ್ನು ಪಾಲಿಸುವುದು ಉತ್ಸವಗಳನ್ನು ಮಾಡುವುದು ಹಾಗು ಅನ್ನಸಂತರ್ಪಣೆಗಳು ನಡೆದಾಗ ಆ ಕ್ಷೇತ್ರ ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಐದು ವರ್ಷ ಪ್ರಾಯದಲ್ಲಿಯೇ ಕರಾಟೆಯಲ್ಲಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಚಿರಸ್ವಿ ಅವರನ್ನು ಸನ್ಮಾನಿಸಲಾಯಿತು.

ಲಕ್ಷ್ಮೀನಾರಾಯಣ ಗಾಣಿಗ ಹೊಳ್ಳರಮನೆ ಹಾಗೂ ಹೊಳ್ಳರಮನೆ ಕುಟುಂಬಸ್ಥರು ಪ್ರಾಯೋಜಿಸಿದ ಹರೆಗೋಡು ಹೊಳ್ಳರಮನೆ ದಿ|ರಾಮ ಗಾಣಿಗ ಪ್ರಶಸ್ತಿಯನ್ನು ಹವ್ಯಾಸಿ ಯಕ್ಷಗಾನ ಕಲಾವಿದ ಶಂಕರ ಪೂಜಾರಿ ಕಟ್‌ಬೇಲ್ತೂರು ಇವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀನಿವಾಸ್ ಗಾಣಿಗ ಹೊಳ್ಳರಮನೆ ಹರೆಗೊಡು, ದಿನೇಶ್ ಗಾಣಿಗ ಹೊಳ್ಳರಮನೆ ಹರೆಗೋಡು, ಭಾಸ್ಕರ್ ಪೂಜಾರಿ ಹುಲಿಕೆರೆ, ಗೋಪಾಲ ಗಾಣಿಗ ಹೊಳ್ಳರಮನೆ ಹರೆಗೊಡು, ದೈವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಗಾಣಿಗ ಹೊಳ್ಳರಮನೆ, ಸುರೇಂದ್ರ ಪೂಜಾರಿ ಹುಲಿಕೆರೆ, ದೈವಸ್ಥಾನದ ಅಧ್ಯಕ್ಷರಾದ ಸತೀಶ್ ಗಾಣಿಗ ಹರೆಗೋಡು, ಏಕದಂತ ಸಮಿತಿಯ ಪ್ರದೀಪ್ ಜಿ.ಶ್ರೀಯಾನ್, ರಾಜು ಗಾಣಿಗ ಹೊಳ್ಳರಮನೆ, ರವಿ ಗಾಣಿಗ ಹೊಳ್ಳರಮನೆ ಉಪಸ್ಥಿತರಿದ್ದರು.

ಮಹಾವಿಷ್ಣು ದೇವಸ್ಥಾನಕ್ಕೆ ರಜತ ಕವಚವನ್ನು ಸಮರ್ಪಣೆ ಮಾಡಿದ ಶ್ರೀಮತಿ ತಿಲೋತ್ತಮ ಹಾಗೂ ಸೀತಾರಾಮ ಹೆಬ್ಬಾರ್ ಹಾಗೂ ಅನ್ನದಾನ ಸೇವಾಕರ್ತರಾದ ಶ್ರೀಮತಿ ಸಾವಿತ್ರಿ ರವಿ ಗಾಣಿಗ ಹೊಳ್ಳರ ಮನೆ ಇವರನ್ನು ಗೌರವಿಸಲಾಯಿತು.

ದೈವಸ್ಥಾನದ ಕಾರ್ಯದರ್ಶಿ ಪ್ರದೀಪ್ ಹರೆಗೋಡು ಹೊಳ್ಳರಮನೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!