Sunday, September 8, 2024

ಹೆಬ್ಬಾಳ್ಕರ್‌ ವಿರುದ್ಧ ʼಕೈʼ ಕಾರ್ಯಕರ್ತರ ಆಕ್ರೋಶ | ಪತ್ರಕರ್ತರನ್ನು ಹೊರದಬ್ಬಿದ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌  

ಜನಪ್ರತಿನಿಧಿ ವಾರ್ತೆ (ಕುಂದಾಪುರ) : ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಬ್ಲಾಕ್‌  ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಈವರೆಗೆನ ಪತ್ಯೇಕವಾಗಿ ಕಾಂಗ್ರೆಸ್‌ ಕಾರ್ಯಕರ್ತರ ಸಂಪರ್ಕಕ್ಕೆ ದೊರಕದ ಲಕ್ಷ್ಮೀ ಹೆಬ್ಬಾಳ್ಕರ್‌ ಇಂದು(ಶನಿವಾರ) ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ ನೋಡಿ ತಬ್ಬಿಬ್ಬಾದರು. ಇದು ಪತ್ರಕರ್ತರ ಮುಂದೆಯೇ ನಡೆದಿರುವ ಕಾರಣದಿಂದಲೇ ಹೆಬ್ಬಾಳ್ಕರ್‌ ಪತ್ರಕರ್ತರನ್ನು ಹೊರದಬ್ಬಿಸಿದರು ಎಂದು ತಿಳದು ಬಂದಿದೆ. ಮಾತ್ರವಲ್ಲದೇ, ʼಮೇಡಂ ಹೇಳಿದ್ದಾರೆ ಹೊರೆಗ ಹೋಗಿʼ ಎಂದು ಜಿಲ್ಲಾ ಕಾಂಗ್ರೆಸ್‌ ಕಾರ್ಯಧ್ಯಕ್ಷ ಕಿಶನ್‌ ಹೆಗ್ಡೆ ಮಾಧ್ಯಮದ ವಿಡಿಯೋಗ್ರಾಫರ್ ಗಳನ್ನು ಅಡ್ಡಗಟ್ಟುವಾಗ ಹೇಳಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ.   

ಉಸ್ತುವಾರಿ ಸಚಿವರ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು :

ಒಂದು ಬೂತ್‌ ಮಟ್ಟದಲ್ಲಿ ಒಬ್ಬ ಕಾರ್ಯಕರ್ತ ಇದ್ದಾನಾ, ಸತ್ತಿದ್ದಾನಾ ಎಂದು ಕೇಳುವುದಕ್ಕೆ ಉಸ್ತುವಾರಿ ಸಚಿವರು ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರು ಬೇಕಾ ಎಂದು ನೇರಾನೇರವಾಗಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಪ್ರಶ್ನೆ ಮಾಡುವ ಮೂಲಕ ಕಾರ್ಯಕರ್ತರು ಸಿಡಿದೆದ್ದರು.

ಬೂತ್‌ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತನ ಬಗ್ಗೆ ಯಾವ ಒಬ್ಬ ಕಾಂಗ್ರೆಸ್‌ ಲೀಡರ್‌ ವಿಚಾರಿಸಿಲ್ಲ. ರಾಜ್ಯ, ರಾಷ್ಟ್ರ ಮಟ್ಟದ ನಾಯಕತ್ವದಲ್ಲಿ ಒಮ್ಮತವೇ ಇಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರು ಒಗ್ಗಟ್ಟಾಗಬೇಕು ಅಂತ ಹೇಳುತ್ತೀರಿ. ಕಾರ್ಯಕರ್ತರ ಸಂಘಟನೆ ಆಗಬೇಕು ಎಂದು ಹೇಳುತ್ತೀರಿ. ನಾಯಕರು ಹೇಳಿದ್ದೆಲ್ಲಾ ಕೇಳುವುದಕ್ಕೆ ಕಾರ್ಯಕರ್ತರು ನಾಯಕರ ಕೂಲಿ ಆಳುಗಳಾ  ? ಎಂದು ಕಟುವಾಗಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದ ಘಟನೆ ನಡೆಯಿತು.

ಪತ್ರಕರ್ತರನ್ನು ಹೊರದಬ್ಬಿದ ಕಿಶನ್‌ ಹೆಗ್ಡೆ ಕೊಳ್ಕೆಬೈಲ್ :

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯ ವೇಳೆ ಕಾಂಗ್ರೆಸ್ ನಾಯಕರ ನಡೆಯಿಂದಾಗುತ್ತಿರುವ ಅಸಮಾಧಾನದ ವಿರುದ್ಧ ಕಾರ್ಯಕರ್ತರು ಮಾತನಾಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌ ಬಲವಂತವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮಗಳ ವಿಡಿಯೋಗ್ರಾಫರ್‌ಗಳನ್ನು ತಡೆದು ಹೊರ ಕಳುಹಿಸಿದ್ದಾರೆ. ಮಾತ್ರವಲ್ಲದೇ, ವರದಿಗಾಗಿ ಬಂದಿದ್ದ ಪತ್ರಿಕಾ ವರದಿಗಾರರಿಗೂ ಕೂಡ ಕಿಶನ್‌ ಹೆಗ್ಡೆ ಕೊಳ್ಳೆಬೈಲ್‌  ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು. ಈ ಬಗ್ಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಖಂಡಿಸಿದ್ದು, ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಕಾರ್ಯಾಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಕೊಳ್ಕೆಬೈಲ್‌ ವರ್ತನೆಗೆ ಆಕ್ರೋಶ ವ್ಯಕ್ತ ಪಡಿಸಿದ ಪತ್ರಕರ್ತರು :

ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಆಹ್ವಾನದ ಮೇರೆಗೆ ವರದಿಗಾಗಿ ತೆರಳಿದ್ದ ಪತ್ರಕರ್ತರು ವರದಿ ಮಾಡುತ್ತಿದ್ದಾಗ  ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಅಡ್ಡಿಪಡಿಸಿದ್ದರು. ಮಾಧ್ಯಮಗಳ ವಿಡಿಯೋಗ್ರಾಫರ್ಸ್‌ ಸಭೆಯನ್ನು ಚಿತ್ರೀಕರಣ ಮಾಡುತ್ತಿದ್ದ ವೇಳೆ ಕಿಶನ್‌ ಹೆಗ್ಡೆ ವೇದಿಕೆಯಿಂದ ಇಳಿದುಬಂದು ಚಿತ್ರಿಕರಣವನ್ನು ಅಡ್ಡಗಟ್ಟಿದರು. ಹೀಗೆ ಚಿತ್ರೀಕರಣವನ್ನು ತಡೆಯುವುದಾದರೇ ವರದಿಗೆ ಕರೆದಿದ್ದು ಯಾಕೆ ಎಂದು  ಪ್ರಶ್ನಿಸಿದ ವರದಿಗಾರರನ್ನೂ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌ ಅವಮಾನಿಸಿ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ  ಕಿಶನ್‌ ಹೆಗ್ಡೆ ಬಹಿರಂಗವಾಗಿ ಪತ್ರಕರ್ತರ ಕ್ಷಮೆಯಾಚಿಸಬೇಕೆಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ  ಒತ್ತಾಯಿಸಿದೆ.

ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಲಕ್ಷ್ಮೀ ಹೆಬ್ಬಾಳ್ಕರ್‌ :

ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನಾ ಮಾಧ್ಯಮಗಳ ವರದಿಗಾರರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ವರದಿಗಾರರು ಒಬ್ಬರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದರು. ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಆರಂಭದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಸಭೆ ನಡೆಸಿದ್ದಾಗ ʼಜಿಲ್ಲೆಯಲ್ಲಿ ಒಂದೇ ಒಂದು ವಿಧಾನಸಭಾ ಕ್ಷೇತ್ರವನ್ನು ಪಡೆದುಕೊಳ್ಳುವುದಕ್ಕೆ ಆಗಿಲ್ಲ ನಿಮಗೆʼ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಸ್ವತಃ ಹೆಬ್ಬಾಳ್ಕರ್‌ ಅವರೇ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಲೋಕಸಭಾ ಚುನಾವಣೆಗೆ ತಯಾರಿ ಹೇಗಾಗುತ್ತಿದೆ ಎಂದು ಕೇಳಿದ ಪ್ರಶ್ನಗೆ ಸಚಿವರು ತಬ್ಬಿಬ್ಬಾಗಿ ಹಾರಿಕೆಯ ಉತ್ತರ ನೀಡಿ ಹೋದ ಘಟನೆಯೂ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!