spot_img
Wednesday, January 22, 2025
spot_img

ಕುಂದಾಪುರ ರೋಜರಿ ಚರ್ಚ್: ಇ-ಆಸ್ತಿ ತಂತ್ರಾಂಶದ ಸರಳೀಕರಣ ಪ್ರಕ್ರಿಯೆ ಮಾಹಿತಿ

ಕುಂದಾಪುರ: ಆಸ್ತಿ ತಂತ್ರಾಂಶವನ್ನು ಸರಳೀಕರಣ ಪ್ರಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮವು ಜನವರಿ 21 ರಂದು ಕುಂದಾಪುರ ಕಥೊಲಿಕ್ ಸಭಾ ಘಟಕದ ವತಿಯಿಂದ ಕುಂದಾಪುರ ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು.
ಸರ್ಕಾರದ ಆದೇಶದ ಅನ್ವಯ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳ ಹಾಗೂ ಖಾಲಿ ನಿವೇಶನಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ನಮೂದು ಮಾಡಿಕೊಳ್ಳುವ ಪ್ರಕ್ರಿಯೆ ಕೆಲವು ಸಮಯದ ಹಿಂದೆಯೇ ಆರಂಭವಾಗಿದೆ. ಇದು ಇನ್ನಷ್ಟು ವೇಗವಾಗಿ ಅನುಷ್ಟಾನಗೊಳಿಸ ಬೇಕಾದ ಕಾರಣ ಪುರಸಭಾ ವ್ಯಾಪ್ತಿಯಲ್ಲಿರುವ ಕುಂದಾಪುರ ರೋಜರಿ ಚರ್ಚಿನ ಕುಟುಂಬಗಳಿಗೆ ಮಾಹಿತಿ ನೀಡಲು ಕುಂದಾಪುರ ಪುರಸಭೆಯ ಕಂದಾಯ ಅಧಿಕಾರಿ ಅಂಜನಿ ಗೌಡ ಮಾಹಿತಿ ನೀಡಿದರು.

ಒಂದು ಸಲ ಇ-ಆಸ್ತಿಯ ಅಕೌಂಟ್ ಆರಂಭ ಆದಲ್ಲಿ ಮುಂದೆ ವಾರಿಸುದಾರರಿಗೆ ತೆರಿಗೆ ಕಟ್ಟಲು ಸುಲಭವಾಗುತ್ತದೆ. ದೂರವಿರುವ (ಪರವೂರಿನಲ್ಲಿರುವರಿಗೆ) ವಾರಿಸುದಾರರು ತೆರಿಗೆ ಕಟ್ಟಲು ಸುಲಭವಾಗುತ್ತದೆ. ಈ ಬಗ್ಗೆ ಸಲಹೆ ಸೂಚನೆ ನಾವು ನೀಡಲು ಸಿದ್ದರಿದ್ದೇವೆ ಎಂದು ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಲು ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ವಿವರಿಸಿದರು.

ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಪುರಸಭೆಯ ಸಹಾಯಕ ಕಂದಾಯ ಅಧಿಕಾರಿ ಸತೀಶ್ ಖಾರ್ವಿ, ಪುರಸಭೆಯ ತಾಂತ್ರಿಕ ವಿಭಾಗದ ಅರುಣ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಥೊಲಿಕ್ ಸಭಾದ ಪದಾಧಿಕಾರಿಗಳು, ಸದಸ್ಯರು ಮತ್ತು ಚರ್ಚಿನ ಜನತೆ ಹಾಜರಿತ್ತು.

ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಡಿ‌ಆಲ್ಮೇಡಾ ವಂದಿಸಿದರು. ಕಥೊಲಿಕ್ ಸಭಾದ ಪದಾಧಿಕಾರಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!